ಶೇ. ೭೦ ರಷ್ಟು ಗೋವಂಶವು ನಿರುಪಯೋಗಿಯಾಗಿದೆ ಎಂದು ಹೇಳುವ ಪಾಶ್ಚಿಮಾತ್ಯರ ವಿಚಾರವನ್ನು ತ್ಯಜಿಸಿರಿ !

ಭಾರತದಲ್ಲಿನ ಶೇ. ೭೦ ರಷ್ಟು ಜಾನುವಾರುಗಳನ್ನು ನಿರುಪಯುಕ್ತ ಎಂದು ತಿಳಿಯಲಾಗುತ್ತ್ತದೆ. ಆದುದರಿಂದ ಅವುಗಳ ಹತ್ಯೆ ಮಾಡಿ ಅವುಗಳಿಗೆ ಮಾಡುವ ವೆಚ್ಚವನ್ನು ಉಳಿದ ಶೇ. ೩೦ ರಷ್ಟು ಪ್ರಾಣಿಗಳಿಗೆ ಮಾಡಬೇಕೆನ್ನುವ ಯುಕ್ತಿವಾದವನ್ನು ಇಂದು ಕೆಲವು ಜನರು ಮಾಡುತ್ತಿದ್ದಾರೆ. ಈ ವಾದದಲ್ಲಿ ಬಹುತೇಕ ಪಾಶ್ಚಾತ್ಯ ವಿಚಾರಸರಣಿಯ ಅರ್ಥತಜ್ಞರೇ ಇದ್ದಾರೆ. ಇವರು ಯಾವಾಗಲೂ ಮೇಲು ಮೇಲಿನ ಲಾಭವನ್ನಷ್ಟೇ ನೋಡುತ್ತಾರೆ; ಅವರು ಧಾರ್ಮಿಕ ದೃಷ್ಟಿಕೋನದಿಂದ ನೋಡುವುದಿಲ್ಲ. ಮೇಲಿನ ಯುಕ್ತಿವಾದವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ, ಅದರಲ್ಲಿನ ಮುಂದಿನ ಅನೇಕ ನ್ಯೂನತೆಗಳು ಸ್ಪಷ್ಟವಾಗುತ್ತವೆ.

. ಒಂದು ವೇಳೆ ನಾವು ನಮ್ಮ ಭೂಮಿಯನ್ನು ಸರಿಯಾಗಿ ಸಾಗುವಳಿ ಮಾಡಿದರೆ, ನಾವು ಹಾಗೂ ನಿರುಪಯುಕ್ತವೆಂದು ನಿರ್ಧರಿಸಲಾಗುವ ಪ್ರಾಣಿಗಳೂ ತಿಂದುಂಡು ಸುಖವಾಗಿರಬಹುದು.
. ಮೀನು, ಮಾಂಸ, ಅಮಲು ಪದಾರ್ಥಗಳು, ಲೇಮನ್ ಸೋಡಾ, ಫ್ಯಾಶನ್ನಿನ ಸಾಮಗ್ರಿ ಮುಂತಾದವುಗಳ ಮೇಲೆ ಅನಾವಶ್ಯಕ ಹಾಗೂ ಅಸ್ವಾಭಾವಿಕವಾಗಿರುವ ಅನೇಕ ವಿಷಯಗಳ ಮೇಲೆ ವೆಚ್ಚ ಮಾಡುವ ವ್ಯಕ್ತಿಗೆ ಅಮಾಯಕ ಪ್ರಾಣಿಗಳಿಗೆ ಹುಲ್ಲನ್ನೂ ಸಹ ಏಕೆ ಕೊಡಲು ಸಾಧ್ಯವಾಗುವುದಿಲ್ಲ?
. ಪ್ರಾಣಿಗಳಿಗೆ ನಾವು ಯಾವ ಆಹಾರವನ್ನು ನೀಡುತ್ತೇವೆಯೋ, ಅದರ ಬಹುತಾಂಶವನ್ನು ಭೂಮಿಗೆ ಉಪಯುಕ್ತವಾಗಿರುವ ಮಲ-ಮೂತ್ರಗಳ ಮೂಲಕ ಮರಳಿಸುತ್ತವೆ.
. ಮೇಲಿನ ಯುಕ್ತಿವಾದವನ್ನು ಒಂದು ವೇಳೆ ಒಪ್ಪಿಕೊಂಡರೂ, ಇವುಗಳಲ್ಲಿ ಒಳ್ಳೆಯ ಪ್ರಾಣಿಗಳು ಯಾವುವು ಹಾಗೂ ನಿರುಪಯುಕ್ತ ಪ್ರಾಣಿಗಳು ಯಾವುವು ಎಂದು ಹೇಗೆ ಗುರುತಿಸುವುದು? ಇದರಿಂದ ನಿಧಾನವಾಗಿ ಒಳ್ಳೆಯ ಪ್ರಾಣಿಗಳನ್ನೂ ಹತ್ಯೆ ಮಾಡಲಾಗುವುದು ಹಾಗೂ ಈ ರೀತಿ ಪ್ರಾಣಿಗಳ ವಂಶವೇ ಸಂಪೂರ್ಣ ನಾಶವಾಗಬಹುದು.
. ಶೇ. ೭೦ ರಷ್ಟು ಪ್ರಾಣಿಗಳ ಹತ್ಯೆಯನ್ನು ಮಾಡಿದರೆ ಸಮಾಜದಲ್ಲಿ ಮಾಂಸಾಹಾರ ಸೇವಿಸುವವರ ಸಂಖ್ಯೆ ಹೆಚ್ಚಾಗುವುದು. ನಿರುಪಯುಕ್ತ ಪ್ರಾಣಿಗಳ ಮಾಂಸವನ್ನು ತಿಂದಬಳಿಕ ಅವರು ಒಳ್ಳೆಯ ಉಪಯೋಗಿ ಪ್ರಾಣಿಗಳನ್ನೂ ಬಿಡಲಾರರು. ಈ ಕಾರಣದಿಂದಲೂ ಪ್ರಾಣಿಗಳ ವಂಶವು ನಿರ್ನಾಮವಾಗಬಹುದು.
. ನಾವು ಒಂದು ವೇಳೆ ನಿರುಪಯುಕ್ತ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸಿದರೆ, ಜನರು ತಮ್ಮ ಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಅವು ಅಶಕ್ತ ಅಥವಾ ನಿರುಪಯುಕ್ತವಾಗಲು ಬಿಡಲಾರರು. ಹೆಚ್ಚಿನ ನಿರುಪಯುಕ್ತ ಪ್ರಾಣಿಗಳನ್ನು ಸ್ವಲ್ಪ ಆರೈಕೆ ಮಾಡಿದರೆ ಅವು ಉಪಯೋಗಿಯಾಗುವವು.
. ಮಾಂಸಾಹಾರ ಸೇವನೆಯು ಶಾರೀರಿಕ ದೃಷ್ಟಿಯಿಂದ ಹಾನಿಕಾರಕವೆಂದು ದೃಢಪಟ್ಟಿದೆ. ಹೀಗಿರುವಾಗ ರೋಗದಿಂದ ಬಳಲುತ್ತಿ ರುವ ಹಾಗೂ ಅಶಕ್ತ ಪ್ರಾಣಿಗಳ ಮಾಂಸವನ್ನು ಸೇವಿಸುವುದು ಹೆಚ್ಚು ಅಪಾಯಕಾರಿಯಾಗುವುದು.
. ಆದುದರಿಂದ ಮೇಲಿನ ಯುಕ್ತಿವಾದವನ್ನು ಒಪ್ಪಿಕೊಂಡರೆ, ಅದರರ್ಥ ನಾವು ಪ್ರಾಣಿಗಳನ್ನು ಉಪಯುಕ್ತವಾಗಿರುವವರೆಗೆ ನೋಡಿ ಕೊಳ್ಳಬೇಕು ಹಾಗೂ ಅವುಗಳು ನಿರುಪಯುಕ್ತವಾದರೆ, ಅವುಗಳನ್ನು ಹತ್ಯೆಗೈಯಬೇಕು. ಹೀಗಾದರೆ, ಮಾನವನೂ ತನ್ನ ತಂದೆ-ತಾಯಿಗಳನ್ನು ಕಾಲಾಂತರದಲ್ಲಿ ನಿರುಪಯೋಗಿಯೆಂದು ನಿರ್ಧರಿಸಬಹುದು.
. ನಾವು ನೋಡುವ ದೃಷ್ಟಿಕೋನವೇ ತಪ್ಪಾಗಿರುವುದರಿಂದ ಅದರ ಪರಿಣಾಮವೂ ಅತ್ಯಂತ ಕೆಟ್ಟದಾಗಿಯೇ ಇರುತ್ತದೆ. - ಶ್ರೀ ಆನಂದ ವಜೀರಮಲ ದಾದಲಾನಿ (ಆಧಾರ: ಕಲ್ಯಾಣ, ಡಿಸೆಂಬರ್ ೧೯೪೭)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶೇ. ೭೦ ರಷ್ಟು ಗೋವಂಶವು ನಿರುಪಯೋಗಿಯಾಗಿದೆ ಎಂದು ಹೇಳುವ ಪಾಶ್ಚಿಮಾತ್ಯರ ವಿಚಾರವನ್ನು ತ್ಯಜಿಸಿರಿ !