ಅಂಗವಿಕಲ ಮಕ್ಕಳ ಸರಕಾರೀ ವಸತಿಗೃಹದಲ್ಲಿರುವ ೪೯ ಮಕ್ಕಳು ಒಂದೇ ಟೂತ್‌ಬ್ರಶ್ ಉಪಯೋಗಿಸುತ್ತಾರೆ !

ಭ್ರಷ್ಟಾಚಾರದಿಂದ ಪೀಡಿತವಾಗಿರುವ ಭಾರತ !
ನವ ದೆಹಲಿ : ಅಂಗವಿಕಲ ಮಕ್ಕಳ ಸರಕಾರಿ ವಸತಿಗೃಹದಲ್ಲಿ ೪೯ ಅಂಗವಿಕಲ ಮಕ್ಕಳು ಕೇವಲ ಒಂದು ಟೂತ ಬ್ರಶ್‌ನಿಂದ ಹಲ್ಲುಜ್ಜುತ್ತಿರುವ ಭಯಾನಕ ವಾಸ್ತವ ಎದುರಿಗೆ ಬಂದಿದೆ. ಅಂಗವಿಕಲ ಮಕ್ಕಳ ಒಂದು ಸರಕಾರಿ ವಸತಿ ಗೃಹಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್.ಎಚ್.ಆರ್.ಸಿ) ಅಧ್ಯಕ್ಷರು ಮತ್ತು ಭಾರತದ ಮಾಜಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಎಲ್. ದತ್ತು ಇವರು ಭೇಟಿ ನೀಡಿದಾಗ ಈ ವಿಷಯ ಬಯಲಾಯಿತು. ಒಂದು ಆಂಗ್ಲ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ದತ್ತು ಇವರು ಕೇಂದ್ರಸರಕಾರವು ಅಂಗವಿಕಲ ಮಕ್ಕಳ ಸರಕಾರಿ ವಸತಿ ಗೃಹಕ್ಕೆ ಕೋಟ್ಯಂತರ ಹಣವನ್ನು ವೆಚ್ಚ ಮಾಡುತ್ತದೆ; ಆದರೆ ಈ ಸಹಾಯ ಪ್ರತ್ಯಕ್ಷದಲ್ಲಿ ಅಲ್ಲಿ ತಲುಪುತ್ತದೆಯೇ? ಎನ್ನುವ ಪ್ರಶ್ನೆ ಇಂದಿಗೂ ಇದೆ, ಎಂದು ಹೇಳಿದ್ದಾರೆ. (ಸ್ವಾತಂತ್ರ್ಯ ದೊರೆತು ೬೮ ವರ್ಷಗಳ ಬಳಿಕವೂ ಇಂತಹ ಸ್ಥಿತಿಯು ಹಿಂದೂ ರಾಷ್ಟ್ರದ ಸ್ಥಾಪನೆ ಬಿಟ್ಟರೆ ಬೇರೆ ಪರ್ಯಾಯವಿಲ್ಲದಂತೆ ಮಾಡುತ್ತದೆ ! ಇದಕ್ಕಾಗಿ ಜವಾಬ್ದಾರರಾಗಿರುವ ಇಲ್ಲಿಯವರೆಗಿನ ಎಲ್ಲ ಸರಕಾರಿ ಅಧಿಕಾರಿಗಳು ಮತ್ತು ಮಂತ್ರಿಗಳ ಮೇಲೆ ಕಠಿಣವಾದ ಕ್ರಮವನ್ನು ಜರುಗಿಸಬೇಕೆಂದು ಎಚ್.ಎಲ್. ದತ್ತು ಇವರು ಕೋರುವರೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಂಗವಿಕಲ ಮಕ್ಕಳ ಸರಕಾರೀ ವಸತಿಗೃಹದಲ್ಲಿರುವ ೪೯ ಮಕ್ಕಳು ಒಂದೇ ಟೂತ್‌ಬ್ರಶ್ ಉಪಯೋಗಿಸುತ್ತಾರೆ !