ಶ್ರೀನಗರದ ಎನ್‌ಐಟಿಯಲ್ಲಿ ಹಿಂಸಾಚಾರಕ್ಕೆ ರಾಷ್ಟ್ರಪ್ರೇಮಿ ವಿದ್ಯಾರ್ಥಿಗಳನ್ನೇ ಹೊಣೆ ಎಂದ ತನಿಖಾ ವರದಿ !

ರಾಷ್ಟ್ರಧ್ವಜವನ್ನು ಹಾರಿಸುವ ರಾಷ್ಟ್ರಪ್ರೇಮಿ ಯುವಕರನ್ನೇ
ದೋಷಿಗಳನ್ನಾಗಿ ಮಾಡುವವರು ಭಾರತೀಯರೋ ಪಾಕಿಸ್ತಾನಿಗಳೋ ?
ಜಮ್ಮು : ಶ್ರೀನಗರದ ಎನ್‌ಐಟಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿರುವ ಹಿಂಸಾಚಾರದ ತನಿಖೆ
ಮಾಡುವ ಅಪರ ಆಯುಕ್ತರ ವರದಿಯಲ್ಲಿ ಕಾಶ್ಮೀರದ ಹೊರಗಿನ ವಿದ್ಯಾರ್ಥಿಗಳನ್ನೇ ದೋಷಿಗಳೆಂದು ನಿರ್ಧರಿಸಿರುವುದು ತಿಳಿದುಬಂದಿದೆ. ಇದುವರೆಗೆ ಆ ವರದಿ ಸಾರ್ವಜನಿಕವಾಗಿಲ್ಲ. ಈ ವರದಿಯಲ್ಲಿ ಎನ್‌ಐಟಿಯ ಕೆಲವು ವಿದ್ಯಾರ್ಥಿಗಳು ಇತರ ರಾಜ್ಯ ಗಳಿಂದ ತ್ರಿವರ್ಣಧ್ವಜಗಳನ್ನು ತರಿಸಿದ್ದಾರೆ, ಆ ಧ್ವಜ ಗಳನ್ನು ತಲುಪಿಸಲು ಬಂದಿದ್ದ ಕೊರಿಯರ್‌ನ ಹುಡುಗ ನಿಗೆ ಹೊಡೆದು ಭಾರತ ಮಾತಾ ಕೀ ಜೈ ಎಂದು ಘೋಷಣೆ ನೀಡಲು ಹೇಳಲಾಗಿತ್ತು, ಎಂದು ಆರೋಪಿಸಲಾಗಿದೆ. ಎನ್‌ಐಟಿಯಲ್ಲಿ ೨ ಸಾವಿರದ ೭೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಕಾಶ್ಮೀರದ ಹೊರಗಿನವರಾಗಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀನಗರದ ಎನ್‌ಐಟಿಯಲ್ಲಿ ಹಿಂಸಾಚಾರಕ್ಕೆ ರಾಷ್ಟ್ರಪ್ರೇಮಿ ವಿದ್ಯಾರ್ಥಿಗಳನ್ನೇ ಹೊಣೆ ಎಂದ ತನಿಖಾ ವರದಿ !