ಶಬರಿಮಲೈ ಮಂದಿರ ಪ್ರವೇಶಕ್ಕೂ ಋತುಸ್ರಾವದ ಶುಚಿರ್ಭೂತಕ್ಕೂ ಏನು ಸಂಬಂಧ ? - ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ಧರ್ಮಕ್ಕೆ ಸಂಬಂಧಿಸಿದ ವಿಷಯದಲ್ಲಿ ನ್ಯಾಯಾಲಯ ಅಲ್ಲ, ಶಂಕರಾಚಾರ್ಯರು,
 ಧರ್ಮಾಚಾರ್ಯರೇ ನಿರ್ಧಾರ ನೀಡಲು ಸಾಧ್ಯ ಎಂಬುದೇ ಈ ಪ್ರಶ್ನೆಯಿಂದ ಸ್ಪಷ್ಟವಾಗುತ್ತದೆ !
ನವ ದೆಹಲಿ : ಕೇರಳದ ಶಬರಿಮಲೈ ಮಂದಿರ ವ್ಯವಸ್ಥಾಪನೆಯು ‘೧೦ ರಿಂದ ೫೦ ವರ್ಷ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ; ಏಕೆಂದರೆ ಅವರು ಋತುಸ್ರಾವದಿಂದ ೪೧ ದಿನಗಳ ವ್ರತದ ಸಮಯದಲ್ಲಿ ಶುಚಿರ್ಭೂತರಾಗಿರಲು ಸಾಧ್ಯವಿಲ್ಲ’, ಎಂದು ಹೇಳಿತು.
ಆಗ ನ್ಯಾಯಾಲಯವು ಋತುಸ್ರಾವ ಮತ್ತು ಶುಚಿರ್ಭೂತಕ್ಕೂ ಏನು ಸಂಬಂಧ ? ಎಂಬ ಪ್ರಶ್ನೆ ಕೇಳಿತು. (ಋತುಸ್ರಾವದ ಕಾಲದಲ್ಲಿ ಮಹಿಳೆಯರಲ್ಲಿ ರಜೋಗುಣ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಅವರು ದೇವಸ್ಥಾನಗಳಂತಹ ಸಾತ್ತ್ವಿಕ ಹಾಗೂ ಪವಿತ್ರ ಸ್ಥಳಗಳಿಗೆ ಹೋದರೆ ಅಲ್ಲಿ ಅವರಿಗೆ ತೊಂದರೆಯಾಗುವ ಸಾಧ್ಯತೆ ಯಿದೆ; ಆದ್ದರಿಂದ ಅವರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಇಂತಹ ಶಾಸ್ತ್ರೀಯ ನಿಯಮಗಳನ್ನು ಹೇಳಲಾಗಿದೆ. - ಸಂಪಾದಕರು)
ದೇವಸ್ಥಾನದ ವ್ಯವಸ್ಥಾಪನೆಯನ್ನು ನೋಡಿಕೊಳ್ಳುವ ತ್ರಾವಂಕೋರ್ ದೇವಸ್ವಮ್ ಬೋರ್ಡ್‌ನ ನ್ಯಾಯವಾದಿ ಕೆ.ಕೆ. ವೇಣುಗೋಪಾಲ ಇವರು ‘ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ಲಿಂಗತಾರತಮ್ಯವಲ್ಲ, ಅದು ತರ್ಕಾಧಾರಿತ ವರ್ಗೀಕರಣವಾಗಿದೆ, ಆ ಮೂಲಕ ಕೆಲವು ನಿರ್ದಿಷ್ಟ ಮಹಿಳೆಯರಿಗೆ ನಿರ್ಬಂಧ ಹೇರಲಾಗಿದೆ’, ಎಂದು ನ್ಯಾಯಾಧೀಶ ದೀಪಕ್ ಮಿಶ್ರಾ ಇವರ ನೇತೃತ್ವದ ಮೂರು ಸದಸ್ಯರ ಪೀಠಕ್ಕೆ ಹೇಳಿದರು. ಆಗ ನ್ಯಾಯಾಲಯವು ಈ ಮೇಲಿನಂತೆ ಪ್ರಶ್ನೆಯನ್ನು ಕೇಳಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶಬರಿಮಲೈ ಮಂದಿರ ಪ್ರವೇಶಕ್ಕೂ ಋತುಸ್ರಾವದ ಶುಚಿರ್ಭೂತಕ್ಕೂ ಏನು ಸಂಬಂಧ ? - ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ