ತರೀಕೆರೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ನಡೆದ ಹಿಂದೂ ಧರ್ಮಜಾಗೃತಿ ಸಭೆ !

(ಎಡದಿಂದ) ಸೌ. ಕಾಂಚನಾ ಶೇಟ್, ಕು. ಭವ್ಯಾ ಗೌಡ , ಶ್ರೀ ಷI ಬ್ರI ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು,
ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ. ಗುರುಪ್ರಸಾದ
ತರೀಕೆರೆ : ‘ಸಮಾಜದಲ್ಲಿ ರಕ್ಷಕರಿಲ್ಲದಿದ್ದರೆ ಭಕ್ಷಕರು ಹೆಚ್ಚುತ್ತಿರುತ್ತಾರೆ. ರಕ್ಷಕರು ಜಾಗೃತರಾದರೆ ಮಾತ್ರ ಎಲ್ಲರು ಸುರಕ್ಷಿತವಾಗಿರಲು ಸಾಧ್ಯ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬಂತೆ ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ, ಧರ್ಮ ಮತ್ತು ನಮ್ಮ ರಕ್ಷಣೆಯಾಗ ಬೇಕಾದರೆ ಅನಾಹುತವಾದ ನಂತರ ವಿಚಾರ ಮಾಡುವುದಕ್ಕಿಂತ ಅಹಿತಕರ ಘಟನೆ ಘಟಿಸುವ ಮೊದಲೇ ಜಾಗೃತರಾಗುವುದು ಅವಶ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಧರ್ಮ ರಕ್ಷಣೆಗಾಗಿ ಸಂಘಟಿತರಾಗಿ ಹೋರಾಡೋಣ ಎಂದು ಶ್ರೀ ಷI ಬ್ರI ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿಗೆ ಕರೆ ನೀಡಿದರು. ಇವರು ತರೀಕೆರೆಯ ಬಯಲು ರಂಗಮಂದಿರದಲ್ಲಿ ಇತ್ತೀಚೆಗೆ ನಡೆದ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ಶ್ರೀ ಷI ಬ್ರI ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾಡಿದರು. ಈ ಸಮಯದಲ್ಲಿ ವ್ಯಾಸಪೀಠದಲ್ಲಿ ಸನಾತನ ಸಂಸ್ಥೆಯ ಸೌ. ಕಾಂಚನಾ ಶೇಟ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ, ರಣರಾಗಿಣಿ ಶಾಖೆಯ ಕು. ಭವ್ಯಾ ಗೌಡ ಇವರು ಉಪಸ್ಥಿತರಿದ್ದರು.
   ರಣರಾಗಿಣಿಯ ಕು. ಭವ್ಯಾ ಗೌಡ ಇವರು ಮತನಾಡುತ್ತಾ, ಇಂದು ಒಂದು ಕಡೆಯಿಂದ ಹಿಂದೂ ಯುವತಿಯರ ಮೇಲೆ ದಿನೇದಿನೇ ಅತ್ಯಾಚಾರ, ದೌರ್ಜನ್ಯವಾಗುತ್ತಿದ್ದರೆ, ಇನ್ನೊಂದು ಕಡೆಯಿಂದ ಮತಾಂತರ ಲವ್ ಜಿಹಾದ್‌ನಂತಹ ಪ್ರಸಂಗಗಳು ಹೆಚ್ಚುತ್ತಿವೆ. ಇಂತಹ ಅಹಿತಕರ ಘಟನೆಯನ್ನು ತಡೆಯಬೇಕು. ಸಿಡಿಲಿನ ವೇಗದಿಂದ ರಣಾಂಗಣದಲ್ಲಿ ಧೈರ್ಯದಿಂದ ಹಾಗೂ ಪಟ್ಟುಹಿಡಿದು ಹೋರಾಡಿದ ಸ್ತ್ರೀ-ರಣರಾಗಿಣಿ ಎಂದು ಝಾನ್ಸಿರಾಣಿ ಲಕ್ಷ್ಮೀಬಾಯಿಗೆ ಸಂಬೋಧಿಸಲಾಗುತ್ತದೆ. ಇದೇ ರೀತಿ ಪ್ರತಿಯೊಬ್ಬ ಹಿಂದೂ ಯುವತಿಯು ಹೋರಾಡಬೇಕು ಎಂಬ ಉದ್ದೇಶದಿಂದ ರಣರಾಗಿಣಿ ಶಾಖೆಯನ್ನು ಪ್ರಾರಂಭಿಸುತ್ತಿದ್ದು ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕೆಂದು ಉಪಸ್ಥಿತರಿಗೆ ಕರೆ ನೀಡಿದರು.
   ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ ಹಾಗೂ ಸನಾತನ ಸಂಸ್ಥೆಯ ಸೌ. ಕಾಂಚನಾ ಶೇಟ್ ಇವರು ಸಹ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ತರೀಕೆರೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ನಡೆದ ಹಿಂದೂ ಧರ್ಮಜಾಗೃತಿ ಸಭೆ !