ಪಾಕಿಸ್ತಾನದ ಗಡಿಯಿಂದಾಗುವ ನುಸುಳುವಿಕೆ ತಡೆಯಲು ಭಾರತದಿಂದ ಲೇಝರ್ ಬೇಲಿ !

ಪಾಕಿಸ್ತಾನಕ್ಕೆ ಶಾಶ್ವತವಾಗಿ ಪಾಠ ಕಲಿಸುವುದೇ ನುಸುಳುವಿಕೆಯನ್ನು
ಶಾಶ್ವತವಾಗಿ ತಡೆಯುವ ಪ್ರಭಾವೀ ಉಪಾಯ !
ನವ ದೆಹಲಿ : ಪಂಜಾಬ್‌ನ ಭಾರತ-ಪಾಕ್ ಗಡಿಯಲ್ಲಿ ಲೇಝರ್ ಕಿರಣಗಳ ಸಹಾಯದಿಂದ ಬೇಲಿ ಹಾಕಲು ಕೇಂದ್ರ ಸರಕಾರ ನಿರ್ಣಯಿಸಿದೆ. ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಒಂದು ಪೊಲೀಸ್ ಠಾಣೆಯ ಮೇಲಾದ ಉಗ್ರವಾದಿಗಳ ಆಕ್ರಮಣದ ನಂತರ ಈ ಪರಿಹಾರೋಪಾಯವನ್ನು ಮಾಡಲಾಗಿದೆ. ಈ ಬೇಲಿಯಿಂದ ನುಸುಳುಕೋರರು, ಗೂಢಚರರು ಮತ್ತು ಕಳ್ಳಸಾಗಾಣಿಕೆದಾರರನ್ನು ತಡೆಯಲು ಸಾಧ್ಯವಾಗಲಿಕ್ಕಿದೆ. ಸದ್ಯ ಪಂಜಾಬ್‌ನಿಂದ ಹೋಗುವ ಭಾರತ-ಪಾಕ್ ಗಡಿಯಲ್ಲಿ ೮ ಇನ್ರಾರೆಡ್ ಹಾಗೂ ಲೇಝರ್ ಬೀಮ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯ ಜವಾಬ್ದಾರಿಯು ಗಡಿಭದ್ರತಾ ದಳದ ಬಳಿ ಇದೆ.

ಇಸ್ರೈಲ್ ಸಹಿತ ಜಗತ್ತಿನ ಅನೇಕ ದೇಶಗಳಲ್ಲಿ ನುಸುಳುಕೋರರನ್ನು ತಡೆಯಲು ಲೇಝರ್ ಬೇಲಿಯ ಉಪಯೋಗವಾಗುತ್ತಿದೆ. ಅಲ್ಲಿ ಸಿಗುತ್ತಿರುವ ಯಶಸ್ಸನ್ನು ನೋಡಿಯೇ ಇಲ್ಲಿಯೂ ಅಂತಹ ವ್ಯವಸ್ಥೆಯನ್ನು ಅಳವಡಿಸಲು ಭದ್ರತಾ ದಳವು ಸರಕಾರಕ್ಕೆ ಪ್ರಸ್ತಾಪ ಮಾಡಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕಿಸ್ತಾನದ ಗಡಿಯಿಂದಾಗುವ ನುಸುಳುವಿಕೆ ತಡೆಯಲು ಭಾರತದಿಂದ ಲೇಝರ್ ಬೇಲಿ !