ಮಂಗಳಸೂತ್ರ

ಮಂಗಳಸೂತ್ರದ ಬಟ್ಟಲುಗಳು ಹೇಗಿರಬೇಕು ?
ಮಂಗಳಸೂತ್ರದ ಬಟ್ಟಲುಗಳು ಗೋಲಾಕಾರವಾಗಿರಬೇಕು ಮತ್ತು ಅವುಗಳ ಮೇಲೆ ಯಾವುದೇ ವಿನ್ಯಾಸವಿರಬಾರದು.
ಗೋಲಾಕಾರ ಬಟ್ಟಲುಗಳ ಮಹತ್ವ
೧. ಗೋಲಾಕಾರವು ಶೂನ್ಯ, ಅಂದರೆ ಟೊಳ್ಳಿರುವ ಬ್ರಹ್ಮನಿಗೆ ಸಂಬಂಧಿಸಿರುವುದರಿಂದ ಜೀವದ ಅವಶ್ಯಕತೆಗನುಸಾರ ಆಯಾಯ ಸ್ತರದಲ್ಲಿನ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಇತರ ಆಕಾರಗಳಿಗಿಂತ ಹೆಚ್ಚಿರುತ್ತದೆ. ಆದುದರಿಂದ ಗೋಲಾಕಾರವನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.
೨. ಗೋಲಾಕಾರವು (ಗೋಲವು) ಜ್ಞಾನಶಕ್ತಿಯ ಪ್ರತೀಕವಾಗಿದೆ.
೩. ಗೋಲಾಕಾರವು ಶಿವ-ಶಕ್ತಿಯರ ಸತ್ತ್ವ ಗುಣಕ್ಕೆ ಸಂಬಂಧಿಸಿದೆ.
೪. ಗೋಲಾಕಾರದ ಮಧ್ಯಬಿಂದುವು ಆಘಾತಾತ್ಮಕ ಶಕ್ತಿರೂಪೀ ಲಹರಿಗಳನ್ನು ಪ್ರದಾನಿಸುವುದಾಗಿದ್ದರೆ, ಬಾಹ್ಯಗೋಲವು ಶಿವರೂಪಿ ಬ್ರಹ್ಮನಿಗೆ ಸಂಬಂಧಿಸಿದೆ. - (ಪೂ. (ಸೌ.) ಅಂಜಲಿ ಗಾಡಗೀಳ ಓರ್ವ ವಿದ್ವಾಂಸ ಅಂಕಿತನಾಮದಿಂದ ಬರೆಯುತ್ತಾರೆ. ಮಾರ್ಗಶಿರ ಕೃಷ್ಣ ಅಷ್ಟಮಿ, ಕಲಿಯುಗ ವರ್ಷ ೫೧೧೦ (೨೭.೧೦.೨೦೦೬))

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಂಗಳಸೂತ್ರ