ಸಿಂಹಸ್ಥಪರ್ವದಿಂದ ಹಿಂತಿರುಗುವ ಭಕ್ತರಿಂದ ೫ ರೂಪಾಯಿ ಹೆಚ್ಚುವರಿ ಬಾಡಿಗೆ ವಸೂಲಿ !

ಭಾಜಪ ಸರಕಾರದ ರೈಲ್ವೇ ಆಡಳಿತದ ಹಿಂದೂದ್ರೋಹಿ ಕೃತ್ಯ !
ಉಜ್ಜೈನ್ : ಇಲ್ಲಿ ಸಿಂಹಸ್ಥಪರ್ವಕ್ಕಾಗಿ ಬಂದಿರುವ ಭಕ್ತರು ಹಿಂತಿರುಗಿ ಹೋಗುವಾಗ ರೈಲ್ವೇ ಆಡಳಿತ ಅವರಿಂದ ಸರ್ಚಾಜರ್ (ಹೆಚ್ಚುವರಿ ಬಾಡಿಗೆ) ಎಂದು ಹೆಚ್ಚುವರಿ ೫ ರೂಪಾಯಿಗಳನ್ನು ವಸೂಲು ಮಾಡುತ್ತಿದೆ. ಇದು ಭಕ್ತರ ಆರ್ಥಿಕ ಲೂಟಿ ಹಾಗೂ ವಂಚನೆಯಾಗಿದೆ, ಎಂದು ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ ಶರ್ಮಾ ಹೇಳಿದರು. (ಇತರ ಧರ್ಮದವರ ಹಬ್ಬಗಳಿಗೆ ಹೀಗೆ ತೆರಿಗೆ ವಿಧಿಸುವ ಧೈರ್ಯ ರೈಲ್ವೇ ಆಡಳಿತಕ್ಕಿದೆಯೇ ? - ಸಂಪಾದಕರು) ಪ್ರಥಮ ಅಮೃತ ಸ್ನಾನಕ್ಕೆ ಸಾಕಷ್ಟು ಜನದಟ್ಟನೆ ಇಲ್ಲದ ಕಾರಣ ಬಹಳಷ್ಟು ರಿಯಾಯಿತಿಗಳನ್ನು ನೀಡಿ ಭಕ್ತರನ್ನು ಸಿಂಹಸ್ಥಕ್ಕೆ ಬರಬೇಕೆಂದು ರಾಜ್ಯದ ಭಾಜಪ ಸರಕಾರವು ಆಮಂತ್ರಣ ನೀಡಿತ್ತು; ಆದರೆ ಕೇಂದ್ರದಲ್ಲಿನ ರೈಲ್ವೇ ಆಡಳಿತದಿಂದ ಹೆಚ್ಚುವರಿ ಬಾಡಿಗೆ ವಸೂಲು ಮಾಡಿ ಭಕ್ತರನ್ನು ದೋಚಲಾಗುತ್ತಿದೆ. ಈ ವಿಷಯವು ಭಾಜಪದ ಇಬ್ಬಗೆಯ ಭೂಮಿಕೆ ತೋರಿಸುತ್ತದೆ, ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಿಂಹಸ್ಥಪರ್ವದಿಂದ ಹಿಂತಿರುಗುವ ಭಕ್ತರಿಂದ ೫ ರೂಪಾಯಿ ಹೆಚ್ಚುವರಿ ಬಾಡಿಗೆ ವಸೂಲಿ !