ಮತ್ತೂರಿನಲ್ಲಾದ ಸೋಮಯಾಗದಲ್ಲಿ ಆಡು ಬಲಿ ಕೊಟ್ಟಿರುವ ಆರೋಪ !

ಈದ್‌ನಂತಹ ಹಬ್ಬಗಳಂದು ಲಕ್ಷಗಟ್ಟಲೆ ಆಡುಗಳನ್ನು ಬಲಿ ಕೊಡಲಾಗುತ್ತದೆ. ಆಗ ಚಕಾರವೆತ್ತದವರು ಯಜ್ಞದಲ್ಲಿ ಆಡನ್ನು ಬಲಿಕೊಡಲಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಕಾನೂನಿನ ಬಡಿಗೆಯನ್ನು ತೋರಿಸಲು ಏಕೆ ಮುಂದಾಗುತ್ತಾರೆ ? ಕಾನೂನು ಕೇವಲ ಹಿಂದೂಗಳ ಧಾರ್ಮಿಕ ಪರಂಪರೆಯ ಮೇಲೆ ಆಘಾತ ಮಾಡಲು ಇದೆಯೇ ಎಂಬ ಪ್ರಶ್ನೆ ಶ್ರದ್ಧಾವಂತ ಹಿಂದೂಗಳಲ್ಲಿ ಮೂಡಿದರೆ ಅದರಲ್ಲಿ ತಪ್ಪೇನಿದೆ ?
       ಯಾಗದಲ್ಲಿ ತುಪ್ಪವನ್ನು ಅರ್ಪಿಸಲು ಬಳಸುವ ಸೃಕ್- ಸೃವದ 
 ಚಿತ್ರವನ್ನು ಮಾಂಸ ಎಂದು ಅಪಪ್ರಚಾರಕ್ಕಾಗಿ ಬಳಸಿದ ಛಾಯಾಚಿತ್ರ 
       ೧, ವಾಸ್ತವಿಕ ಉಪಕರಣ ಚಿತ್ರ ೨ ಮತ್ತು ಚಿತ್ರ ೩ ನೋಡಿ
ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ಮತ್ತೂರು ಈ ಐತಿಹಾಸಿಕ ಗ್ರಾಮದಲ್ಲಿ ಏಪ್ರಿಲ್ ೨೨ ರಿಂದ ೨೬ ಈ ಅವಧಿಯಲ್ಲಿ ನಡೆದ ಸೋಮಯಾಗದಲ್ಲಿ ೮ ಆಡುಗಳ ಬಲಿ ನೀಡಿರುವ ಆರೋಪವಾಗುತ್ತಿದೆ. ಈ ಯಜ್ಞದ ಛಾಯಾಚಿತ್ರಗಳು ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಲಾಗಿದ್ದು ಅದರಲ್ಲಿ ಆಡನ್ನು ಬಲಿ ಕೊಡುವುದರೊಂದಿಗೆ ಉಪಸ್ಥಿತರು ತಥಾಕಥಿತ ಮದ್ಯ ಪ್ರಾಶನ ಮಾಡುತ್ತಿರುವಂತೆ ತೋರಿಸಲಾಗಿದೆ.
ಪ್ರಾಣಿ ಬಲಿ ನೀಡಿರುವ ತಥಾಕಥಿತ ವೀಡಿಯೊ ತುಣುಕು ಈಗ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅಗ್ನಿಯಲ್ಲಿ ಬೆಂದಿರುವ ತಥಾಕಥಿತ ಮಾಂಸವನ್ನು ಪ್ರಸಾದದ ರೂಪದಲ್ಲಿ ಸೇವಿಸಲಾಗಿದೆ ಎನ್ನುವುದು ಚರ್ಚೆಗೆ ಮತ್ತೊಂದು ಕಾರಣವಾಗಿದೆ.
ಮತ್ತೂರು ಗ್ರಾಮದ ಡಾ. ಸನತ್‌ಕುಮಾರ ಎಂಬ ಸಂಸ್ಕೃತ ವಿದ್ವಾಂಸರು ಈ ಎಲ್ಲ ಆರೋಪಗಳನ್ನು ತಳ್ಳಿಹಾಕುತ್ತಾ, ಯಜ್ಞದಲ್ಲಿ ಹೀಗೇನೂ ಆಗಿಲ್ಲ. ಈ ಯಜ್ಞವನ್ನು ವಿಶ್ವಶಾಂತಿ ಮತ್ತು ಎಲ್ಲ ಜೀವ-ಜಂತುಗಳ ಸುಖ-ಸಮೃದ್ಧಿಗಾಗಿ ಮಾಡಲಾಗಿತ್ತು. ಯಜ್ಞದ ಸಮಯದಲ್ಲಿ ಧಾರ್ಮಿಕ ವಿಧಿಯ ಅಂತರ್ಗತ ಮೇಕೆಯನ್ನು ಒಂದು ಕಂಭಕ್ಕೆ ಕಟ್ಟಿಡಲಾಗಿತ್ತು. ಅದರ ಕಿವಿಯಲ್ಲಿ ಮಂತ್ರೋಚ್ಚಾರ ಮಾಡಿದ ನಂತರ ಬಿಟ್ಟುಬಿಡಲಾಯಿತು, ಎಂದರು. 

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮತ್ತೂರಿನಲ್ಲಾದ ಸೋಮಯಾಗದಲ್ಲಿ ಆಡು ಬಲಿ ಕೊಟ್ಟಿರುವ ಆರೋಪ !