ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ನೀಡಬೇಕಾಯಿತು ಅಗ್ನಿಪರೀಕ್ಷೆ !

ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾದ ಸನಾತನದ ಸಾಧಕರ ಹಾಗೂ ಅವರ ಕುಟುಂಬದವರ ಭೀಕರ ಅನುಭವ !
ಸ್ವಾತಂತ್ರ್ಯವೀರ ಸಾವರಕರರ ಜೀವನವನ್ನು ನೆನಪಿಸುವ ಲೇಖನಮಾಲೆ !
೨೦೦೯ ರಲ್ಲಿ ಮಡಗಾಂವ್‌ನಲ್ಲಿ ಒಂದು ವಾಹನದಲ್ಲಿ ಸ್ಫೋಟವಾಗಿ ಅದರಲ್ಲಿ ಸನಾತನ ಸಂಸ್ಥೆಯ ಇಬ್ಬರು ಸಾಧಕರು ಮೃತಪಟ್ಟರು. ಹೀಗಿದ್ದರೂ ಸನಾತನ ಸಂಸ್ಥೆಯ ಅಪಕೀರ್ತಿ ಯನ್ನು ಮಾಡಲು ಕಾಂಗ್ರೆಸ್ಸಿನ ತಾಳಕ್ಕನುಸಾರ ಕುಣಿಯುವ ಸೂತ್ರದ ಗೊಂಬೆಗಳಂತೆ ಆರಕ್ಷಕರು ಮತ್ತು ಪ್ರಸಾರಮಾಧ್ಯಮಗಳು ಯಾವುದೇ ಮುನ್ಸೂಚನೆಯನ್ನು ನೀಡದೇ ಸನಾತನದ ಸಾಧಕರನ್ನು ಬಂಧಿಸುವುದು, ಅವರ ಮೇಲೆ ಹೇರಿದ ಅನೇಕ ತೊಂದರೆದಾಯಕ ಕಲಂಗಳು, ಸುಳ್ಳು ಸಾಕ್ಷಿದಾರರು ಹಾಗೂ ಸುಳ್ಳು ಪುರಾವೆಗಳು, ಸಾಧಕರಿಗೆ ನೀಡಿದ ಅಸಹನೀಯ ಶಾರೀರಿಕ ಹಾಗೂ ಮಾನಸಿಕ ಹಿಂಸೆ, ಸಾಧಕರ ಕುಟುಂಬದವರಿಗೆ ನೀಡಿದ ಕಿರುಕುಳ ಮುಂತಾದ ಯಾತನೆಗಳ ಮಾಲಿಕೆಯನ್ನು ಇಲ್ಲಿ ನೀಡುತ್ತಿದ್ದೇವೆ.
ಸಂಕಲನಕಾರರು : ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ

ಸೆರೆಮನೆಯೆಂದರೆ ಪೃಥ್ವಿಯಲ್ಲಿರುವ ನರಕ !
. ಸೆರೆಮನೆಯ ಭೋಜನಕಕ್ಷೆಯಲ್ಲಾಗುವ ಭ್ರಷ್ಟಾಚಾರ
೫ ಅ. ಶ್ರೀ. ಧನಂಜಯ ಅಷ್ಟೇಕರ್
೫ ಅ ೧. ಉಪಾಹಾರಗೃಹದ ಜವಾಬ್ದಾರಿಯಿರುವ ಅಧಿಕಾರಿಗಳು ಪೇಟೆಗಿಂತ ಕಡಿಮೆ ಬೆಲೆಯಲ್ಲಿ ಸಾಮಾನುಗಳನ್ನು ಖರೀದಿಸಿ ಅವುಗಳನ್ನು ಪೇಟೆಗಿಂತ ಹೆಚ್ಚು ಬೆಲೆಗೆ ಮಾರುವುದು ಮತ್ತು ಎರಡೂ ಕಡೆಯಿಂದ ಜೇಬು ತುಂಬಿಸಿಕೊಳ್ಳುವುದು : ಉಪಾಹಾರಗೃಹದ ಜವಾಬ್ದಾರ ಅಧಿಕಾರಿಯು ಸಾಮಾನುಗಳನ್ನು ಹೊರಗಡೆಯಿಂದ ತರಿಸುತ್ತಾನೆ. ತಮ್ಮ ಪರಿಚಯದ ಜನರಿಂದ ಸಾಮಾನುಗಳನ್ನು ಖರೀದಿಸಿ ಅದರಲ್ಲಿ ತನ್ನ ಜೇಬು ತುಂಬಿಸಿಕೊಳ್ಳುತ್ತಾನೆ. ಒಂದು ವೇಳೆ ಸಕ್ಕರೆಯ ಬೆಲೆ ಒಂದು ಕಿಲೋಗೆ ೩೦ ರೂಪಾಯಿಗಳಿದ್ದರೆ, ಆ ಅಧಿಕಾರಿಯು ಅದನ್ನು ೨೫ ರೂಪಾಯಿಗಳಿಗೆ ಖರೀದಿಸಿ ಸೆರೆಮನೆಯಲ್ಲಿ ಅದನ್ನು ೩೫ ರೂಪಾಯಿಗಳಿಗೆ ಮಾರುತ್ತಾನೆ, ಅಂದರೆ ಅವನಿಗೆ ಎರಡೂ ಕಡೆಗಳಿಂದ ಲಾಭವಾಗುತ್ತದೆ.
೫ ಆ. ಶ್ರೀ. ದಿಲೀಪ ಮಾಣಗಾವಕರ್
೫ ಆ ೧. ಪೇಟೆಯಿಂದ ತರಕಾರಿ ಮುಂತಾದವುಗಳನ್ನು ಖರೀದಿಸುವ ವ್ಯವಹಾರದಲ್ಲಿ ಭ್ರಷ್ಟಾಚಾರ ಮಾಡಲು ಅವಕಾಶವಿರುವುದು : ಪ್ಯಾಟೀಸ್ ಮುಂತಾದ ವಸ್ತುಗಳನ್ನು ಸರಕಾರದ ಜವಾಬ್ದಾರ ವ್ಯಕ್ತಿಗಳು ತರುತ್ತಾರೆ; ಆದರೆ ತರಕಾರಿ ಮುಂತಾದವುಗಳನ್ನು ಸೆರೆಮನೆಯಲ್ಲಿನ ಜವಾಬ್ದಾರ ವ್ಯಕ್ತಿಗಳು ಪೇಟೆಯಿಂದ ತರುತ್ತಾರೆ. ಅವರು ವ್ಯವಹಾರದಲ್ಲಿ, ಅದನ್ನು ಆವಶ್ಯಕತೆಗಿಂತ ಹೆಚ್ಚು ತರುವುದು, ಅನ್ಯ ಕೈದಿಗಳು ಸಾಮಾನುಗಳನ್ನು ತರಲು ನೀಡಿದ ಹಣದಿಂದ ತರುವುದು, ಇಂತಹ ಭ್ರಷ್ಟಾಚಾರವನ್ನು ಮಾಡುತ್ತಾರೆ.
೫ ಆ ೨. ಬೇಕರಿಯಲ್ಲಿ ವಿವಿಧ ಪದಾರ್ಥಗಳನ್ನು ಮಾಡುವಾಗ ಲೆಕ್ಕ ಇಡದಿರುವುದರಿಂದ ಬೇಕರಿಯಲ್ಲಿನ ಪದಾರ್ಥಗಳ ಒಟ್ಟು ಹಣವು ಜವಾಬ್ದಾರ ಅಧಿಕಾರಿಯ ಕಿಸೆಗೆ ಹೋಗುವುದು : ೩೦೦ ಕೈದಿಗಳಿಗಾಗಿ ಸುಮಾರು ೬೦೦ ಅಥವಾ ೬೫೦ ಬ್ರೆಡ್ ತಯಾರಿಸುವ ಆವಶ್ಯಕತೆಯಿರುತ್ತದೆ; ಆದರೆ ಅದರ ಲೆಕ್ಕ ಇಡಲಾಗುವುದಿಲ್ಲ. ಕೈದಿಗಳೊಂದಿಗೆ ಸೆರೆಮನೆಯಲ್ಲಿನ ಇತರ ಜನರೂ ತಮಗಾಗಿ ಬ್ರೆಡ್ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಖರ್ಚು ಹೆಚ್ಚಾಗುತ್ತದೆ. ಬೇಕರಿಯಲ್ಲಿ ತಯಾರಿಸಲಾಗುವ ಪದಾರ್ಥಗಳ ಮೇಲೆ ಬೇರೆ ಬೇರೆ ಬೆಲೆಗಳನ್ನು ಹಾಕಲಾಗುತ್ತದೆ. ಒಟ್ಟು ಹಣದ ಲೆಕ್ಕವನ್ನು ಇಡಲಾಗುವುದಿಲ್ಲ.
ಇಂತಹ ಹಣ ಜವಾಬ್ದಾರಿ ಅಧಿಕಾರಿಯ ಕಿಸೆಗೆ ಹೋಗುತ್ತದೆ.
೫ ಆ ೩. ಭೋಜನಕಕ್ಷೆಯನ್ನು ನಡೆಸುವ ಗೂಂಡಾವೃತ್ತಿಯ ಕೈದಿಗಳ ಕೆಳಗೆ ಕೆಲಸ ಮಾಡುವವರಿಗೆ ಒಳ್ಳೆಯ ಊಟ ಸಿಗುವುದು : ಅಲ್ಲಿ ಭೋಜನಕಕ್ಷೆಯನ್ನು ನಡೆಸುವ ಗೂಂಡಾ ಪ್ರವೃತ್ತಿಯ ಕೈದಿಯೊಬ್ಬನಿದ್ದಾನೆ. ಅವನು ತನಗೆ ಬೇಕಾದ ಕೈದಿಗಳಿಗೆ ಮಾತ್ರ ಭೋಜನಕಕ್ಷೆಯೊಳಗೆ ಪ್ರವೇಶ ನೀಡುತ್ತಾನೆ. ಒಳಗಡೆ ಕೆಲಸ ಮಾಡುವವರಿಗೆ ಪರಿಚಯದ ಇನ್ನೂ ೨ ರಿಂದ ೪ ಕೈದಿಗಳಿರುತ್ತಾರೆ, ಅವರಿಗೂ ಅಲ್ಲಿ ಕೆಲಸ ಸಿಗುತ್ತದೆ. ಅದರಿಂದಾಗುವ ಲಾಭವೆಂದರೆ, ಅವರಿಗೆ ಒಳ್ಳೆಯ ಊಟ ಸಿಗುತ್ತದೆ. ಮಾಂಸಾಹಾರಿ ಊಟವಿದ್ದರೆ ಅವರಿಗೆ ಅದು ಹೆಚ್ಚು ಸಿಗುತ್ತದೆ.
೫ ಆ ೪. ಶ್ರೀಮಂತ ಕೈದಿಗಳಿಗೆ ಒಳ್ಳೆಯ ಭೋಜನ ಮಾರಿ ಹಣ ಮಾಡುವುದು ಮತ್ತು ಅವರಿಂದ ಹೆಚ್ಚು ಹಣ ಪಡೆಯಲು ಕೈದಿಗಳ ನಡುವಿನ ಪೈಪೋಟಿಯಿಂದಾಗಿ ಜಗಳವಾಗುವುದು : ಒಳ್ಳೆಯ ಭೋಜನ ಸಿಗುವವರು ಅದನ್ನು ಇತರ ಕೈದಿಗಳಿಗೆ ಮಾರುತ್ತಾರೆ ಮತ್ತು ಅದರಿಂದ ಅವರಿಗೆ ಹಣ ಸಿಗುತ್ತದೆ. ಶ್ರೀಮಂತ ಕೈದಿಗಳಿಂದ ಅವರಿಗೆ ಪ್ರತಿತಿಂಗಳು ೧ ರಿಂದ ೨ ಸಾವಿರ ರೂಪಾಯಿಗಳು ಸಿಗುತ್ತವೆ. ಶ್ರೀಮಂತ ಕೈದಿಗಳೊಂದಿಗೆ ಈ ರೀತಿ ಕರಾರು ಇರುತ್ತದೆ. ಅವರ ಇಷ್ಟದಂತೆ ನ್ಯೂಡಲ್ಸ್, ಆಮ್ಲೇಟ್, ಫ್ರೈಡ್ ರೈಸ್ ಮುಂತಾದವುಗಳನ್ನು ತಯಾರಿಸಿ ಕೊಟ್ಟ ನಂತರ ಅವರಿಗೆ ಹೆಚ್ಚುವರಿ ಹಣ ಸಿಗುತ್ತದೆ. ಶ್ರೀಮಂತ ಕೈದಿಗಳಿಗೆ ತಂಬಾಕು ಇತ್ಯಾದಿ ಬೇಕಾಗಿದ್ದರೆ ಅವರಿಗೆ ಅಲ್ಲಿ ಸಹಜವಾಗಿ ಸಿಗುತ್ತದೆ. ಅಂತಹವರಲ್ಲಿ ಪೈಪೋಟಿ ನಡೆಯು ತ್ತದೆ. ಪರಸ್ಪರರ ಕಾಲೆಳೆಯುತ್ತಾರೆ. ಇದರಿಂದಾಗಿ ಬೆಳಗ್ಗೆಯಿಂದ ರಾತ್ರಿಯ ವರೆಗೆ ಅವರ ನಡುವೆ ಜಗಳಗಳಾಗುತ್ತಿರುತ್ತವೆ. ಕೆಲವೊಮ್ಮೆ ಜಗಳ ವಿಪರೀತಕ್ಕೆ ಹೋಗಿ ಹೊಡೆದಾಟದಲ್ಲಿ ರೂಪಾಂತರಗೊಳ್ಳುತ್ತದೆ. ಊಟ ಬಡಿಸುವವರೊಂದಿಗೆ ಇತರ ಕೈದಿಗಳ ಹೊಡೆದಾಟ ನಡೆಯುತ್ತದೆ ಮತ್ತು ನಂತರ ಅಧಿಕಾರಿಯು ಬಂದು ಈ ಜಗಳವನ್ನು ಬಿಡಿಸಬೇಕಾಗುತ್ತದೆ. ಅದರಲ್ಲಿ ಇತರ ಕೈದಿಗಳೂ ಥಳಿಸಲ್ಪಡುತ್ತಾರೆ ಮತ್ತು ಅವರಿಗೆ ಊಟ ಮಾಡಲು ತಡವಾಗುತ್ತದೆ. ಇಂತಹ ಘಟನೆಗಳು ಪದೇಪದೇ ಘಟಿಸುತ್ತವೆ. ವಾಸ್ತವದಲ್ಲಿ ಎಲ್ಲರಿಗೂ ಒಂದೇ ರೀತಿಯ ಊಟ ಸಿಗಬೇಕು; ಆದರೆ ಅವರು, ನಾವು ಇಲ್ಲಿ ಕೆಲಸ ಮಾಡುತ್ತೇವೆ, ಅದಕ್ಕಾಗಿ ನಮಗೆ ಒಳ್ಳೆಯ ಊಟ ಸಿಗಬೇಕೆಂದು ಹೇಳಿ ಅದರ ಲಾಭ ಪಡೆಯುತ್ತಾರೆ. ಅಲ್ಲಿ ೩೦೦ ಕೈದಿಗಳಿಗಾಗಿ ವಿಶೇಷ ರೀತಿಯ ಊಟ ತಯಾರಿಸಲಾಗುತ್ತದೆ; ಏಕೆಂದರೆ ಅವರಿಂದ ಅವರಿಗೆ ಹಣ ಸಿಗುತ್ತದೆ. (ಮುಂದುವರಿಯುವುದು)
ನಾಲ್ಕು ಗೋಡೆಗಳ ಮಧ್ಯ ಇರುವ ಸೆರೆಮನೆಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಯದ ಸರಕಾರದ ಲಂಚ ಪ್ರತಿಬಂಧಕ ವಿಭಾಗವು ಸಮಾಜದಲ್ಲಿನ ಭ್ರಷ್ಟಾಚಾರವನ್ನು ಎಂದಾದರೂ ತಡೆಗಟ್ಟಬಹುದೇ? ಈ ವಿಭಾಗದ ಅಧಿಕಾರಿಗಳ ವೇತನಕ್ಕಾಗಿ ಜನತೆಯ ಕೋಟ್ಯವಧಿ ರೂಪಾಯಿ
ಯನ್ನು ಏಕೆ ಖರ್ಚು ಮಾಡಬೇಕು ? - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ನೀಡಬೇಕಾಯಿತು ಅಗ್ನಿಪರೀಕ್ಷೆ !