ಪ್ರತಿಯೊಂದು ವಿಷಯಕ್ಕೂ ಮಿತಿಯಿರುತ್ತದೆ, ಅದನ್ನು ಪಾಲಿಸಲೇಬೇಕು !

ಮಹಿಳೆಯರ ದೇವಸ್ಥಾನ ಪ್ರವೇಶದ ವಿಷಯದಲ್ಲಿ ಕಾಂಚೀ ಕಾಮಕೋಟಿ
ಪೀಠಾಧೀಶ್ವರ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಅಭಿಪ್ರಾಯ
ಚೆನ್ನೈ : ಕಾಂಚೀಪುರಮ್‌ನ ಕಾಂಚಿಕಾಮಕೋಟಿ ಪೀಠಾಧೀಶ್ವರ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ಇವರ ಸಂದರ್ಶನವು ಇತ್ತೀಚೆಗಷ್ಟೇ ರೆಡಿಫ್ ಡಾಟ್ ಕಾಮ್ ಈ ವಾರ್ತಾಜಾಲತಾಣದಲ್ಲಿ ಪ್ರಸಿದ್ಧವಾಗಿದೆ. ಈ ಸಂದರ್ಶನದಲ್ಲಿ ಅವರು ಅನೇಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದರು. ಈ ಸಂದರ್ಶನದ ಕೆಲವು ಸಂಕ್ಷಿಪ್ತ ಅಂಶಗಳನ್ನು ಮುಂದೆ ನೀಡುತ್ತಿದ್ದೇವೆ.
ಮಹಿಳೆಯ ದೇವಸ್ಥಾನ ಪ್ರವೇಶ
ಮಹಿಳೆಯರ ಮಂದಿರ ಪ್ರವೇಶದ ಸಮಸ್ಯೆಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಖಟ್ಲೆ ನಡೆಯುತ್ತಿದೆ, ಇದು ಅಯೋಗ್ಯವಾಗಿದೆ. ಗರ್ಭಗುಡಿಗೆ ಯಾರಿಗೂ ಪ್ರವೇಶ ಬೇಡ. ಅದರಲ್ಲಿ ಮಹಿಳೆಯರು, ಪುರುಷರೂ ಬಂದರು. ಮಹಿಳೆಯರನ್ನು ಮಂದಿರದ ಹೊರಗಿಡುವುದು ಹಿಂದೂ ಧರ್ಮದ ಪರಂಪರೆಯಲ್ಲ; ಆದರೆ ಎಲ್ಲದಕ್ಕೂ ಮಿತಿ ಇರುತ್ತದೆ ಅದನ್ನು ಪಾಲಿಸಲೇಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ್ರತಿಯೊಂದು ವಿಷಯಕ್ಕೂ ಮಿತಿಯಿರುತ್ತದೆ, ಅದನ್ನು ಪಾಲಿಸಲೇಬೇಕು !