ನೋಬೆಲ್ ಪುರಸ್ಕಾರ ಸ್ವೀಕರಿಸುವುದಿಲ್ಲ ! - ಶ್ರೀ ಶ್ರೀ ರವಿಶಂಕರ್

ಲಾತೂರು : ಪ್ರಶಸ್ತಿಗಳೆಂದರೆ ಈಗ ರಾಜಕೀಯವಾಗಿದೆ. ನೋಬೆಲ್ ಪ್ರಶಸ್ತಿಗಾಗಿ ನನ್ನ ವಿಚಾರಣೆಯಾಗಿತ್ತು. ನಾನು ಅದನ್ನು ನಿರಾಕರಿಸಿದೆ. ಪ್ರಶಸ್ತಿ ಸಿಗಲಿ ಅಥವಾ ಸಿಗದಿರಲಿ, ಅದರ ಬಗ್ಗೆ ನಾನು ವಿಚಾರ ಮಾಡುವುದಿಲ್ಲ. ನಾನು ಪ್ರಶಸ್ತಿ ಸಿಗಬೇಕೆಂದು ಯಾವುದೇ ಕಾರ್ಯ ಮಾಡುವುದಿಲ್ಲ ಹಾಗೂ ಕೆಲಸ ಮಾಡಿದರೆ ಮಾತ್ರ ಪ್ರಶಸ್ತಿ ಸಿಗುತ್ತದೆಯೆಂದೇನೂ ಇಲ್ಲ.

೧೬ ವರ್ಷದ ಹುಡುಗಿಗೆ ನೋಬೆಲ್ ಪ್ರಶಸ್ತಿ ಸಿಗುತ್ತದೆ, ಆದ್ದರಿಂದ ನೋಬೆಲ್‌ನ ಮಹತ್ವ ಉಳಿಯಲಿಲ್ಲ, ಎಂದು ಆರ್ಟ್ ಆಫ್ ಲಿವಿಂಗ್ಸ್‌ನ ಶ್ರೀ ಶ್ರೀ ರವಿಶಂಕರ್ ಇವರು ಪ್ರತಿಕ್ರಿಯೆ ನೀಡಿದ್ದಾರೆ. ಲಾತೂರ್‌ನ ಮಾಂಜರಾ ನದಿಯ ಅಗಲೀಕರಣದ ಮತ್ತು ಆಳಗೊಳಿಸುವ ಕೆಲಸವು ‘ಜಲಯುಕ್ತ ಲಾತೂರ್ ಎಲ್ಲರಿಗೂ ನೀರು’ ಎಂಬ ಸಂಸ್ಥೆಯ ವತಿಯಿಂದ ನಡೆಯುತ್ತಿದೆ. ಈ ಕೆಲಸದಲ್ಲಿ ಆರ್ಟ್ ಆಫ್ ಲಿವಿಂಗ್ಸ್ ಸಂಸ್ಥೆಯೂ ಪಾಲ್ಗೊಂಡಿದೆ. ಅದಕ್ಕಾಗಿ ಅವರು ಅಲ್ಲಿ ಬಂದಿದ್ದರು. ಆರ್ಟ್ ಆಫ್ ಲಿವಿಂಗ್ಸ್‌ನಿಂದ ಈ ವರ್ಷ ದೇಶಾದ್ಯಂತ ೧೦೫ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದ್ದು ಅದರಲ್ಲಿ ೨೮ ಕೋಟಿ ರೂಪಾಯಿ ಖರ್ಚಾಗಿದೆಯೆಂದು ಹೇಳಿದರು. ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನ ನದಿಗಳನ್ನು ಪುನರ್ಜೀವಿತಗೊಳಿಸುವ ಕಾರ್ಯ ನಡೆಯುತ್ತಿದೆ ಯೆಂದು ಅವರು ಹೇಳಿದರು. (ಹಿಂದೂಗಳ ಸಂತರ ಮೇಲೆ ಆರೋಪ ಮಾಡುವ ಪ್ರಗತಿಪರರು ಹಾಗೂ ಅವರ ಸಂಘಟನೆಗಳು ಎಂದಾದರೂ ಸಮಾಜಕ್ಕಾಗಿ ಇಂತಹ ಕೆಲಸ ಮಾಡುತ್ತವೆಯೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನೋಬೆಲ್ ಪುರಸ್ಕಾರ ಸ್ವೀಕರಿಸುವುದಿಲ್ಲ ! - ಶ್ರೀ ಶ್ರೀ ರವಿಶಂಕರ್