ಅನಾವಶ್ಯಕವಾಗಿ ಮಾತನಾಡುವುದನ್ನು ತಡೆಗಟ್ಟಿ !

ಎಷ್ಟೋ ಸಾಧಕರು ಸೇವೆಯ ವಿಷಯದಲ್ಲಿ ಮಾತನಾಡುವಾಗ ವಿಷಯವನ್ನು ಸ್ವಲ್ಪ ಶಬ್ದಗಳಲ್ಲಿ ಸರಿಯಾಗಿ ಮಂಡಿಸುವುದಿಲ್ಲ ಅಥವಾ ಹೇಳಿದ ವಿಷಯವನ್ನೇ ಮತ್ತೆ ಮತ್ತೆ ಹೇಳುತ್ತಾರೆ. ಎಷ್ಟೋ ಸಾಧಕರು ಸಾಧನೆಯ ವರದಿ ನೀಡುವಾಗಲೂ ಇದೇ ರೀತಿ ಮಾಡುತ್ತಾರೆ. ಕೆಲವೊಮ್ಮೆ ಸಾಧಕರು ಬೇರೆಯವರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವಾಗ ಎದುರಿನ ವ್ಯಕ್ತಿಯ ಗ್ರಹಣ ಕ್ಷಮತೆ ಅಥವಾ ಹೇಳುವ ಆವಶ್ಯಕತೆ ಇದೆಯೇ, ಇವುಗಳ ಬಗ್ಗೆ ವಿಚಾರ ಮಾಡದೆ ಮಾತನಾಡುತ್ತಿರುತ್ತಾರೆ.
ಈ ಬಗ್ಗೆ ಸಾಧಕರಿಗೆ ‘ನಾವು ಸಾಧನೆಯ ವಿಷಯದಲ್ಲಿ ಮಾತನಾಡುತ್ತಿರುವುದರಿಂದ ನಮ್ಮ ಸಾಧನೆಯಾಗುತ್ತಿದೆ’ ಎಂದು ಅನಿಸುತ್ತದೆ; ಆದರೆ ಸೀಮಿತವಾಗಿ ಮಾತನಾಡದೆ ಇರುವುದರಿಂದ, ಕೆಲವು ಮಾತುಗಳು ಅನಾವಶ್ಯಕವಾಗಿರುವುದರಿಂದ ಅದರಲ್ಲಿ ಇಬ್ಬರ ಸಮಯವೂ ವ್ಯರ್ಥವಾಗುತ್ತದೆ. ಈಗ ಆಪತ್ಕಾಲವಾಗಿರುವುದರಿಂದ ಒಂದೊಂದು ಕ್ಷಣವೂ ಅಮೂಲ್ಯವಾಗಿರುತ್ತದೆ. ಅನಾವಶ್ಯಕವಾಗಿ ಮಾತನಾಡುವುದರಿಂದ ಶಕ್ತಿಯೂ ಖರ್ಚಾಗುತ್ತದೆ. ಅನಾವಶ್ಯಕವಾಗಿ ಮಾತನಾಡುವ ಬದಲು ನಾಮಜಪ, ಸೇವೆ, ಭಾವಜಾಗೃತಿ ಈ ರೀತಿ ಸಾಧನೆಯ ಪ್ರಯತ್ನಗಳಿಗಾಗಿ ಉಪಯೋಗಿಸಿದರೆ, ಆಗ ತಮ್ಮಲ್ಲಿನ ಚೈತನ್ಯವು ಹೆಚ್ಚಾಗಿ ಕಡಿಮೆ ಮಾತನಾಡಿದರೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. .ಪೂ. ಡಾಕ್ಟರ್ ಹಾಗೂ ಪೂ. (ಸೌ.) ಬಿಂದಾಅಕ್ಕನವರು ತಮಗೆ ಹೇಳಬೇಕಾಗಿರುವ ವಿಷಯವನ್ನು ತುಂಬಾ ಸಣ್ಣದಾಗಿ ೧-೨ ವಾಕ್ಯಗಳಲ್ಲಿ ಹೇಳುತ್ತಾರೆ; ಆದರೆ ಅವರ ಶಬ್ಧವು ದೀರ್ಘಕಾಲದ ತನಕ ಅಂತಃಕರಣದಲ್ಲಿರುತ್ತದೆ. ಪ್ರತಿಯೊಬ್ಬ ಸಾಧಕರ ಪ್ರಕೃತಿ ಬೇರೆಬೇರೆಯಾಗಿರುವುದರಿಂದ ಕಡಿಮೆ ಶಬ್ದಗಳಲ್ಲಿ ಮಾತನಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ; ಆದರೆ ಇದರ ಬಗ್ಗೆ ಜಾಗರೂಕತೆ ವಹಿಸಿದರೆ ಕ್ರಮೇಣ ಸಾಧ್ಯವಾಗುತ್ತದೆ. ಮನಮುಕ್ತವಾಗಿ ಮಾತನಾಡುವುದು ಅಥವಾ ಅನೌಪಚಾರಿಕವಾಗಿ ಮಾತನಾಡುವುದು, ಇದು ಸಾಧನೆಯ ಅಂತರ್ಗತ ಬರುವ ಬೇರೆ ಗುಣಲಕ್ಷಣಗಳಾಗಿದ್ದು ಆ ವಿಷಯದಲ್ಲಿ ಅವಶ್ಯಕತೆಗನುಸಾರ ಮಾಡಿರಿ. - (ಪೂ.) ಶ್ರೀ. ಸಂದೀಪ ಆಳಶಿ (..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅನಾವಶ್ಯಕವಾಗಿ ಮಾತನಾಡುವುದನ್ನು ತಡೆಗಟ್ಟಿ !