ಪುರಾತನ ಕಾಲದಲ್ಲಿ ಭಾರತದಲ್ಲಿ ಹಡಗು ನಿರ್ಮಾಣ ಶಾಸ್ತ್ರವು ವಿಕಸಿತಗೊಂಡಿತ್ತು ಮತ್ತು ಸಮುದ್ರ ಮಾರ್ಗದಿಂದ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಪುರಾವೆಗಳಿವೆ !

೧. ಕ್ರಿಸ್ತಪೂರ್ವ ೨೦೦೦ ರಿಂದ ೩೦೦೦ ಅವಧಿಯಲ್ಲಿ ಭಾರತ ಮತ್ತು ಬ್ಯಾಬಿಲೋನಿಯಾದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿತ್ತೆಂದು, ಸಂಶೋಧಕರಾದ ಸಾವಸೆ ಮತ್ತು ಹೆಪೀಟ ಇವರ ಅಭಿಪ್ರಾಯವಾಗಿದೆ.
೨. ಉತ್ಖನನದ ಸಂದರ್ಭದಲ್ಲಿ ಕಳೆದ ನೂರಾರು ವರ್ಷಗಳ ಭಾರತೀಯ ಸಂಸ್ಕೃತಿಯ ಅಂದರೆ ಸಿಂಧು ಸಂಸ್ಕೃತಿಯ ಅವಶೇಷಗಳು ದೊರೆತಿವೆ. ಅದ ರಲ್ಲಿ ಹಡಗಿನ ಅವಶೇಷಗಳು ದೊರೆತಿವೆ. ಅಲ್ಲದೇ ಲೋಧಲನಲ್ಲಿ ಬಂದರಿನ ಗುರುತು ದೊರೆತಿದೆ. ಆ ಕಾಲದಲ್ಲಿ ಹಡಗು ಕಟ್ಟುವ ಮತ್ತು ಹಡಗು ಪ್ರಯಾಣದ ವಿಷಯದಲ್ಲಿ ತಂತ್ರಜ್ಞಾನ ಚೆನ್ನಾಗಿ ವಿಕಸಿತಗೊಂಡಿರಬೇಕು.
೩. ವೈದಿಕ ಆರ್ಯರಿಗೂ ಹಡಗು ಪ್ರಯಾಣದ ಜ್ಞಾನವಿತ್ತು ಎನ್ನುವ ಕುರಿತು ಋಗ್ವೇದದ ವಿವಿಧ ನಿರ್ದೇಶನಗಳ ಮೂಲಕ ತಿಳಿಯುತ್ತದೆ. ಸಮುದ್ರ ದಲ್ಲಿ ಹೇಗೆ ಸುಖಕರವಾಗಿ ಪ್ರಯಾಣ ಮಾಡಬೇಕು. ಮಹಾಸಾಗರದಲ್ಲಿ ಸಿಲುಕಿರುವ ಮನುಷ್ಯರನ್ನು ಹೇಗೆ ರಕ್ಷಿಸಬೇಕು ? ಎನ್ನುವುದನ್ನು ಸಹ ಉಲ್ಲೇಖಿಸಲಾಗಿದೆ. (ಪುಟ. ಸಂಖ್ಯೆ ೪೫.೧.೫೬.೨)

೪. ರಾಮಾಯಣದಲ್ಲಿಯೂ ಶ್ರೀರಾಮನನ್ನು ಹಡಗಿನಲ್ಲಿಯೇ ಸಮುದ್ರ ತೀರಕ್ಕೆ ತಲುಪಿಸಿರುವ ಉಲ್ಲೇಖವಿದೆ. ಈ ವಿಷಯದಲ್ಲಿ ಸ್ಕಂದ ಪುರಾಣದ ಕಥೆಗಳಲ್ಲಿಯೂ ಉಲ್ಲೇಖವಿದೆ.
೫. ಮಹಾಭಾರತದಲ್ಲಿಯೂ ಪಾಂಡವರು ದ್ವೀಪಗಳನ್ನು ಗೆದ್ದಿರುವ ಉಲ್ಲೇಖ ಕಂಡುಬರುತ್ತದೆ. ಯವದ್ವೀಪ, ಸುವರ್ಣದ್ವೀಪಗಳಂತಹ ಪೂರ್ವ ಭಾಗದ ಜನರೊಂದಿಗೂ ಸಂಪರ್ಕವಿತ್ತು ಎನ್ನುವ ವರ್ಣನೆಯೂ ಕಂಡು ಬರುತ್ತದೆ.
೬. ಕ್ರಿಸ್ತಪೂರ್ವ ೧೫೦೦ ರ ಸುಮಾರಿನಲ್ಲಿ ಭಾರತದಿಂದ ಬಂಗಾರ, ರತ್ನಾಭರಣಗಳು, ಆನೆದಂತ ಮುಂತಾದ ಸಾಮಗ್ರಿಗಳು ಪಶ್ಚಿಮದ ದೇಶ ಗಳಿಗೆ ಹೋಗುತ್ತಿದ್ದವು.
೭. ಕ್ರಿಸ್ತಪೂರ್ವ ಝೋಲಿಯನ್ ರಾಜ್ಯದ ಕಾಲದಲ್ಲಿ ಆನೆದಂತ, ಮಸ್ಲಿನ ಬಟ್ಟೆ, ಮಸಾಲೆ ಪದಾರ್ಥಗಳು, ಬಂಗಾರ, ಮುತ್ತುರತ್ನಗಳು, ಉತ್ಕೃಷ್ಟ ಕಟ್ಟಿಗೆ, ನವಿಲಿನಂತಹ ಪಕ್ಷಿಗಳು ಭಾರತದಿಂದ ಸಮುದ್ರ ಮಾರ್ಗದ ಮುಖಾಂತರ ಪ್ಯಾಲೇಸ್ತಿಯನ್ ಕಡೆಗೆ ಹೋಗುತ್ತಿದ್ದವು.
೮. ಬೌದ್ಧ ವಾಂಙ್ಮಯದಲ್ಲಿ ಹಡಗು ನಿರ್ಮಾಣದ ಮಾಹಿತಿ ಕಂಡು ಬರುತ್ತದೆ. ಅದರಲ್ಲಿ ಹಡಗಿನ ಉತ್ಸಂಗ, ಪಿಟಕ, ಉಪ್ಪಥ, ವಿವಿಧ ಪ್ರಕಾರಗಳ ವರ್ಣನೆಗಳಿವೆ. ಸುಮಾರು ೫೦೦ ರಿಂದ ೧೦೦೦ ಜನರಿಗೆ ಸಾಲುವಷ್ಟು ವಿಶಾಲವಾದ ಹಡಗು ಆ ಸಮಯದಲ್ಲಿತ್ತು.
೯. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಹಡಗು ನಿರ್ಮಾಣದ ಉದ್ಯಮವೂ ಬೃಹತ್ಪ್ರಮಾಣದಲ್ಲಿತ್ತು.
೧೦. ಸಿಕಂದರನು ಭಾರತದ ಮೇಲೆ ದಾಳಿ ಮಾಡಿದ ಸಮಯದಲ್ಲಿ ಯಾವ ಹಡಗುಗಳನ್ನು ಉಪಯೋಗಿಸಲಾಗಿತ್ತೋ, ಅವೆಲ್ಲವೂ ಭಾರತದಲ್ಲಿ ತಯಾರಿಸಲಾಗಿತ್ತು ಮತ್ತು ಇಲ್ಲಿಯ ನೌಕರರೇ ತಯಾರಿಸಿದ್ದಾಗಿತ್ತು ಎನ್ನು ವುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.
ಆ ಸಮಯದಲ್ಲಿ ಸಾಲಂಕೃತ ಮತ್ತು ಗಟ್ಟಿಮುಟ್ಟಾದ ಹಡಗು ನಿರ್ಮಾಣದ ತಂತ್ರಜ್ಞಾನವು ವಂಶಾನುವಂಶವಾಗಿ ಪಾರಂಪಾರಿಕ ಪದ್ಧತಿ ಯಿಂದ ತಿಳಿದಿರಬೇಕು. ಯುದ್ಧಕಾಲದಲ್ಲಿ ಉಪಯೋಗಿಸಲಾಗುವ ಹಡಗನ್ನು ಕೂಡ ನಿರ್ಮಿಸಲಾಗುತ್ತಿತ್ತು. ಇದರಿಂದ ಈ ಪೂರ್ವದಲ್ಲಿ ಈ ತಂತ್ರಜ್ಞಾನವು ಚೆನ್ನಾಗಿ ಅಭಿವೃದ್ಧಿಗೊಂಡಿತ್ತೆನ್ನುವ ನಿಷ್ಕರ್ಷಕ್ಕೆ ಬರಬಹುದಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪುರಾತನ ಕಾಲದಲ್ಲಿ ಭಾರತದಲ್ಲಿ ಹಡಗು ನಿರ್ಮಾಣ ಶಾಸ್ತ್ರವು ವಿಕಸಿತಗೊಂಡಿತ್ತು ಮತ್ತು ಸಮುದ್ರ ಮಾರ್ಗದಿಂದ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಪುರಾವೆಗಳಿವೆ !