೨೭ ವರ್ಷಗಳ ನಂತರ ತೆರೆಯಲ್ಪಟ್ಟ ಶ್ರೀನಗರದಲ್ಲಿನ ಬೇತಾಳ ಭೈರವ ಮಂದಿರ !

ಜಿಹಾದಿ ಉಗ್ರರಿಂದಾಗಿ ೧೯೯೦ ರಲ್ಲಿ ಈ ದೇವಸ್ಥಾನವನ್ನು ಮುಚ್ಚಲಾಗಿತ್ತು !
ಕಾಶ್ಮೀರಿ ಹಿಂದೂಗಳ ಸಂಘಟಿತ ಹೋರಾಟಕ್ಕೆ ಸಂದ ಜಯ !
ಶ್ರೀನಗರ : ಇಲ್ಲಿನ ಹೃದಯಭಾಗದಲ್ಲಿರುವ ಪ್ರಾಚೀನ ಬೇತಾಳ ಭೈರವ ಮಂದಿರವನ್ನು ೨೭ ವರ್ಷ ಗಳ ನಂತರ ತೆರೆಯಲಾಯಿತು. ಅನಂತರ ಕಾಶ್ಮೀರಿ ಹಿಂದೂಗಳು ವಿಧಿಪೂರ್ವಕ ಶ್ರೀ ಭೈರವ ದೇವರ ಪೂಜಾರ್ಚನೆ ಮಾಡಿದರು.
. ೧೯೯೦ ರಲ್ಲಿ ಜಿಹಾದಿ ಉಗ್ರರಿಂದಾಗಿ ೪ ಲಕ್ಷದ ೫೦ ಸಾವಿರ ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರವನ್ನು ಬಿಟ್ಟು ಹೋಗಬೇಕಾಯಿತು. ಅಂದಿನಿಂದ ಬೇತಾಳ ಭೈರವ ಮಂದಿರವನ್ನು ಮುಚ್ಚಲಾಗಿತ್ತು.
. ಅನಂತರ ಸ್ಥಳೀಯ ಮತಾಂಧರು ಈ ದೇವಸ್ಥಾನದ ಭೂಮಿಯನ್ನು ಅನಧಿಕೃತವಾಗಿ ಒಬ್ಬ ಕಟ್ಟಡ ನಿರ್ಮಾಪಕನಿಗೆ ಮಾರಾಟ ಮಾಡಿದರು.
. ಈ ವಿಷಯದಲ್ಲಿ ಕಾಶ್ಮೀರಿ ಪಂಡಿತರು ತೀವ್ರ ಅಸಂತೋಷವನ್ನು ವ್ಯಕ್ತಪಡಿಸಿದರು ಹಾಗೂ ಅವರು ಇದರ ವಿರುದ್ಧ ಕಾಶ್ಮಿರಿ ಪಂಡಿತ್ ಸಂಘರ್ಷ ಸಮಿತಿ ಯನ್ನು ಸ್ಥಾಪಿಸಿದರು.
. ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯ ಧ್ವಜದಡಿಯಲ್ಲಿ ದೇಶ-ವಿದೇಶದ ಕಾಶ್ಮೀರಿ ಪಂಡಿತರು ಸಂಘಟಿತರಾದರು. ಅವರು ಕಾನೂನುಮಾರ್ಗವನ್ನು ಅವಲಂಬಿಸಿ ದೇವಸ್ಥಾನದ ಭೂಮಿಯನ್ನು ಆ ಕಟ್ಟಡ ನಿರ್ಮಾಪಕನ ವಶದಿಂದ ಯಶಸ್ವಿಯಾಗಿ ಮುಕ್ತ ಗೊಳಿಸಿದರು.
. ಶ್ರೀ ಭೈರವ ದೇವರ ಜಯಂತಿಯನ್ನು ಆಚರಿಸುವ ಪರಂಪರೆಯನ್ನು ಪುನಃ ಆರಂಭಿಸಲು ದೇಶಾದ್ಯಂತ ಹಾಗೂ ವಿದೇಶದಿಂದ ಅನೇಕ ಕಾಶ್ಮೀರಿ ಪಂಡಿತರು ಒಟ್ಟಾಗಿದ್ದರು.
. ಓರ್ವ ಕಾಶ್ಮೀರಿ ಹಿಂದೂ ನೀಡಿದ ಮಾಹಿತಿ ಗನುಸಾರ, ೧೯೯೦ಕ್ಕಿಂತ ಮೊದಲು ಬೇತಾಳ ಭೈರವ ಮಂದಿರದಲ್ಲಿ ಅಮರನಾಥ ಯಾತ್ರೆಯ ಅವಧಿಯಲ್ಲಿ ಯಾತ್ರಿಕರಿಗೆ ಉಚಿತ ಊಟ ಕೊಡಲಾಗುತ್ತಿತ್ತು. ಅಷ್ಟು ಮಾತ್ರವಲ್ಲ, ಶ್ರೀ ಭೈರವ ದೇವರ ಜಯಂತಿಯ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸ ಲಾಗುತ್ತಿತ್ತು. ಈ ಸಮಾರಂಭದಲ್ಲಿ ದೇಶದ ಮೂಲೆ ಮೂಲೆಗಳಿಂದ ಭಕ್ತರು ಭಾಗವಹಿಸುತ್ತಿದ್ದರು.
....................................................................................................................................
ಕಾಶ್ಮೀರದಲ್ಲಿನ ೫೮೩ ದೇವಸ್ಥಾನಗಳಲ್ಲಿ ಹೆಚ್ಚಿನ ದೇವಸ್ಥಾನಗಳು
 ಜಿಹಾದಿ ಉಗ್ರವಾದಿಗಳಿಂದ ಧ್ವಂಸವಾಗಿವೆ !
ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯು ನೀಡಿದ ಮಾಹಿತಿಗನುಸಾರ ೧೯೯೦ ರ ಮೊದಲು ಕಾಶ್ಮೀರದಲ್ಲಿ ೫೮೩ ದೇವಸ್ಥಾನಗಳಿದ್ದವು. ಅವುಗಳಲ್ಲಿ ಹೆಚ್ಚಿನ ದೇವಸ್ಥಾನಗಳನ್ನು ಜಿಹಾದಿ ಉಗ್ರರು ಧ್ವಂಸ ಮಾಡಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
೨೭ ವರ್ಷಗಳ ನಂತರ ತೆರೆಯಲ್ಪಟ್ಟ ಶ್ರೀನಗರದಲ್ಲಿನ ಬೇತಾಳ ಭೈರವ ಮಂದಿರ !