ತೋಳುಬಂದಿ

ತೋಳುಬಂದಿಯಲ್ಲಿ ದೇವಿತತ್ತ್ವದ ಶಕ್ತಿಲಹರಿಗಳು ರಟ್ಟೆಗಳಲ್ಲಿ (ತೋಳುಗಳಲ್ಲಿ) ಆಕರ್ಷಿತವಾಗಿ ಸಂಪೂರ್ಣ ಕೈಗಳಲ್ಲಿ ಪಸರಿಸುವುದರಿಂದ ಕೈಗಳಿಗೆ ಕಾರ್ಯವನ್ನು ಮಾಡಲು ಶಕ್ತಿಯು ಸಿಗುತ್ತದೆ.’ - ಈಶ್ವರ (ಕು.ಮಧುರಾ ಭೋಸಲೆಯವರು ಈಶ್ವರ ಅಂಕಿತನಾಮದಿಂದ ಬರೆಯುತ್ತಾರೆ. ೧೨.೧೧. ೨೦೦೭)
ತೋಳುಬಂದಿಗಳಿಂದ ಜೀವಕ್ಕೆ ಅವಶ್ಯವಿರುವ ಶ್ರೀ ಸರಸ್ವತಿದೇವಿಯ ತಾರಕ ಅಥವಾ ಮಾರಕ ಶಕ್ತಿಯು ಸಿಗುತ್ತದೆ : ‘ತೋಳುಬಂದಿಗಳಲ್ಲಿರುವ ಹೊಳೆಯುವ ರತ್ನಗಳಿಂದ ಹೊರಬೀಳುವ ಪ್ರಕಾಶಮಾನ ಲಹರಿಗಳು ಶ್ರೀ ಸರಸ್ವತಿದೇವಿಯ ಕ್ರಿಯಾಶಕ್ತಿಯೊಂದಿಗೆ ಗುಣಸಮಾನತೆ ತೋರಿಸುತ್ತವೆ. ಇದರಿಂದ ಜೀವಕ್ಕೆ ದೇವತೆಯ ಮಾರಕ-ತಾರಕ ಸ್ವರೂಪದ ಅನುಭೂತಿ ಬರುತ್ತದೆ. ಅನಿಷ್ಟ ಶಕ್ತಿಗಳ ತೊಂದರೆಯಿಲ್ಲದ ಸಾಧಕರಿಗೆ ಅವು ಶೀತಲತೆಯನ್ನು ನೀಡುತ್ತವೆ ಮತ್ತು ತೊಂದರೆಯಿರುವ ಸಾಧಕರಿಗೆ ಉಷ್ಣತೆಯನ್ನು ನೀಡುತ್ತವೆ. ತೋಳುಬಂದಿಗಳಿಂದ ಹೊರಬೀಳುವ ಸಪ್ತಕಿರಣಗಳು ಶ್ರೀಸರಸ್ವತಿದೇವಿಯ ಸಪ್ತರೂಪಗಳ ಪ್ರತೀಕವಾಗಿವೆ. ಇವು ಜೀವಕ್ಕೆ ಅವಶ್ಯವಿರುವ ಸಪ್ತ ಲೋಕಗಳಲ್ಲಿ ಕಾರ್ಯವನ್ನು ಮಾಡುವ ಶ್ರೀ ಸರಸ್ವತಿ ದೇವಿಯ ತಾರಕ ಅಥವಾ ಮಾರಕ ರೂಪದಲ್ಲಿ ಕಾರ್ಯನಿರತವಾಗಿರುವ ಶಕ್ತಿಯ ಪ್ರತೀಕವಾಗಿವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ತೋಳುಬಂದಿ