ಮಹಿಳೆಯರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ಅನುಕರಣೀಯ ವಿಚಾರಗಳು ಮತ್ತು ದೃಷ್ಟಿಕೋನ

ಪರಾತ್ಪರ ಗುರು ಡಾ. ಆಠವಲೆ
ದೇವರು ನೀಡಿದ ನೈಸರ್ಗಿಕ ಸೌಂದರ್ಯವನ್ನು ಬಿಟ್ಟು
ಸುಂದರವಾಗಿ ಕಾಣಿಸಲು ಕೃತಕವಾಗಿ ಪ್ರಯತ್ನಿಸುವ ಮಾನವ !
ನಿಸರ್ಗದಲ್ಲಿ ಎಷ್ಟು ಪ್ರಾಣಿಗಳಿವೆಯೋ, ಅವೆಲ್ಲವೂ ದೇವರು ನೀಡಿದ ರೂಪದಿಂದಲೇ ಸುಂದರವಾಗಿ ಕಾಣಿಸುತ್ತವೆ. ತದ್ವಿರುದ್ಧ ಮಾನವ ತನ್ನ ಸ್ವಂತದ ಬುದ್ಧಿಯಿಂದ ತಾನು ಸುಂದರವಾಗಿ ಕಾಣಿಸಬೇಕೆಂದು ಪ್ರಯತ್ನಿಸುತ್ತಾನೆ ಹಾಗೂ ಇನ್ನೂ ವಿದ್ರೂಪಿ ಮತ್ತು ಅಹಂಕಾರಿ ಆಗುತ್ತಾನೆ. ಇಂದು ಬೆಳಗ್ಗೆಯಷ್ಟೇ ಒಂದು ಚಿಟ್ಟೆ ಹೇಳಿತು, ‘ದೇವರು ನಮಗೆ ನೀಡಿದ ರೆಕ್ಕೆಗಳು ಎಷ್ಟು ಚೆನ್ನಾಗಿವೆಯೆಂದರೆ, ನಮಗೆ ಹುಡುಗಿಯರ ಹಾಗೆ ವಿವಿಧ ಬಣ್ಣಗಳ ಬಟ್ಟೆಗಳನ್ನು ಧರಿಸಿ ಸೌಂದರ್ಯಪ್ರಸಾಧನಗಳನ್ನು ಬಳಸಿ (ಮೇಕಪ್ ಮಾಡಿ) ಸಿಂಗರಿಸಿಕೊಳ್ಳಬೇಕಾಗುವುದಿಲ್ಲ !’
ಹುಡುಗಿಯರು ಹೆಸರಿನ ಮೊದಲು ಕು.’ ಮತ್ತು ಸ್ತ್ರೀಯರು ಸೌ.’ ಬರೆಯುವುದರ ಲಾಭ !
ಇದರಿಂದ ಹುಡುಗಿಯರು ಪುರುಷರಿಗೆ ನಾನು ಇನ್ನೂ ಅವಿವಾಹಿತೆಯಾಗಿದ್ದೇನೆಎಂದು ಪರೋಕ್ಷ ವಾಗಿ ಸೂಚಿಸಿದಂತಾಗುತ್ತದೆ ಹಾಗೂ ಪುರುಷರಿಗೆ ಪ್ರತ್ಯಕ್ಷವಾಗಿ ಅವಳು ಇನ್ನೂ ಅವಿವಾಹಿತೆಯಾಗಿದ್ದಾಳೆಎಂದು ಅರಿವಾಗುತ್ತದೆ. ಅದೇ ರೀತಿ ಸ್ತ್ರೀಯರು ಪುರುಷರಿಗೆ ನಾನು ವಿವಾಹಿತೆಯಾಗಿದ್ದೇನೆಎಂದು ಪರೋಕ್ಷವಾಗಿ ಸೂಚಿಸಿದಂತಾಗುತ್ತದೆ ಮತ್ತು ಪುರುಷರಿಗೂ ಅವಳು ವಿವಾಹಿತೆಯಾಗಿದ್ದಾಳೆಎಂದು ಪ್ರತ್ಯಕ್ಷವಾಗಿ ಅರಿವಾಗುತ್ತದೆ.
ದ್ರೌಪದಿಯು ಪ್ರಾತಃಸ್ಮರಣೀಯ ಪಂಚಮಹಾಸತಿಯರಲ್ಲಿ ಓರ್ವಳು ಹೇಗೆ ?
೫ ಜನ ಪತಿಗಳಿರುವ ದ್ರೌಪದಿಯು ಪಂಚಮಹಾಸತಿಯರಲ್ಲಿ ಹೇಗೆ ? ಎಂಬ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿ ಬರುತ್ತದೆ. ಅದಕ್ಕೆ ಒಂದೇ ವಾಕ್ಯದಲ್ಲಿ ಉತ್ತರವೆಂದರೆ, ದ್ರೌಪದಿಯು ಅಯೋಗ್ಯಳಾಗಿರುತ್ತಿದ್ದರೆ, ಶ್ರೀಕೃಷ್ಣನು ಅವಳಿಗೆ ಪದೇ ಪದೇ ಸಹಾಯ ಮಾಡುತ್ತಿರಲಿಲ್ಲ !’
ಪತಿವ್ರತಾಧರ್ಮದ ಮಿತಿ
ಪತಿವ್ರತಾಧರ್ಮವು ಕೇವಲ ವ್ಯಷ್ಟಿ ಸಾಧನೆಯಾಗಿದೆ, ಸಮಷ್ಟಿ ಸಾಧನೆಯಲ್ಲ. ಆದ್ದರಿಂದ ಪತಿವ್ರತೆಯು ಮುಕ್ತಿಯ ಹಂತದವರೆಗೆ ಹೋಗಬಹುದು, ಅದಕ್ಕಿಂತ ಮುಂದೆ ಹೋಗಲು ಆಗುವುದಿಲ್ಲ.’
ವಿವಾಹದ ನಂತರವೂ ತವರಿನ ಅಡ್ಡ ಹೆಸರನ್ನಿಟ್ಟುಕೊಂಡು, ಇತರರೊಂದಿಗೆ ಏಕರೂಪವಾಗುವ
ಹಿಂದೂ ಸಂಸ್ಕೃತಿಯ ತತ್ತ್ವವನ್ನು ತಿರಸ್ಕರಿಸುವ ಸ್ತ್ರೀಮುಕ್ತಿ ಬೇಡ !
ವಿವಾಹದ ನಂತರ ಸ್ತ್ರೀಯು ತನ್ನ ಹೆಸರಿನ ಜೊತೆಗೆ ಮಾವನ ಮನೆಯ ಅಡ್ಡ ಹೆಸರನ್ನು (ಉಪನಾಮ, ಕುಲನಾಮ) ಇಟ್ಟುಕೊಳ್ಳುವುದು ಹಿಂದೂ ಸಂಸ್ಕೃತಿ ಯಲ್ಲಿನ ಪ್ರಾಚೀನ ಪರಂಪರೆಯಾಗಿದೆ. ಇತ್ತೀಚೆಗೆ ಪ್ರಗತಿಪರ ವರ್ಚಸ್ಸು ಹೊಂದಿರುವ ಕೆಲವು ಮಹಿಳೆಯರು ಸ್ತ್ರೀಮುಕ್ತಿಯ ಹೆಸರಿನಲ್ಲಿ ತವರಿನ ಹಾಗೂ ಮಾವನ ಮನೆಯ ಎರಡೂ ಅಡ್ಡ ಹೆಸರುಗಳನ್ನು ಇಟ್ಟು ಕೊಳ್ಳುತ್ತಾರೆ. ‘ಸ್ವತ್ವವನ್ನು ತ್ಯಜಿಸಿ ಇತರರೊಂದಿಗೆ ವಿಲೀನವಾಗುವುದುಹಿಂದೂ ಧರ್ಮದಲ್ಲಿನ ಮೂಲಭೂತ ಸಿದ್ಧಾಂತವಾಗಿದೆ. ಪ್ರಾಚೀನ ಪರಂಪರೆ ಗನುಸಾರ ವಿವಾಹದ ನಂತರ ಹೆಣ್ಣುಮಕ್ಕಳು ಮಾವನ ಮನೆಯ ಅಡ್ಡ ಹೆಸರನ್ನು ಇಟ್ಟುಕೊಳ್ಳುವುದರ ಹಿಂದೆ ಅವಳು ಗಂಡನ ಕುಟುಂಬದಲ್ಲಿ ವಿಲೀನವಾಗ ಬೇಕುಎಂಬ ಉದ್ದೇಶವಿದೆ. ಅನೇಕ ಸಂತರು ಸಹ ತಮ್ಮ ಶಿಷ್ಯರ ಹೆಸರನ್ನು ಬದಲಾಯಿಸಿರುವ ಅನೇಕ ಉದಾಹರಣೆಗಳಿವೆ. ಶಿಷ್ಯರ ಹೆಸರನ್ನು ಬದಲಾಯಿಸು ವುದರ ಹಿಂದೆ ಹೆಸರಿನೊಂದಿಗೆ ಬಂದಿರುವ ಎಲ್ಲ ಸಂಸ್ಕಾರಗಳು ಮತ್ತು ಅಹಂಭಾವವನ್ನು ತ್ಯಜಿಸಿ ಅವನು ಗುರುಗಳೊಂದಿಗೆ ಏಕರೂಪವಾಗಬೇಕೆಂಬ ಸಂಕಲ್ಪನೆ ಇರುತ್ತದೆ. ಇದೇ ಪ್ರಕ್ರಿಯೆ ಸ್ತ್ರೀಯು ತನ್ನ ವಿವಾಹದ ನಂತರ ತವರಿನ ಹೆಸರನ್ನು ತ್ಯಜಿಸಿ ಮಾವನ ಮನೆಯ ಹೆಸರನ್ನು ಅಂಗೀಕರಿಸುವುದರಲ್ಲಿರುತ್ತದೆ. ವಿವಾಹದ ನಂತರ ಸ್ತ್ರೀಯ ಅಡ್ಡ ಹೆಸರನ್ನು ಬದಲಾಯಿಸುವುದರ ಹಿಂದೆ ಅವಳನ್ನು ದಾಸ್ಯತ್ವದಲ್ಲಿಡುವುದಲ್ಲ, ಬದಲಾಗಿ ಅವಳನ್ನು ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತಳನ್ನಾಗಿಸುವ ಉದ್ದೇಶವಿದೆ. ಆದ್ದರಿಂದ ವಿವಾಹಿತ ಸ್ತ್ರೀ ತವರಿನ ಅಡ್ಡ ಹೆಸರನ್ನು ಇಟ್ಟುಕೊಳ್ಳುವುದೆಂದರೆ, ಇತರರೊಂದಿಗೆ ವಿಲೀನವಾಗುವ ಆಧ್ಯಾತ್ಮಿಕ ಅವಕಾಶವನ್ನು ತಿರಸ್ಕರಿಸಿ ದಂತಾಗುತ್ತದೆ.
ಬಲತ್ಕಾರಗಳ ವಾರ್ತೆಗಳಿಂದ ಮಾನಸಿಕ ಒತ್ತಡದಲ್ಲಿರುವ ಹೆಣ್ಣುಮಕ್ಕಳು ಮತ್ತು ಸ್ತ್ರೀಯರು !
ಇತ್ತೀಚೆಗೆ ಪ್ರತಿದಿನ ಬಲಾತ್ಕಾರಗಳ ವಾರ್ತೆಗಳು ಬರುತ್ತಿರುತ್ತವೆ. ಇದರಿಂದ ಕೆಲವು ಹುಡುಗಿಯರ ಮತ್ತು ಸ್ತ್ರೀಯರ ಮನಸ್ಸಿನಲ್ಲಿ ನಮ್ಮ ಮೇಲೆ ಬಲಾತ್ಕಾರ ಮಾಡುತ್ತಿದ್ದಾರೆ. ನಮ್ಮನ್ನು ಕೊಲೆ ಮಾಡುತ್ತಿದ್ದಾರೆಎಂಬಂತಹ ವಿಚಾರಗಳು ಬರುತ್ತವೆ ಅಥವಾ ಅವರಿಗೆ ಅಂತಹ ಕನಸುಗಳು ಬೀಳುತ್ತವೆ. ಇದರಿಂದ ಅವರಲ್ಲಿ ಮಾನಸಿಕ ಒತ್ತಡ ನಿರ್ಮಾಣವಾಗುತ್ತದೆ. ಹುಡುಗಿಯರ ತಂದೆ-ತಾಯಿಯರಿಗೂ ಹೆಣ್ಣುಮಕ್ಕಳು
ಹೊರಗೆ ಹೋದ ನಂತರ ಮನೆಗೆ ಬರುವವರೆಗೆ ಚಿಂತೆಯಾಗುತ್ತಿರುತ್ತದೆ. ಎಲ್ಲ ಪಕ್ಷಗಳ ರಾಜಕಾರಣಿ ಗಳಿಂದಾಗಿ ನಾಗರಿಕರ ಸ್ಥಿತಿ ಹೀಗಾಗಿದೆ. ಇದರ ಮೇಲಿನ ಒಂದೇ ಪರಿಹಾರವೆಂದರೆ, ಸಾಧನೆ ಮತ್ತು ನೈತಿಕತೆ ಕಲಿಸುವ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಹಿಳೆಯರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ಅನುಕರಣೀಯ ವಿಚಾರಗಳು ಮತ್ತು ದೃಷ್ಟಿಕೋನ