ಆಯೋಜನೆಯ ಕೊರತೆ, ಊಹಿಸುವುದು ಇದರಿಂದಾಗಿ ಕಾರ್ಯಕ್ರಮ ಸ್ಥಳವನ್ನು ಹುಡುಕಲು ೧೪ ಗಂಟೆಗಳಷ್ಟು ಸಮಯ ವ್ಯರ್ಥಗೊಳಿಸಿದ ಮತ್ತು ಕಾರ್ಯಕ್ರಮದಲ್ಲಿ ಅಪೇಕ್ಷಿತವಿರುವ ವಿಷಯ ಮಂಡಿಸುವ ಅವಕಾಶವನ್ನು ಕಳೆದುಕೊಂಡ ದೆಹಲಿಯ ಕಾರ್ಯಕರ್ತರು !

. ಓರ್ವ ಸಂತರ ಕಾರ್ಯಕ್ರಮದ ಮೈದಾನವನ್ನು ಇಂಟರ್‌ನೆಟ್‌ನಲ್ಲಿ 
‘ಸರ್ಚ್’ ಮಾಡುವಾಗ ತಪ್ಪು ಸ್ಪೆಲ್ಲಿಂಗ್ ಹಾಕುವುದು
೧೪..೨೦೧೬ ರಂದು ಮಾತೃ-ಪಿತೃದಿನದ ನಿಮಿತ್ತ ದೆಹಲಿಯಲ್ಲಿ ಒಂದು ದೊಡ್ಡ ಕಾರ್ಯಕ್ರಮವಿತ್ತು. ಆ ಸಂತರು ಹಿಂದೂ ಜನಜಾಗೃತಿ ಸಮಿತಿಯ ಸ್ಥಳೀಯ ಕಾರ್ಯಕರ್ತರನ್ನು ಆಮಂತ್ರಿಸಿದ್ದರು. ಕು. ಕೃತಿಕಾ ಖತ್ರಿ, ಶ್ರೀ. ವಿನಯ ಪಾನವಳಕರ ಮತ್ತು ಶ್ರೀ. ಕಾರ್ತಿಕ ಸಾಳುಂಕೆ ಇವರು ಪತ್ರಿಕಾ ಪ್ರಕಟಣೆಯಲ್ಲಿನ (ಪ್ರೆಸ್‌ನೋಟ್‌ನಲ್ಲಿನ) ಕಾರ್ಯಕ್ರಮದ ಮೈದಾನದ ಹೆಸರನ್ನು ವ್ಯವಸ್ಥಿತವಾಗಿ ಓದಲಿಲ್ಲ. ಪರಿಣಾಮವಾಗಿ ಆ ಹೆಸರು ‘ಗೂಗಲ್ ಮ್ಯಾಪ್’ನಲ್ಲಿ ‘ಸರ್ಚ್’ ಮಾಡುವಾಗ ತಪ್ಪು ಸ್ಪೆಲ್ಲಿಂಗ್ ಹಾಕಿದರು. ‘ಸರ್ಚ್ ರಿಸಲ್ಟ್’ನಲ್ಲಿ ತೋರಿಸಿದ ಮೈದಾನದಲ್ಲಿಯೇ ಕಾರ್ಯಕ್ರಮವಿರಬಹುದು’ ಎಂದು ಊಹಿಸಿ ಕು. ಕೃತಿಕಾ ಮತ್ತು ಶ್ರೀ. ಪಾನವಳಕರ ಅಲ್ಲಿ ಹೋಗಲು ನಿರ್ಧರಿಸಿದರು.

. ಮೈದಾನಕ್ಕೆ ತಲುಪಿದಾಗ ಅಲ್ಲಿ ಯಾವುದೇ ಕಾರ್ಯಕ್ರಮ ಇಲ್ಲದಿರುವುದು ಗಮನಕ್ಕೆ ಬರುವುದು,
 ಅಲ್ಲಿಂದ ಕಾರ್ಯಕ್ರಮದ ಸ್ಥಳಕ್ಕೆ ಹೋಗಲು ಬಹಳ ಸಮಯ ಹಿಡಿದುದರಿಂದ
ಕಾರ್ಯಕ್ರಮದಲ್ಲಿ ಅಪೇಕ್ಷಿತ ವಿಷಯವನ್ನು ಮಂಡಿಸಲಾಗದಿರುವುದು
ಅವರು ಆ ಮೈದಾನಕ್ಕೆ ತಲುಪಿದಾಗ ಅಲ್ಲಿ ಯಾವುದೇ ಕಾರ್ಯಕ್ರಮದ ಆಯೋಜನೆಯಾಗಿರಲಿಲ್ಲ. ಆ ಬಗ್ಗೆ ಅಕ್ಕಪಕ್ಕದವರಲ್ಲಿ ವಿಚಾರಣೆ ಮಾಡಿದಾಗ ‘ಯಾವ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತೋ ಅದೇ ಹೆಸರಿನ ೪ ಮೈದಾನಗಳು ದೆಹಲಿಯಲ್ಲಿವೆ’ ಎಂದು ತಿಳಿಯಿತು. ಪ್ರತ್ಯಕ್ಷ ಕಾರ್ಯಕ್ರಮದ ಸ್ಥಳವು ಅಲ್ಲಿಂದ ೩೦ ಕಿ.ಮೀ. ದೂರದಲ್ಲಿತ್ತು. ಪರಿಣಾಮವಾಗಿ ಅಲ್ಲಿ ತಲುಪುವಾಗ ಬಹಳ ತಡವಾಯಿತು ಮತ್ತು ಕಾರ್ಯಕ್ರಮದಲ್ಲಿ ೧೦-೧೫ ನಿಮಿಷಗಳಷ್ಟು ಸಮಯವು ವಿಷಯ ಮಂಡಿಸಲು ಅವಕಾಶವಿದ್ದರೂ ಅತ್ಯಲ್ಪ ಸಮಯದಲ್ಲಿ ಅದನ್ನು ಮಂಡಿಸಬೇಕಾಯಿತು. ಇದೆಲ್ಲ ಪ್ರಕ್ರಿಯೆಯಲ್ಲಿ ಪ್ರತ್ಯೇಕವಾಗಿ ೭ ಗಂಟೆ ವ್ಯರ್ಥವಾಯಿತು.
. ಕಾರ್ಯಕರ್ತರು ಪರಿಪೂರ್ಣ ಸೇವೆ ಮಾಡುವುದು ಅಪೇಕ್ಷಿತ !
ತನ್ನಲ್ಲಿನ ಸ್ವಭಾವದೋಷಗಳಿಂದಾಗಿ ಸಮಷ್ಟಿ ಕಾರ್ಯದ ಮೇಲೆ ಹೇಗೆ ಗಂಭೀರ ಪರಿಣಾಮವಾಗುತ್ತದೆ’ ಎಂಬುದು ಮೇಲಿನ ತಪ್ಪಿನಿಂದ ಗಮನಕ್ಕೆ ಬರುತ್ತದೆ. ಮೇಲಿನ ರೀತಿಯ ಗಂಭೀರ ಮತ್ತು ಅಕ್ಷಮ್ಯ ತಪ್ಪಿನಿಂದ ಸಾಧನೆಯಲ್ಲಿ ವೇಗದಿಂದ ಅಧೋಗತಿಯಾಗುತ್ತದೆ ಮತ್ತು ಸಮಷ್ಟಿ ಕಾರ್ಯಕ್ಕೆ ಅಪಾರ ಹಾನಿಯಾಗುತ್ತದೆ. ಆದ್ದರಿಂದ ಕಾರ್ಯಕರ್ತರು ಸೇವೆಯ ಬಗ್ಗೆ ಗಾಂಭೀರ್ಯ ಹೆಚ್ಚಿಸಿ ಪರಿಪೂರ್ಣ ಸೇವೆ ಮಾಡಲು ಪ್ರಯತ್ನಿಸಬೇಕು.
ಈ ರೀತಿಯ ಮತ್ತು ಇತರ ಗಂಭೀರ ತಪ್ಪುಗಳು ಯಾವುದೇ ಕಾರ್ಯಕರ್ತರ ವಿಷಯದಲ್ಲಿ ಗಮನಕ್ಕೆ ಬಂದರೆ ಸಾಧಕರು ಅವುಗಳನ್ನು ತಕ್ಷಣ ರಾಮನಾಥಿ ಆಶ್ರಮಕ್ಕೆ dharmatej2023@gmail.com ಈ ಗಣಕೀಯ ವಿಳಾಸಕ್ಕೆ ಕಳುಹಿಸಬೇಕು ಮತ್ತು ಸಂಬಂಧಿಸಿದ ಪ್ರಸಾರಸೇವಕರಿಗೂ ತಿಳಿಸಬೇಕು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಯೋಜನೆಯ ಕೊರತೆ, ಊಹಿಸುವುದು ಇದರಿಂದಾಗಿ ಕಾರ್ಯಕ್ರಮ ಸ್ಥಳವನ್ನು ಹುಡುಕಲು ೧೪ ಗಂಟೆಗಳಷ್ಟು ಸಮಯ ವ್ಯರ್ಥಗೊಳಿಸಿದ ಮತ್ತು ಕಾರ್ಯಕ್ರಮದಲ್ಲಿ ಅಪೇಕ್ಷಿತವಿರುವ ವಿಷಯ ಮಂಡಿಸುವ ಅವಕಾಶವನ್ನು ಕಳೆದುಕೊಂಡ ದೆಹಲಿಯ ಕಾರ್ಯಕರ್ತರು !