ಕಾಲುಂಗುರಗಳು

ವಿವಾಹಿತ ಸ್ತ್ರೀಯರು ಕಾಲ್ಬೆರಳುಗಳಲ್ಲಿ ಕಾಲುಂಗುರಗಳನ್ನು ಧರಿಸುತ್ತಾರೆ. ಕಾಲುಂಗುರಗಳನ್ನು ಹೆಬ್ಬೆರಳಿನ ಹತ್ತಿರದ ಬೆರಳಿನಲ್ಲಿ ಧರಿಸುತ್ತಾರೆ.
ಅ. ಮಹತ್ವ ಮತ್ತು ಲಾಭ
೧. ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ಸ್ತ್ರೀಧರ್ಮದ ಅರಿವಾಗುತ್ತದೆ : ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ತಮ್ಮ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮಗಳ ಅರಿವಾಗುತ್ತದೆ. ಇದರಿಂದ ಸ್ತ್ರೀಯರು ಸ್ವೇಚ್ಛಾಚಾರಿಗಳಾಗದೇ ಬಂಧನದಲ್ಲಿರುತ್ತಾರೆ ಮತ್ತು ಧರ್ಮಪಾಲನೆ ಮಾಡುತ್ತಾರೆ. - (ಸೌ. ಪ್ರಾರ್ಥನಾ ಬುವಾರವರ ಮಾಧ್ಯಮದಿಂದ, ೩.೯.೨೦೦೫)
೨. ಕಾಲುಂಗುರಗಳಿಂದ ಸ್ತ್ರೀಯರ ಪ್ರಾಣದೇಹದ ಶುದ್ಧಿಯಾಗುತ್ತದೆ : ಕಾಲುಂಗುರಗಳ ಗೋಲಾಕಾರದಲ್ಲಿ ಬ್ರಹ್ಮಾಂಡದಿಂದ ಬರುವ ಇಚ್ಛಾಲಹರಿಗಳನ್ನು ಗ್ರಹಿಸುವ ಮತ್ತು ಸಂಗ್ರಹಿಸಿಡುವ ಕ್ಷಮತೆಯಿರುವುದರಿಂದ ಇಚ್ಛಾ ಶಕ್ತಿಯ ಲಹರಿಗಳ ಸ್ಪರ್ಶದಿಂದ ಸ್ತ್ರೀಯರ ಪ್ರಾಣದೇಹದ ಶುದ್ಧಿಯಾಗಲು ಸಹಾಯವಾಗುತ್ತದೆ.
- ಪೂ. (ಸೌ.) ಅಂಜಲಿ ಗಾಡಗೀಳ, ೨೩.೧೧.೨೦೦೫

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಲುಂಗುರಗಳು