ಭಾರತದಲ್ಲಿ ಹೆಚ್ಚುತ್ತಿರುವ ಸ್ತ್ರೀ ಭ್ರೂಣ ಹತ್ಯೆ !

ಸ್ತ್ರೀ ಶಕ್ತಿಯನ್ನು ಕ್ಷೀಣಿಸುವ ಭ್ರೂಣಹತ್ಯೆ !
. ಪ್ರತಿವರ್ಷ ಜನನಪೂರ್ವ ದಲ್ಲೇ ಲಕ್ಷಗಟ್ಟಲೆ ಹೆಣ್ಣುಮಕ್ಕಳ ಹತ್ಯೆಯನ್ನು ತಡೆಯದಿರುವುದು ಭಾರತಕ್ಕೆ ಅಪಮಾನಕರ ಸಂಗತಿ ಜೀವನವು ಈಶ್ವರನ ವರದಾನ ವಾಗಿದ್ದು, ಎಲ್ಲರಿಗೂ ಬದುಕಲು ಸಮಾನ ಅಧಿಕಾರವಿದೆ. ಹೀಗಿರುವಾಗಲೂ, ‘ಗಂಡು ಮಗುವಾಗಬೇಕು, ಎನ್ನುವ ಮೋಹದಿಂದ ಭಾರತ ದಲ್ಲಿ ಪ್ರತಿವರ್ಷ ಲಕ್ಷಾಂತರ ಹೆಣ್ಣು ಮಗುವಿನ ಜನನದ ಮೊದಲೇ ಅದರ ಹತ್ಯೆ ಮಾಡಲಾಗುತ್ತಿದೆ. ಕೋಟಿಗಟ್ಟಲೆ ಹಣವನ್ನು ವೆಚ್ಚ ಮಾಡಿಯೂ ಸರಕಾರಕ್ಕೆ ಸಮಾಜದಲ್ಲಿ ನಡೆಯುತ್ತಿರುವ ಸ್ತ್ರೀ-ಭ್ರೂಣ ಹತ್ಯೆಯ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದು ಭಾರತದ ಗೌರವಕ್ಕೆ ಧಕ್ಕೆ ತರುವ ವಿಷಯವಾಗಿದೆ.
. ಆರ್ಥಿಕವಾಗಿ ಸಬಲರಾಗಿರುವ ಮನೆಗಳಿಂದಲೂ ಲಿಂಗಪರೀಕ್ಷೆಯನ್ನು ಮಾಡಿ ಹೆಣ್ಣು ಶಿಶುವಿನ ಹತ್ಯೆ !
ವಿಶೇಷವೆಂದರೆ ಆರ್ಥಿಕವಾಗಿ ಸಬಲರಾಗಿರುವ ಮನೆಗಳಲ್ಲಿಯೂ ಈ ವಿಕೃತಿಯು ಅಧಿಕ ಪ್ರಮಾಣ ದಲ್ಲಿದೆ. ನೇಟಲ್ ಡೈಗ್ನಾಸ್ಟಿಕ್ ಆಕ್ಟ್‌ಗನುಸಾರ ಮಗು ವಿನ ಲಿಂಗಪರೀಕ್ಷೆ ಮಾಡುವುದು ಅನಧಿಕೃತವಾಗಿದೆ. ಹೀಗಿರುವಾಗಲೂ ಈ ಕಾನೂನು ಅತ್ಯಧಿಕ ಪ್ರಮಾಣ ದಲ್ಲಿ ಉಲ್ಲಂಘನೆಯಾಗುತ್ತಿದೆ. ದೇಶದ ೩೨೮ ಜಿಲ್ಲೆ ಗಳಲ್ಲಿ ಹೆಣ್ಣು ಶಿಶುವಿನ ಜನನ ಪ್ರಮಾಣ ೯೫೦ ಕ್ಕಿಂತ ಕಡಿಮೆಯಿದೆ.
. ಪ್ರಚಲಿತವಿರುವ ಪದ್ಧತಿ ಮತ್ತು ಸಾಮಾಜಿಕ ವ್ಯವಸ್ಥೆಗಳಿಂದಾಗಿ ಗಂಡು ಮಗು ಮತ್ತು ಹೆಣ್ಣು ಮಗುವಿನ ವಿಷಯದಲ್ಲಿ ಜನರ ಅಯೋಗ್ಯ ವಿಚಾರ ಯುನಿಸೆಫ್ ಸಂಸ್ಥೆಯ ಸಮೀಕ್ಷೆಗನುಸಾರ ವಿಶ್ವದ ಜನಸಂಖ್ಯೆಯಲ್ಲಿ ಶೇ. ೧೦ ರಷ್ಟು ಮಹಿಳೆಯರ ಸಂಖ್ಯೆ ಕ್ಷೀಣಿಸಿದೆ. ಇದು ಅತ್ಯಂತ ಗಂಭೀರ ಮತ್ತು ಚಿಂತೆಯ ವಿಷಯವಾಗಿದೆ. ಸ್ತ್ರೀಯರ ಸಂಖ್ಯೆ ಕ್ಷೀಣಿಸಲು ಸ್ತ್ರೀ-ಭ್ರೂಣಹತ್ಯೆಯೇ ಕಾರಣವಾಗಿದೆ. ಸಮಾಜದ ಸಂಕುಚಿತ ಮಾನಸಿಕತೆ ಮತ್ತು ಅಂಧಶ್ರದ್ಧೆ ಗಳಿಂದಾಗಿ ಸಮಾಜವು ಗಂಡು ಮತ್ತು ಹೆಣ್ಣುಗಳಲ್ಲಿ ಭೇದವನ್ನು ಮಾಡುತ್ತದೆ. ಪ್ರಚಲಿತವಿರುವ ಪದ್ಧತಿ ಮತ್ತು ಸಾಮಾಜಿಕ ವ್ಯವಸ್ಥೆಗಳಿಂದಾಗಿ ಗಂಡು ಮತ್ತು ಹೆಣ್ಣಿನ ವಿಷಯದಲ್ಲಿ ಜನಸಾಮಾನ್ಯರ ವಿಚಾರ ವಿಕೃತ ಗೊಂಡಿದೆ. (ಆಧಾರ : ಶ್ರೀ. ಮಣಿಂದ್ರಕುಮಾರ ತಿವಾರಿ, ಸನಾತನವಾಣಿ, ವರ್ಷ ೩೧, ಸಂಚಿಕೆ ೨ (ಏಪ್ರಿಲ್ ೨೦೧೨) (ಗಂಡು ಜನಿಸುವುದು ಅಥವಾ ಜನಿಸದಿರುವುದು, ಪ್ರಾರಬ್ಧಕ್ಕನುಸಾರವಾಗಿ ನಿರ್ಧರಿಸಲ್ಪಡುತ್ತದೆ ! ಆದುದ ರಿಂದ ಹೆಣ್ಣೆಂದು ಗರ್ಭಪಾತವನ್ನು ಮಾಡಿಕೊಳ್ಳುವುದು ಪಾಪವೇ ಆಗಿದೆ ! - ಸಂಪಾದಕರು)
ಇತ್ತೀಚೆಗೆ ಸ್ತ್ರೀಭ್ರೂಣ ಹತ್ಯೆಯ ಪ್ರಮಾಣ ಹೆಚ್ಚಾಗಿದೆ. ಹಿಂದೂ ಧರ್ಮಕ್ಕನುಸಾರ ಸ್ತ್ರೀಭ್ರೂಣಹತ್ಯೆ ಪಾಪವಾಗಿದೆ. ಒಂದು ವೇಳೆ ಮಗುವಿನ ಜವಾಬ್ದಾರಿ ಯನ್ನು ಹೊರಲು ಸಿದ್ಧರಿಲ್ಲದಿದ್ದಲ್ಲಿ ಅಥವಾ ಮಕ್ಕಳೇ ಬೇಡವಾಗಿದ್ದಲ್ಲಿ, ಶಾರೀರಿಕ ಸಂಬಂಧದಿಂದ ದೂರವಿರ ಬೇಕು ಮತ್ತು ಬ್ರಹ್ಮಚರ್ಯೆಯನ್ನು ಪಾಲಿಸಬೇಕು. ಇಂದು ಕಾನೂನಿಗನುಸಾರವಾಗಿ ೩ ತಿಂಗಳುಗಳ ವರೆಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಇದೆ; ಆದರೆ ಕಾನೂನಿನಲ್ಲಿರುವ ಈ ಕಳ್ಳಮಾರ್ಗವನ್ನು ಉಪಯೋಗಿಸಿ ದೊಡ್ಡ ಪ್ರಮಾಣದಲ್ಲಿ ಸ್ತ್ರೀಭ್ರೂಣ ಹತ್ಯೆ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ಗರ್ಭಪಾತ ವನ್ನೇ ನಿಷೇಧಿಸಬೇಕು. - ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ (..೨೦೧೫)
ಭ್ರೂಣಹತ್ಯೆಯೆಂದರೆ ಒಂದು ವ್ಯಕ್ತಿಯ ಹತ್ಯೆ!
ಗರ್ಭವು ಕಾನೂನಿನ ದೃಷ್ಟಿಯಿಂದ ಒಬ್ಬ ವ್ಯಕ್ತಿಯಾಗಿದೆ. ಆದುದರಿಂದ ಗರ್ಭದ ಹತ್ಯೆ ಮಾಡುವುದೆಂದರೆ ಒಂದು ವ್ಯಕ್ತಿಯ ಹತ್ಯೆ ಮಾಡಿದಂತಾಗುವುದು. ಭ್ರೂಣ ಹತ್ಯೆ ಮಾಡುವವನಿಗೆ ಭಾರತೀಯ ದಂಡ ಸಂಹಿತೆಗನುಸಾರ ಗಲ್ಲುಶಿಕ್ಷೆಯನ್ನು ವಿಧಿಸಬೇಕು.’ (ಪಾಕ್ಷಿಕ ಆರ್ಯನೀತಿ, ೨೫..೨೦೧೫)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿ ಹೆಚ್ಚುತ್ತಿರುವ ಸ್ತ್ರೀ ಭ್ರೂಣ ಹತ್ಯೆ !