.... ಕಾಲ ಹೋಗುತ್ತಿದೆ ಹಾಗಾಗಿ

ಕನ್ಹಯ್ಯಾನ ಭಾಷಣಗಳು ಅಲ್ಲಲ್ಲಿ ಏಕೆ ಬೇಡ ? ಇದರ ಒಂದಲ್ಲ ನೂರಾರು ಕಾರಣಗಳನ್ನು ನೀಡಬಹುದು, ಅದರ ಒಂದು ಗ್ರಂಥವೇ ಸಿದ್ಧವಾಗಬಹುದು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟುಡೆಂಟ್ ಫೆಡರೇಶನ್‌ನ ಅಧ್ಯಕ್ಷ ಕನ್ಹಯ್ಯಾನು ಸಾಮ್ಯವಾದಿ ಕುವಿಚಾರಗಳ ಬೆಂಬಲಿಗನಿದ್ದಾನೆ. ಧರ್ಮವು ನಶೆಯ ಗುಳಿಗೆಯಾಗಿದೆ, ಎಂಬು ದನ್ನು ಕಲಿಸುವ, ಹಾಗೆಯೇ ರಷ್ಯಾದಿಂದ ಬಂದಿರುವ ಈ ಸಾಮ್ಯವಾದವು ಕೇವಲ ಹಿಂದೂಗಳ ಬುದ್ಧಿಭೇದ ಮಾಡಿ ಅವರ ಹಿಂದೂ ಜೀವನಪದ್ಧತಿ ಮೇಲಿನ ನಂಬಿಕೆಯನ್ನು ದೂರ ಮಾಡುತ್ತಿದೆ ಹಾಗೂ ಅವರಲ್ಲಿ ಒಡಕುಂಟು ಮಾಡುವ ಅಲ್ಲದೇ ಹಿಂದುತ್ವವಾದಿಗಳನ್ನು ಹೆಕ್ಕಿ ಬರ್ಬರವಾಗಿ ಹತ್ಯೆಗೈಯ್ಯುವ ಮಟ್ಟಿಗೆ ಬೆಳೆದು ನಿಂತಿದೆ. ಹಿಂದೂಗಳ ಮಾತೃಭೂಮಿಯ ಸಂಸ್ಕೃತಿಯೊಂದಿಗೆ ಯಾವುದೇ ರೀತಿಯ ಅದರ ಸಾಮ್ಯತೆ ಕಿಂಚಿತ್ತೂ ಇಲ್ಲ. ಕನ್ಹಯ್ಯಾ ಕೇವಲ ಈ ಸಾಮ್ಯವಾದಿ ವಿಚಾರಗಳ ಪ್ರತಿನಿಧಿಯಷ್ಟೇ ಅಲ್ಲದೇ ಕೋಮುವಾದ ಹಬ್ಬಿಸಿ ಹಿಂದೂಗಳಲ್ಲಿ ಒಡಕುಂಟು ಮಾಡುತ್ತಿದ್ದಾನೆ. ಮನುವಾದ ಅಂದರೆ ಬ್ರಾಹ್ಮಣ ವಾದ ತರುವ ಮೋದಿಯ ಹಿಂದುತ್ವವಾದಿ ಸರಕಾರವು ಬೇಡ ಮತ್ತು ದಲಿತರ ಮೇಲೆ ತಥಾಕಥಿತ ಅನ್ಯಾಯ ಆಗುತ್ತಿರುವುದರಿಂದ ಅವರಿಗೆ ರಕ್ಷಣೆ ಮತ್ತು ಮೀಸಲಾತಿ ನೀಡುವ ಕಾನೂನುಗಳನ್ನು ಮಾಡಬೇಕು, ಎಂದು ಹೇಳುತ್ತಾ ಆತ ತಿರುಗುತ್ತಿದ್ದಾನೆ.
ಇದನ್ನು ಹೇಳುವಾಗ ಅವನ ಮೋದಿದ್ವೇಷವು ಇಷ್ಟು ಮಿತಿ ಮೀರಿದೆ ಎಂದರೆ ತನಗಿಂತ ವಯಸ್ಸಿನಲ್ಲಿ ಹಿರಿಯರಾಗಿರುವ ವ್ಯಕ್ತಿಯನ್ನು ಕಡಿಮೆಪಕ್ಷ ಗೌರವಿಸಬೇಕು, ಈ ಮೂಲಭೂತ ಹಿಂದೂ ಸಂಸ್ಕೃತಿಯನ್ನೂ ಆತ ಮರೆತಿದ್ದಾನೆ. ಮನುಸ್ಮೃತಿ ಮತ್ತು ಬ್ರಾಹ್ಮಣರು ಕಾಪಾಡಿದ ಜ್ಞಾನವು ಈ ದೇಶದ ಅತ್ಯುಚ್ಚ ಸಂಸ್ಕೃತಿಯ ಮೂಲವಾಗಿದೆ ಮತ್ತು ಅದರಿಂದ ಈ ದೇಶದಲ್ಲಿ ಚೈತನ್ಯವು ಇನ್ನೂ ಉಳಿದುಕೊಂಡಿದೆ, ಎಂಬುದನ್ನು ತಿಳಿಯುವುದರ ಆಚೆಗೆ ಈ ಸಾಮ್ಯವಾದಿಗಳಿದ್ದಾರೆ. ಆದ್ದರಿಂದ ಕನ್ಹಯ್ಯಾ ಇದರ ವಿರುದ್ಧ ಹಾಕುತ್ತಿರುವ ಬೊಬ್ಬೆ ಎಷ್ಟು ಮಹಾದೇಶವಿಘಾತಕವಾಗಿದೆ, ಎಂಬುದು ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳಿಗೆಯೇ ತಿಳಿಯಬಹುದು. ಕೋಮುದ್ವೇಷದ ಈ ವಿಷಬಳ್ಳಿಯು ಕೇವಲ ಕೋಮುವಾದದವರೆಗೆ ಸೀಮಿತವಾಗಿರುತ್ತಿದ್ದರೆ ಒಂದು ಪಕ್ಷ ಅರಿತು ಕೊಳ್ಳಬಹುದಿತ್ತು; ಆದರೆ ಮಿತಿಮೀರಿದ ಹಿಂದೂದ್ವೇಷದಿಂದಾಗಿ ಈ ಸಾಮ್ಯವಾದಿಗಳು ನಕ್ಸಲರು ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಿರುವುದರಿಂದ ರಾಷ್ಟ್ರದಲ್ಲಿ ಒಡಕುಂಟಾಗಿದೆ. ತಮ್ಮನ್ನು ಹಿಂದೂ ಎನ್ನುವ ಬುದ್ಧಿವಾದಿ ಗಳು ಮತ್ತು ಪ್ರಸಾರಮಾಧ್ಯಮಗಳ ನಿವೇದಕರು ಎಡಪಕ್ಷದವರ ಈ ಭಯಾನಕ ದೇಶದ್ರೋಹವನ್ನು ಏಕೆ ಅರಿತುಕೊಳ್ಳುವುದಿಲ್ಲ ? ವಾಸ್ತವದಲ್ಲಿ ಅವರಿಗೆ ಅದನ್ನು ಅರಿತುಕೊಳ್ಳುವುದು ಬೇಡವಾಗಿದೆ, ಅವರಿಗೆ ಕೇವಲ ಕೋಲಾಹಲವೆಬ್ಬಿಸಬೇಕಿದೆ. ಸಾಮ್ಯವಾದಿಗಳು ಹಿಂದೂಗಳ ಹತ್ಯೆಗೈಯ್ಯಲು ಇಟ್ಟ ಹೆಜ್ಜೆ ಮತ್ತು ಕನ್ಹಯ್ಯಾ ಸಮರ್ಥನೆಗಾಗಿ ಈ ಸಾಮ್ಯವಾದಿಗಳನ್ನು ವೈಭವೀಕರಿಸುವ ಈ ಪ್ರಸಾರಮಾಧ್ಯಮಗಳ ಪೆಟ್ಟನ್ನು ಹಿಂದೂಗಳು ಬಾಯಿಮುಚ್ಚಿ ಸಹಿಸಿ ಕೊಳ್ಳುವುದನ್ನು ಯಾರಾದರೂ ಹಿಂದೂಗಳ ಸಹಿಷ್ಣುತೆ ಎಂದರೆ ಅದನ್ನು ನಾವು ಎಂದೂ ಒಪ್ಪುವುದಿಲ್ಲ.
ಕನ್ಹಯ್ಯಾ ಹೀಗೆ ಊರೂರು ಸುತ್ತುವುದರಿಂದ ಕೇವಲ ಕೋಮುದ್ವೇಷವೇ ಹೆಚ್ಚುತ್ತದೆಯಲ್ಲದೇ ನಕ್ಸಲ್‌ವಾದ ಮತ್ತು ಪ್ರತ್ಯೇಕತಾವಾದಕ್ಕೆ ಚಾಲನೆ ದೊರೆತು ರಾಷ್ಟ್ರದ್ರೋಹವೂ ಹೆಚ್ಚಾಗುತ್ತಿದೆ ಎಂಬುದು ಇವುಗಳನ್ನು ಪುರಸ್ಕರಿಸುವ ಮಾಧ್ಯಮಗಳಿಗೆ ಮತ್ತು ತಥಾಕಥಿತ ವಿಚಾರವಂತರಿಗೆ ತಿಳಿಯದಿದ್ದರೂ ಹಿಂದುತ್ವವಾದಿಗಳಿಗೆ ಮಾತ್ರ ಚೆನ್ನಾಗಿ ಗಮನಕ್ಕೆ ಬಂದಿದೆ. ಕನ್ಹಯ್ಯಾ ಇವನ ಕಾರ್ಯಕ್ರಮಕ್ಕೆ ಗುಜರಾತ ಗಲಭೆಯ ಸುಳ್ಳು ಮಾಹಿತಿ ನೀಡುವ ತೀಸ್ತಾ ಸೆಟಲ್‌ವಾಡ, ರಾಮ ಪುನಿಯಾನಿ ಮತ್ತು ಡಾ. ಕೊಳಸೆ ಪಾಟೀಲ ಇವರಂತಹ ದೇಶದ್ರೋಹಿಗಳು, ತನ್ನನ್ನು ಶ್ರೇಷ್ಠವೆನಿಸಿಕೊಳ್ಳುವ ಶೋಭಾ ಡೇ ಇವರಂತಹ ಆಂಗ್ಲೀಕರಣವಾದ ಪತ್ರಕರ್ತರು ಮತ್ತು ಸಮಸ್ತ ಹಿಂದೂದ್ವೇಷಿ ಸಾಮ್ಯವಾದಿಗಳು ಬೆಂಬಲ ನೀಡುತ್ತಿರುವುದರಿಂದ ಗಾಳಿಯು ಯಾವ ದಿಕ್ಕಿನಲ್ಲಿ ಬೀಸುತ್ತಿದೆ ಎಂಬುದು ಗಮನಕ್ಕೆ ಬರಲು ಸಾಕು. ಕನ್ಹಯ್ಯಾನಿಗೆ ವಿರೋಧ ಏಕೆಂದು ಕೇಳಿದರೆ ಅವನಿಂದಾಗಿ ಈ ರಾಷ್ಟ್ರವಿರೋಧಿ ಮತ್ತು ಹಿಂದೂದ್ವೇಷಿ ವಾತಾವರಣದ ಕಾಲವು ಮಿತಿಮೀರುತ್ತಿದೆ. ಯಾವ ವಿದ್ಯಾರ್ಥಿದೆಶೆಯಲ್ಲಿ ರಾಷ್ಟ್ರಪ್ರೀತಿಯಿಂದಾಗಿ ವಿದ್ಯಾರ್ಥಿಗಳು ತುಂಬಿ ತುಳುಕಬೇಕಿತ್ತೋ ಆ ದೆಶೆಯಲ್ಲಿ ಅವರ ಮನಸ್ಸಿನಲ್ಲಿ ಹಿಂದೂ ರಾಷ್ಟ್ರ ಮತ್ತು ಧರ್ಮಗಳ ವಿಷಯದಲ್ಲಿ ದ್ವೇಷ ನಿರ್ಮಾಣ ಮಾಡುವ ಕೆಲಸವನ್ನು ಕನ್ಹಯ್ಯಾ ಮಾಡುತ್ತಿದ್ದಾನೆ. ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳಿಗಾಗಿ ಧರ್ಮಪ್ರೇಮಿಗಳು ಅವರ ಕರ್ತವ್ಯವೆಂದು ಕನ್ಹಯ್ಯಾರಂತಹ ದ್ರೋಹಿ ಶಕ್ತಿಗಳನ್ನು ವಿರೋಧಿಸುತ್ತಾ ಇರುತ್ತಾರೆ.
ಭಾರತೀಯ ಪಾಲಕರೇ, ರಾತ್ರಿ ಶತ್ರುವಿನದ್ದಾಗಿದೆ !
ನಮ್ಮ ದೇಶದ ಇತಿಹಾಸವು ಹಿಂದೂ ಧರ್ಮದ ಮೇಲಿನ ದಾಳಿಯಿಂದ ಕೂಡಿದ ಇತಿಹಾಸವಾಗಿದೆ. ಇಂದಿಗೂ ಧರ್ಮದ ಮೇಲೆ ಅದೇ ರೀತಿಯ ದಾಳಿಗಳು ನಡೆಯುತ್ತಿರುವುದರಿಂದ ರಾಷ್ಟ್ರದ ಸ್ಥಿತಿಯು ಕಠಿಣವಾಗಿದೆ. ಇಸ್ಲಾಮೀ, ಕ್ರೈಸ್ತರೊಂದಿಗೆ ಮೇಲುಮೇಲಿನ ಸಮಾನತೆಯ ಮಾಯಾಜಾಲ ತೋರಿಸುವ ಈ ಸಾಮ್ಯವಾದವು ಒಗ್ಗಟ್ಟಾಗಿರುವ ಭಾರತೀಯ ಸಂಸ್ಕೃತಿಯ ಮೇಲೆ ಕೋಮುದ್ವೇಷದ ಕೊಡಲಿಯೇಟು ಹಾಕಿ ಬಹುದೊಡ್ಡ ದಾಳಿ ಮಾಡುತ್ತಿದೆ, ಎಂಬುದನ್ನು ಪ್ರಜ್ಞಾವಂತ ಪಾಲಕರು ತಮ್ಮ ಮಕ್ಕಳಿಗೆ ತಿಳಿಸಿ ಹೇಳುವ ಸಮಯ ಈಗ ಬಂದೊದಗಿದೆ. ಅವರ ಕೈಯಲ್ಲಿರುವ ಸಾಮಾಜಿಕ ಜಾಲತಾಣಗಳು ಮತ್ತು ಸಾಮ್ಯವಾದದಲ್ಲಿ ಮುಳುಗಿದ ಅವರ ಮಹಾವಿದ್ಯಾಲಯದ ತಥಾಕಥಿತ ಪ್ರಾಚಾರ್ಯರು ಇದನ್ನು ಅವರಿಗೆ ಕಲಿಸಲಾರರು. ತಮ್ಮ ಮಕ್ಕಳಿಗೆ ಇದನ್ನು ತಿಳಿಸಿ ಹೇಳಿರಿ, ಅಂಬೇಡ್ಕರರ ಯಾವ ಸಂವಿಧಾನದ ಮೇಲೆ ಸಂಸತ್ತು ನಡೆಯುತ್ತದೆಯೋ ಆ ಸಂಸತ್ತಿನ ಮೇಲೆ ದಾಳಿ ಮಾಡುವವನು ಅಫ್ಝಲನಾಗಿದ್ದಾನೆ ಮತ್ತು ಕನ್ಹಯ್ಯಾ ಆತನ ಪ್ರಖರ ಬೆಂಬಲಿಗನಿದ್ದಾನೆ. ತಮ್ಮ ಮಕ್ಕಳಿಗೆ ತಿಳಿಸಿ ಹೇಳಿ, ಛತ್ರಪತಿ ಶಿವಾಜಿ ಮಹಾರಾಜರು ಅಫ್ಝಲಖಾನನ ಕರುಳನ್ನು ಹೊರಗೆ ತೆಗೆದಿದ್ದರಿಂದ ಇಂದು ಹಿಂದೂಗಳು ಅಸ್ತಿತ್ವದಲ್ಲಿದ್ದಾರೆ. ಹೀಗಿರುವಾಗ ಸದ್ಯ ಉಗ್ರವಾದದ ರೂಪದಲ್ಲಿ ಬರುವ ಆಧುನಿಕ ಅಫ್ಝಲ್‌ನನ್ನು ಕನ್ಹಯ್ಯಾ ವೈಭವೀಕರಿಸುತ್ತಿದ್ದಾನೆ. ದೇಶಕ್ಕೆ ಕಾಶ್ಮೀರವನ್ನು ಬೇರ್ಪಡಿಸಲು ಇಚ್ಛಿಸು ವವರ ಜೊತೆಗೆ ನಿಂತಿದ್ದಾನೆ. ಅದಕ್ಕಾಗಿ ಅವನು ಉಚ್ಚವರ್ಣದವರ ವಿರುದ್ಧ ಹೋರಾಡಲು ದಲಿತ ಹೆಸರಿನ ಶಸ್ತ್ರವನ್ನು ಕೈಗೆತ್ತಿಕೊಂಡಿರುವಾಗ ಶ್ರೀ. ನರೇಂದ್ರ ಮೋದಿ ಸಹ ಉಚ್ಚವರ್ಣದವರಲ್ಲ ಎಂಬುದನ್ನು ಆತನು ಮರೆಯುತ್ತಿದ್ದಾನೆ.
ಹಿಂದೂಗಳೇ, ಕನ್ಹಯ್ಯಾನ ವಿದ್ರೋಹಿ ವೈಚಾರಿಕತೆಯು ಜೆಎನ್‌ಯೂ ಬೆಳೆಸಿದ ವೃಕ್ಷವಾಗಿದೆ. ಕನ್ಹಯ್ಯಾನಿಗೆ ತಮ್ಮ ನಗರಕ್ಕೆ ಕರೆದು ತಮ್ಮ ನಗರದಲ್ಲಿ ನಿಮಗೆ ಜೆಎನ್‌ಯೂದಂತಹ ದೇಶದ್ರೋಹಿ ವಿಶ್ವವಿದ್ಯಾಲಯದ ರೋಗದ ಪ್ರಸಾರ ಮಾಡಲಿಕ್ಕಿದೆಯೇ ಎಂಬುದನ್ನು ನಿಶ್ಚಯಿಸುವ ಸಮಯ ಬಂದಿದೆ. ಭಕ್ತಿ ಮತ್ತು ಹಿಂದೂಗಳ ಸಂಘಟನಾಶಕ್ತಿಗಳ ಮೇಲೆ ಪೋಷಿಸಿದ ಹಿಂದೂ ಧರ್ಮವನ್ನು ಕಾಪಾಡಲಿಕ್ಕಿದ್ದರೆ ಔರಂಗಜೇಬ್ ವೃತ್ತಿಗಳನ್ನು ತಡೆಯಲೇಬೇಕಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
.... ಕಾಲ ಹೋಗುತ್ತಿದೆ ಹಾಗಾಗಿ