ನಮ್ಮ ದಿನಚರಿ ಹೇಗಿರಬೇಕು ?

ಧರ್ಮಶಿಕ್ಷಣ ನೀಡುವ ಹೊಸ ಮಾಲಿಕೆ !
ಬೇಗನೆ ಮಲಗಿ, ಬೇಗನೆ ಏಳುವವನಿಗೆ ಆಯುರಾರೋಗ್ಯವು ಲಭಿಸುವುದುಇಂತಹ ಬೋಧನೆಯನ್ನು ಮೊದಲು ಹಿರಿಯರು ಮಕ್ಕಳಿಗೆ ಕೊಡುತ್ತಿದ್ದರು. ಇಂದು ಮಕ್ಕಳು ರಾತ್ರಿ ತಡವಾಗಿ ಮಲಗುತ್ತಾರೆ ಮತ್ತು ಬೆಳಗ್ಗೆ ತಡವಾಗಿ ಏಳುತ್ತಾರೆ. ಹಿಂದಿನ ಕಾಲದ ದಿನಚರಿಯು ನಿಸರ್ಗದ ಮೇಲೆ ಆಧರಿಸಿತ್ತು, ಆದರೆ ಇಂದು ಅದು ಹಾಗಿಲ್ಲ. ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳ ಪಾಲನೆಯನ್ನು ಮಾಡುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುತ್ತಿದೆ. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆಯನ್ನು ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ತಮ್ಮ ಮಕ್ಕಳಲ್ಲಿಯೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲಿ ಎಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ. (ಮುಂದುವರಿದ ಭಾಗ)
ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ಮಾಡಬೇಕಾದ ಕೃತಿಗಳು
. ಶ್ರೋತ್ರಾಚಮನ : ನಿದ್ರೆಯಿಂದ ಎದ್ದ ಕೂಡಲೆ ಹಾಸಿಗೆಯಲ್ಲಿ ಕುಳಿತುಕೊಂಡು ಶ್ರೋತ್ರಾಚಮನ ಮಾಡಬೇಕು.
ಜವಳಿ ಉದಕ ನಸಲೆ ಜರೀ
ತರೀ ಶ್ರೋತ್ರಾಚಮನ ಕರಾ ನಿರ್ಧಾರಿ
- ಗುರುಚರಿತ್ರೆ, ಅಧ್ಯಾಯ ೩೬, ದ್ವಿಪದಿ ೧೨೪
ಅರ್ಥ : ಸಮೀಪ ನೀರು ಇಲ್ಲದಿದ್ದರೂ, ಶ್ರೋತ್ರಾಚಮನವನ್ನು ಮಾಡಲು ನಿರ್ಧರಿಸು.
ಶ್ರೋತ್ರಾಚಮನ ಎಂದರೆ ಬಲಕಿವಿಗೆ ಕೈಯನ್ನು ತಗಲಿಸಿ ಶ್ರೀವಿಷ್ಣುವಿನ ಓಂ ಶ್ರೀ ಕೇಶವಾಯ ನಮಃ ...
ಮುಂದಿನ ೨೪ ಹೆಸರುಗಳನ್ನು ಹೇಳುವುದು. ಆದಿತ್ಯ, ವಸು, ರುದ್ರ, ಅಗ್ನಿ, ಧರ್ಮ, ವೇದ, ಆಪ, ಸೋಮ, ಅನಿಲ ಮುಂತಾದ ಎಲ್ಲ ದೇವತೆಗಳ ವಾಸ್ತವ್ಯವು ಬಲಕಿವಿಯಲ್ಲಿರುವುದರಿಂದ ಬಲಕಿವಿಗೆ ಬಲಕೈಯಿಂದ ಕೇವಲ ಸ್ಪರ್ಶಿಸಿದರೂ ಆಚಮನದ ಫಲವು ಸಿಗುತ್ತದೆ. ಆಚಮನದಿಂದ ಅಂತರ್ಶುದ್ಧಿಯಾಗುತ್ತದೆ.
. ಶ್ಲೋಕಗಳನ್ನು ಪಠಿಸುವುದು

೨ ಅ. ಶ್ರೀ ಗಣೇಶವಂದನೆ
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ
ಅರ್ಥ : ದುರ್ಜನರನ್ನು ನಾಶಮಾಡುವ, ಮಹಾಕಾಯ (ಶಕ್ತಿವಂತ), ಕೋಟಿ ಸೂರ್ಯಗಳ ತೇಜ ವಿರುವ (ಅತ್ಯಂತ ತೇಜಃಪುಂಜ) ಗಣೇಶನೇ, ನನ್ನ ಎಲ್ಲ ಕಾರ್ಯಗಳು ಯಾವಾಗಲೂ ಯಾವುದೇ ವಿಘ್ನಗಳು ಬರದೇ (ನಿರ್ವಿಘ್ನವಾಗಿ) ನೆರವೇರಲಿ.
೨ ಆ. ದೇವತಾವಂದನೆ
ಬ್ರಹ್ಮಾ ಮುರಾರಿಸ್ತ್ರಿಪುರಾಂತಕಾರೀ ಭಾನುಃ ಶಶೀ ಭೂಮಿಸುತೋ ಬುಧಶ್ಚ
ಗುರುಶ್ಚ ಶುಕ್ರಃ ಶನಿರಾಹುಕೇತವಃ ಕುರ್ವಂತು ಸರ್ವೇ ಮಮ ಸುಪ್ರಭಾತಮ್
ಅರ್ಥ : ನಿರ್ಮಾಪಕ ಬ್ರಹ್ಮದೇವ; ಪಾಲನಕರ್ತ ಹಾಗೂ ಮುರನೆಂಬ ರಾಕ್ಷಸನನ್ನು ವಧಿಸಿದಂತಹ ಶ್ರೀವಿಷ್ಣು; ಸಂಹಾರಕ ಹಾಗೂ ತ್ರಿಪುರಎಂಬ ರಾಕ್ಷಸನನ್ನು ವಧಿಸಿದ ಶಿವ ಈ ಮೂರು ಪ್ರಮುಖ ದೇವರು ಹಾಗೂ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಈ ನವಗ್ರಹಗಳು ನನ್ನ ಮುಂಜಾವನ್ನು ಶುಭಗೊಳಿಸಲಿ.
೨ ಇ. ಪುಣ್ಯಪುರುಷರ ಸ್ಮರಣೆ
ಪುಣ್ಯಶ್ಲೋಕೋ ನಲೋ ರಾಜಾ ಪುಣ್ಯಶ್ಲೋಕೋ ಯುಧಿಷ್ಠಿರಃ
ಪುಣ್ಯಶ್ಲೋಕೋ ವಿದೇಹಶ್ಚ ಪುಣ್ಯಶ್ಲೋಕೋ ಜನಾರ್ದನಃ  
- ಪುಣ್ಯಜನಸ್ತುತಿ, ಶ್ಲೋಕ ೧
ಅರ್ಥ : ನಾನು ಪುಣ್ಯವಂತ ನಳ, ಯುಧಿಷ್ಠಿರ, ವಿದೇಹ (ಜನಕ ರಾಜ) ಮತ್ತು ಭಗವಂತ ಜನಾರ್ದನ ಇವರನ್ನು ಸ್ಮರಿಸುತ್ತೇನೆ.
೨ ಈ. ಸಪ್ತಚೀರಂಜೀವಿಗಳ ಸ್ಮರಣೆ
ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ಬಿಭೀಷಣಃ
ಕೃಪಃ ಪರಶುರಾಮಶ್ಚ ಸಪ್ತೈತೆ ಚಿರಂಜೀವಿನಃ
- ಪುಣ್ಯಜನಸ್ತುತಿ, ಶ್ಲೋಕ ೨
ಅರ್ಥ : ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮಾ, ದಾನಶೂರ ಬಲಿರಾಜ, ವೇದವ್ಯಾಸರು, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ೨೧ ಸಲ ಪೃಥ್ವಿಯನ್ನು ಕ್ಷತ್ರಿಯರಹಿತ ಮಾಡಿದ ಪರಶುರಾಮ ಈ ಏಳು ಮಂದಿ ಚಿರಂಜೀವಿಗಳಾಗಿದ್ದಾರೆ, ಇವರನ್ನು ನಾನು ಸ್ಮರಿಸುತ್ತೇನೆ.
೨ ಉ. ಪಂಚಮಹಾಸತಿಯರ ಸ್ಮರಣೆ
ಅಹಿಲ್ಯಾ, ದ್ರೌಪದಿ, ಸೀತಾ, ತಾರಾ, ಮಂದೋದರಿ ತಥಾ
ಪಂಚಕಂ ನಾ ಸ್ಮರೇನ್ನಿತ್ಯಂ ಮಹಾಪಾತಕ ನಾಶನಮ್  
- ಪುಣ್ಯಜನಸ್ತುತಿ, ಶ್ಲೋಕ ೪
ಅರ್ಥ : ಗೌತಮಋಷಿಗಳ ಪತ್ನಿ ಅಹಿಲ್ಯಾ, ಪಾಂಡವರ ಪತ್ನಿ ದ್ರೌಪದಿ, ಪ್ರಭು ಶ್ರೀರಾಮಚಂದ್ರನ ಪತ್ನಿ ಸೀತಾ, ರಾಜಾ ಹರಿಶ್ಚಂದ್ರನ ಪತ್ನಿ ತಾರಾಮತಿ ಮತ್ತು ರಾವಣನ ಪತ್ನಿ ಮಂಡೋದರಿ ಈ ಐದು ಮಹಾಸತಿಯರನ್ನು ಯಾರು ಸ್ಮರಿಸುತ್ತಾರೆಯೋ ಅವರ ಮಹಾಪಾತಕಗಳು ನಾಶವಾಗುತ್ತವೆ.
ಟಿಪ್ಪಣಿ - ಈ ಶ್ಲೋಕವನ್ನು ಪಠಿಸುವಾಗ ಕೆಲವರು ಪಂಚಕನ್ಯಾ ಸ್ಮರೇನ್ನಿತ್ಯಮ್...’ ಎನ್ನುತ್ತಾರೆ, ಆದರೆ ಅದು ಯೋಗ್ಯವಾಗಿಲ್ಲ. ‘ಪಂಚಕಅಂದರೆ ಐದು ಜನರ ಸಮೂಹ ಮತ್ತು ನಾಅಂದರೆ ಮನುಷ್ಯ; ಆದುದರಿಂದ ಪಂಚಕಂ ನಾ ಸ್ಮರೇನ್ನಿತ್ಯಮ್ಇದರ ಅರ್ಥವು ಮನುಷ್ಯನು ಈ ಐದು ಜನರ ಸಮೂಹ ವನ್ನು ಸ್ಮರಿಸಬೇಕುಎಂದಾಗಿದೆ.
೨ ಊ. ಏಳು ಮೋಕ್ಷಪುರಿಗಳ ಸ್ಮರಣೆ
ಅಯೋಧ್ಯಾ ಮಥುರಾ ಮಾಯಾ ಕಾಶಿ ಕಾಂಚಿ ಹ್ಯಾವಂತಿಕಾ
ಪುರಿ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ
- ನಾರದಪುರಾಣ, ಪೂರ್ವಭಾಗ, ಪಾದ ೧, ಅಧ್ಯಾಯ ೨೭, ಶ್ಲೋಕ ೩೫
ಅರ್ಥ : ಅಯೋಧ್ಯೆ, ಮಥುರಾ, ಮಾಯಾವತಿ (ಹರಿದ್ವಾರ), ಕಾಶೀ, ಕಾಂಚಿ, ಅವಂತಿಕಾ (ಉಜ್ಜಯಿನಿ) ಮತ್ತು ದ್ವಾರಕೆ ಇವು ಮೋಕ್ಷವನ್ನು ನೀಡುವಂತಹ ಏಳು ನಗರಗಳಾಗಿವೆ. ಇವುಗಳನ್ನು ನಾನು ಸ್ಮರಿಸುತ್ತೇನೆ.
(ಆಧಾರ : ಸನಾತನ ನಿರ್ಮಿತ ಗ್ರಂಥ ಸ್ನಾನದ ಮೊದಲಿನ ಆಚಾರಗಳ ಶಾಸ್ತ್ರ) (ಮುಂದುವರಿಯುವುದು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಮ್ಮ ದಿನಚರಿ ಹೇಗಿರಬೇಕು ?