ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರ

ಎಲ್ಲಿ ಸಂಪ್ರದಾಯ ಮತ್ತು ಎಲ್ಲಿ ಧರ್ಮ !
(ಪರಾತ್ಪರ ಗುರು) ಡಾ. ಆಠವಲೆ
೧. ಆಯಾ ಕಾಲದಲ್ಲಿ ಆಯಾ ಸ್ಥಳಗಳಲ್ಲಿ ಆಯಾ ಸಂಪ್ರದಾಯಗಳು ಹುಟ್ಟಿಕೊಳ್ಳಲು ಕಾರಣವೆಂದರೆ, ಆ ಕಾಲದಲ್ಲಿ ಅಲ್ಲಿನ ಜನರ ಕ್ಷಮತೆ ಅಷ್ಟಕ್ಕೇ ಸೀಮಿತವಾಗಿತ್ತು. ತದ್ವಿರುದ್ಧ ಧರ್ಮವು ಸ್ಥಳ ಹಾಗೂ ಕಾಲದ ಆಚೆಗಿನದ್ದಾಗಿದೆ.
೨. ಯಾವುದಕ್ಕೆ ಉತ್ಪತ್ತಿ ಇದೆಯೋ, ಅದಕ್ಕೆ ಸ್ಥಿತಿ ಇದೆ ಮತ್ತು ಅದರ ಲಯವೂ ಇದೆ. ಜಗತ್ತಿನಾದ್ಯಂತ ವಿವಿಧ ಸಂಪ್ರದಾಯಗಳು (ಇವು ಧರ್ಮವಲ್ಲ ಸಂಪ್ರದಾಯಗಳಾಗಿವೆ.) ಕಳೆದ ಕೆಲವು ಸಾವಿರ ವರ್ಷಗಳ ಹಿಂದೆ ಉತ್ಪತ್ತಿಯಾಗಿವೆ. ಅವು ಕೆಲವು ಕಾಲ ಪೃಥ್ವಿಯ ಮೇಲೆ ಉಳಿಯುತ್ತವೆ ಮತ್ತು ಮುಂದೆ ಅವುಗಳ ಲಯವೂ ಆಗುತ್ತದೆ. ಆದರೆ ಹಿಂದೂ ಧರ್ಮ ಹಾಗಿಲ್ಲ. ಅದು ಅನಾದಿ, ಅಂದರೆ ವಿಶ್ವದ ಉತ್ಪತ್ತಿಯಿಂದಲೇ ಇದೆ ಮತ್ತು ಅನಂತ ಕಾಲದವರೆಗೆ, ಅಂದರೆ ವಿಶ್ವದ ಅಂತ್ಯದವರೆಗೆ ಉಳಿಯಲಿದೆ.
೩. ಎಲ್ಲ ಸಂಪ್ರದಾಯಗಳಲ್ಲಿ ಎಲ್ಲರಿಗೂ ಒಂದೇ ರೀತಿಯ ಆಧ್ಯಾತ್ಮಿಕ ಸಾಧನೆಯನ್ನು ಹೇಳಲಾಗುತ್ತದೆ. ಆದರೆ ಧರ್ಮದಲ್ಲಿ ‘ವ್ಯಕ್ತಿಗಳಷ್ಟು ಪ್ರಕೃತಿ ಮತ್ತು ಅಷ್ಟೇ ಸಾಧನಾಮಾರ್ಗ’ ಎಂಬ ಸಿದ್ಧಾಂತಕ್ಕನುಸಾರ ಸಾಧನೆಯನ್ನು ಹೇಳಲಾಗುತ್ತದೆ. ಹೀಗಿರುವುದರಿಂದ ಯಾರಾದರೊಬ್ಬರು ಸಂಪ್ರದಾಯಕ್ಕನುಸಾರ ಸಾಧನೆ ಮಾಡುತ್ತಿದ್ದರೂ ಧರ್ಮದಲ್ಲಿನ ತತ್ತ್ವಗಳು ತಿಳಿದಾಗ ಅವನು ಅದಕ್ಕನುಸಾರ ಸಾಧನೆ ಮಾಡುವುದು ಲಾಭದಾಯಕವಾಗಿದೆ. ನಾವು ಶಾಲೆಯಲ್ಲಿ ಮೊದಲ ತರಗತಿಯಿಂದ ಎರಡನೇ ತರಗತಿಗೆ ಹೋದಾಗ ಹಿಂದಿನ ತರಗತಿಯ ಪಠ್ಯಪುಸ್ತಕಗಳನ್ನು ಮರೆಯುತ್ತೇವೆ. ಇದು ಸಹ ಅದೇ ರೀತಿಯದ್ದಾಗಿದೆ. ಯಾರಾದರೂ ಸಾಧನೆ ಮಾಡು ತ್ತಿಲ್ಲದಿದ್ದರೆ ಅವನು ಧರ್ಮಕ್ಕನುಸಾರ ಸಾಧನೆ ಮಾಡಲು ಆರಂಭಿಸುವುದು ಹೆಚ್ಚು ಉಪಯುಕ್ತವಾಗಿದೆ; ಏಕೆಂದರೆ ಸಾಂಪ್ರದಾಯಿಕ ಬೋಧನೆ ಇಲ್ಲದಿರುವುದರಿಂದ ಅವನ ಮನಸ್ಸಿನಲ್ಲಿ ಧರ್ಮದ ಬೋಧನೆಯ ಬಗ್ಗೆ ವಿಕಲ್ಪ ನಿರ್ಮಾಣವಾಗುವುದಿಲ್ಲ. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರ