ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
 
ಫಲಕ ಪ್ರಸಿದ್ಧಿಗಾಗಿ೧. ಹಿಂದೂಗಳೇ, ದರ್ಗಾಗೆ ಹೋಗುವುದಕ್ಕಿಂತ

ಸರ್ವಶಕ್ತಿಮಾನ ಹಿಂದೂ ದೇವತೆಗಳ ಮಹತ್ವವನ್ನು ಗಮನದಲ್ಲಿಡಿ !
ಕೆಲವು ಹಿಂದೂಗಳು ದರ್ಗಾಗೆ ಹೋಗಿ ಅಲ್ಲಿನ ಕಬರ್‌ಗೆ ಪೂಜೆ ಸಲ್ಲಿಸುತ್ತಾರೆ, ಇದು ಅಯೋಗ್ಯವಾಗಿದ್ದು ಅವರು ಕೇವಲ ತಮ್ಮದೇ ದೇವತೆಗಳ ಪೂಜೆ ಮಾಡಬೇಕು, ಎಂದು ಜಗದ್ಗರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಕರೆ ನೀಡಿದ್ದಾರೆ.


೨. ಹಿಂದೂ ಪರಂಪರೆಗಳನ್ನು ಬೂಟಾಟಿಕೆ ಎಂದು
ಹೀಯಾಳಿಸುವ ಬುದ್ಧಿಪ್ರಾಮಾಣ್ಯವಾದಿಗಳು ಈಗೇಕೆ ಸುಮ್ಮನಿದ್ದಾರೆ ?
ಜಪಾನ್ ಮೇಲೆ ಬಂದೆರಗುವ ನೈಸರ್ಗಿಕ ವಿಪತ್ತುಗಳು, ಜಪಾನ್ ಜನರಲ್ಲಿ ಹೆಚ್ಚುತ್ತಿರುವ ಚಿಂತೆ ಮತ್ತು ಯುವಕರ ಹೆಚ್ಚುತ್ತಿರುವ ಆತ್ಮಹತ್ಯೆಗಳನ್ನು ತಡೆಯಲು ಜಪಾನ್ ಸರಕಾರವು ೧೫೦ ಪಂಡಿತರಿಂದ ಯಜ್ಞ ಮಾಡಿಸಲಿದೆ. ಪ್ರಧಾನಿ ಮೋದಿಯವರು ಜಪಾನಿ ಪ್ರಧಾನಿಗೆ ಈ ಸಮಸ್ಯೆಗೆ ಆಧ್ಯಾತ್ಮಿಕ ಉಪಾಯ ಮಾಡುವ ಸಲಹೆ ನೀಡಿದ್ದರು.

೩. ಭಾರತೀಯ ಗಡಿಯಲ್ಲಿ ಪಾಕ್ ಬಂಕರ್ಸ್
ನಿರ್ಮಾಣವಾಗುವವರೆಗೆ ಭದ್ರತಾ ವ್ಯವಸ್ಥೆ ಏನು ಮಾಡುತ್ತಿತ್ತು ?
ಭಾರತದ ರಾಜಸ್ಥಾನ ಗಡಿಯಲ್ಲಿನ ಸಂವೇದನಾಶೀಲ ಪ್ರದೇಶಗಳಲ್ಲಿ ಪಾಕ್‌ನಿಂದ ಸುಮಾರು ೧೮೦ ಬಂಕರ್ಸ್ ಸಿದ್ಧ ಮಾಡಿರುವುದು ಕಂಡುಬಂದಿದೆ. ಪಾಕ್ ಇವುಗಳನ್ನು ಕೇವಲ ಹಿಂದಿನ ೧ ತಿಂಗಳಲ್ಲಿ ಮಾಡಿದ್ದು ಪುನಃ ೧೦೦ ಬಂಕರ್ಸ್‌ಗಳನ್ನು ತಯಾರಿಸುವ ಸಿದ್ಧತೆ ನಡೆಸಿದೆ.

೪. ಭ್ರಷ್ಟ ರಾಜಕಾರಣಿಗಳ ಮೇಲೆ
ಏಕಿಷ್ಟು ತತ್ಪರತೆಯಿಂದ ಕೃತಿ ಮಾಡುವುದಿಲ್ಲ ?
ಆದಾಯ ಇಲಾಖೆಯು ಸಿದ್ಧ ಪಡಿಸಿದ ವರದಿಗನುಸಾರ ಪೂಜ್ಯಪಾದ ಸಂತಶ್ರೀ ಆಸಾರಾಮಜಿ ಬಾಪೂ ಇವರಲ್ಲಿ ೨ ಸಾವಿರದ ೫೦೦ ಕೋಟಿ ರೂಪಾಯಿಗಳ ಸಂಪತ್ತು ಇರುವುದಾಗಿ ಹೇಳಿದೆ. ಅದಕ್ಕನುಸಾರ ಪೂಜ್ಯಪಾದ ಬಾಪೂ ಇವರ ಸಂಪತ್ತಿನ ಮೇಲೆ ಇಲಾಖೆಯು ೭೫೦ ಕೋಟಿ ರೂಪಾಯಿಗಳ ತೆರಿಗೆ ವಿಧಿಸಿದೆ.

೫. ಭಾರತ ಇನ್ನಾದರೂ ಪಾಕ್‌ಗೆ ಪಾಠ ಕಲಿಸಲಿದೆಯೇ ?
ಪಾಕ್ ಸೆರೆಮನೆಯಲ್ಲಿ ಎಪ್ರಿಲ್ ೧೧ ರಂದು ನಿಗೂಢವಾಗಿ ಮೃತಪಟ್ಟ ಭಾರತೀಯ ಕೈದಿ ಕಿರಪಾಲ ಸಿಂಹ ಇವರ ಮೃತದೇಹವನ್ನು ಭಾರತದಲ್ಲಿ ಶವವಿಚ್ಛೇದನೆ ಮಾಡಲಾಯಿತು. ಆಗ ಅದರಲ್ಲಿ ಹೃದಯ ಮತ್ತು ಜಠರ ಇಲ್ಲದಿರುವ ಆಘಾತಕಾರಿ ಮಾಹಿತಿಯು ಬಹಿರಂಗವಾಯಿತು. ಇದರ ಮೊದಲೂ ಪಾಕ್ ಇಬ್ಬರು ಭಾರತೀಯ ಸೈನಿಕರ ರುಂಡಗಳನ್ನು ಕತ್ತರಿಸಿತ್ತು.

೬. ಇನ್ನು ಕಾಶ್ಮೀರದಲ್ಲಿ ಸೇನೆಯನ್ನೂ ಹಿಂಪಡೆಯುವ
ದೇಶದ್ರೋಹಿಗಳ ಬೇಡಿಕೆಯನ್ನು ಒಪ್ಪುತ್ತದೆಯೇ ?
ಹಂದವಾಡಾ (ಕಾಶ್ಮೀರ)ದಲ್ಲಿರುವ ಸೇನೆಯ ೩ ಬಂಕರ್ಸ್‌ಗಳು ಎಪ್ರಿಲ್ ೧೧ ರಂದು ಸ್ಥಳೀಯ ಆಡಳಿತದಿಂದ ಹಿಂಪಡೆಯಲಾಯಿತು. ಬಂಕರ್ಸ್‌ನ ಭೌಗೋಲಿಕ ಸ್ಥಾನವು ಅತ್ಯಂತ ಮಹತ್ವಪೂರ್ಣವಿರುವುದಾಗಿ ಸೇನೆ ಹೇಳಿತ್ತು; ಆದರೆ ಇಲ್ಲಿನ ದೇಶದ್ರೋಹಿ ನಾಗರಿಕರು ಈ ಬಂಕರ್ಸ್‌ಗಳನ್ನು ತೆಗೆಯುವಂತೆ ಆಗ್ರಹಿಸಿದ್ದರು.

೭. ಮೈತುಂಬಾ ಬಟ್ಟೆಗಳನ್ನು ಧರಿಸುವುದರ ಮಹತ್ವ !
ಮೈತುಂಬಾ ಬಟ್ಟೆಗಳನ್ನು ಧರಿಸುವುದರಿಂದ ಚಳಿ, ಗಾಳಿ, ಬಿಸಿಲು ಮತ್ತು ಮಳೆಗಳಿಂದ ಶರೀರದ ಅವಯವಗಳ ರಕ್ಷಣೆಯಾಗುವುದರಿಂದ ಅವುಗಳ ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ ಮತ್ತು ಅವು ಆರೋಗ್ಯಶಾಲಿಯಾಗಿರುತ್ತವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !