ಅತಿವೃಷ್ಟಿ ಮತ್ತು ಅನಾವೃಷ್ಟಿ ಇವುಗಳ ಮೂಲಕ್ಕೆ ಹೋಗದೇ ಕೇವಲ ಮೇಲುಮೇಲಿನ ಉಪಾಯಗಳನ್ನು ಮಾಡುವ ಇದು ವರೆಗಿನ ಸರಕಾರಗಳು !

ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು
ಎಲ್ಲಿಯಾದರೂ ಅತಿವೃಷ್ಟಿ ಅಥವಾ ಅನಾವೃಷ್ಟಿ ಯಾದರೆ, ಎಲ್ಲ ಸರಕಾರಗಳು ಪೀಡಿತ ಜನಸಾಮಾನ್ಯರಿಗೆ ಸಹಾಯ ಮಾಡುವ ನಾಟಕವನ್ನು ಮಾಡುತ್ತವೆ. ತಮ್ಮ ಧರ್ಮದಲ್ಲಿ ರಾಷ್ಟ್ರದ ಮೇಲೆ ಬಂದೆರಗುವ ತೊಂದರೆಗಳ ಕುರಿತು ಮುಂದಿನ ಕಾರಣಗಳನ್ನು ಹೇಳಲಾಗಿದ್ದರೂ, ಬುದ್ಧಿಪ್ರಾಮಾಣ್ಯವಾದಿಗಳ ಪ್ರಭಾವದಿಂದಾಗಿ ಸರಕಾರವು ಅಂತಹ ಸಂದರ್ಭದಲ್ಲಿ ಏನನ್ನೂ ಮಾಡುವುದಿಲ್ಲ ಮತ್ತು ಆ ಕುರಿತು ಅವರಿಗೆ ಏನೂ ಅನಿಸುವುದಿಲ್ಲ.

ಅತಿವೃಷ್ಟಿಃ ಅನಾವೃಷ್ಟಿಃ ಶಲಭಾ ಮೂಷಕಾಃ ಶುಕಾಃ
ಸ್ವಚಕ್ರಂ ಪರಚಕ್ರಂ ಚ ಸಪ್ತೈತಾ ಇತಯಃ ಸ್ಮೃತಾಃ ॥ - ಕೌಶಿಕಪದ್ಧತಿ
ಅರ್ಥ: ಧರ್ಮವನ್ನು ಪಾಲಿಸದಿರುವುದರಿಂದ ಅತಿವೃಷ್ಟಿ, ಅನಾವೃಷ್ಟಿ(ಬರಗಾಲ), ಗೂಬೆ ಕಾಟ, ಇಲಿಗಳ ತೊಂದರೆ, ಗಿಳಿಗಳ ಉಪದ್ರವ, ಪರಸ್ಪರ ಜಗಳ ಮತ್ತು ಶತ್ರುಗಳ ಆಕ್ರಮಣ ಮುಂತಾದ ಏಳು ಪ್ರಕಾರದ ವಿಪತ್ತುಗಳು (ರಾಷ್ಟ್ರದ) ಮೇಲೆರಗುತ್ತವೆ.
ತಾತ್ಪರ್ಯ, ಪ್ರಜೆಗಳು ಮತ್ತು ರಾಜ ಇವರಿಬ್ಬರೂ ಧರ್ಮಪಾಲಕರು ಮತ್ತು ಸಾಧನೆ ಮಾಡುವವರಾಗಿದ್ದರೆ ಆಪತ್ಕಾಲ ಎದುರಾಗುವುದಿಲ್ಲ ಅಥವಾ ಎದುರಾದರೂ ಅದರ ತೀವ್ರತೆ ಅತಿ ಕಡಿಮೆಯಿರುತ್ತದೆ. ಹಿಂದೂ ರಾಷ್ಟ್ರದ ಪ್ರಜೆಗಳು ಸಾಧನೆ ಮಾಡುವುದರಿಂದ ಪ್ರಜೆಗಳಿಗೆ ಇಂತಹ ಸಂಕಟಗಳು ಬರುವುದಿಲ್ಲ. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅತಿವೃಷ್ಟಿ ಮತ್ತು ಅನಾವೃಷ್ಟಿ ಇವುಗಳ ಮೂಲಕ್ಕೆ ಹೋಗದೇ ಕೇವಲ ಮೇಲುಮೇಲಿನ ಉಪಾಯಗಳನ್ನು ಮಾಡುವ ಇದು ವರೆಗಿನ ಸರಕಾರಗಳು !