ಚರ್ಚ್ ಭಾಜಪದ ಪಕ್ಷದಲ್ಲಿರಲು ಸಾಧ್ಯವಿಲ್ಲ ! - ರಾಜಕೀಯ ತಜ್ಞರ ಅಭಿಪ್ರಾಯ

ಹೀಗಿದ್ದರೂ ಕ್ರೈಸ್ತರ ಓಲೈಕೆಯೇ ನಡೆಯುತ್ತಿರುವುದು ಹಾಗೂ ಇಲ್ಲಿನ ಸ್ಥಳೀಯರು
ಸರಕಾರದಿಂದ ಇನ್ನೂ ದೂರವಾಗುವರು, ಎಂಬುದು ಸತ್ಯಸಂಗತಿಯಾಗಿದೆ !
ಪಣಜಿ : ಮಾಧ್ಯಮಗಳಿಗನುಸಾರ ಭಾಜಪವು ಕ್ರೈಸ್ತರ ಮತಗಳ ಮೇಲೆ ಕಣ್ಣಿಟ್ಟು ಸ್ವಜನರೊಂದಿಗೆ ದ್ವೇಷ ಕಟ್ಟಿಕೊಂಡರೂ ಪ್ರತ್ಯಕ್ಷದಲ್ಲಿ ಚರ್ಚ್ ಭಾಜಪದ ಪಕ್ಷವನ್ನು ವಹಿಸಲು ಸಾಧ್ಯವೇ ಇಲ್ಲವೆಂದು ಕೆಲವು ರಾಜಕೀಯ ವಿಶ್ಲೇಷಕರ ಹೇಳಿಕೆಯಾಗಿದೆ. ವಾಸ್ತವದಲ್ಲಿ ಸ್ಥಳೀಯ ಚರ್ಚ್‌ಗಳ ಪ್ರಭಾವ ಕ್ರೈಸ್ತ ಮತದಾರರ ಮೇಲಿದೆ. ಪ್ರತಿಯೊಂದು ಚರ್ಚ್‌ನಲ್ಲಿ ಪ್ಯಾರಿಶ್ ಪಸ್ಟ್ರಾಲ್ (ರೋಮನ್ ಕೆಥೋಲಿಕ್ ಚರ್ಚ್‌ಗಳಲ್ಲಿ ಬಿಶಪ್‌ಗೆ ಸಲಹೆ ನೀಡುವ ಸಮಿತಿ) ಮಂಡಳಿ ಇರುತ್ತದೆ ಹಾಗೂ ಸಂಬಂಧಪಟ್ಟ ಪರಿಸರದ ಜನರು ಈ ಮಂಡಳಿಯಲ್ಲಿರುತ್ತಾರೆ.
ಚರ್ಚ್‌ಗಳ ಈ ಪರಿಶ್ ಪಸ್ಟ್ರಾಲ್ ಮಂಡಳಿಗಳ ಅನೇಕ ಮಹತ್ವದ ನಿರ್ಣಯಗಳಲ್ಲಿ ಮಹತ್ವದ ಭೂಮಿಕೆಯಿರುತ್ತದೆ; ಆದರೆ ಈ ಮಂಡಳಿಗಳು ಮತದಾರರಿಗೆ ಭಾಜಪಕ್ಕೆ ಬೆಂಬಲ ಕೊಡಿ, ಎಂದು ಯಾವತ್ತೂ ಹೇಳುವುದಿಲ್ಲ. ಚರ್ಚ್‌ಗಳ ವಿವಿಧ ವಕ್ತಾರರಿಂದ ಹಾಗೂ ಕ್ರೈಸ್ತ ರಾಜಕೀಯ ನೇತಾರರಿಂದ ಲಭಿಸಿದ ಮಾಹಿತಿಗನುಸಾರ ಚರ್ಚ್ ಮತ್ತು ಹೆಚ್ಚಿನ ಕ್ರೈಸ್ತ ಮತದಾರರು ಭಾಜಪದ ಪಕ್ಷದಲ್ಲಿರಲು ಸಾಧ್ಯವಿಲ್ಲದಿರುವುದು ಸ್ಪಷ್ಟವಾಗುತ್ತಿದೆ.
ರಾಶೋಲಾ ಸೆಮಿನರಿಯ ಫಿಲಾಸಫಿ ವಿಭಾಗದ ಡೀನ್ ಫಾದರ್ ವಿಕ್ಟರ್ ಫೆರಾಂವ್ ಇವರು ಮಾಧ್ಯಮ ಗಳಿಗೆ ನೀಡಿದ ಮಾಹಿತಿಗನುಸಾರ ಕ್ರೈಸ್ತ ಮತದಾರರಿಗೆ ಕಾಂಗ್ರೆಸ್ ಸ್ವಾಭಾವಿಕ ಪರ್ಯಾಯವಲ್ಲ; ಆದರೆ ಭಾಜಪ ಪರ್ಯಾಯವಾಗಲು ಸಾಧ್ಯವೇ ಇಲ್ಲ, ಎಂದಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಚರ್ಚ್ ಭಾಜಪದ ಪಕ್ಷದಲ್ಲಿರಲು ಸಾಧ್ಯವಿಲ್ಲ ! - ರಾಜಕೀಯ ತಜ್ಞರ ಅಭಿಪ್ರಾಯ