ಅರುಣಾಚಲದಲ್ಲಿನ ಸೈನಿಕರ ಮತ್ತು ಅಧಿಕಾರಿಗಳಲ್ಲಿನ ಹೊಡೆದಾಟವು ಬಂಡಾಯವಲ್ಲ ! - ಸೇನಾದಳದಿಂದ ಸ್ಪಷ್ಟೀಕರಣ

ಅರುಣಾಚಲ ಪ್ರದೇಶ : ಇಲ್ಲಿನ ಹಲಯೂಲಿ ಯಾಂಗ ಸೇನಾ ತಾಣದಲ್ಲಿನ ಒಂದು ದಳದ ನಿತ್ಯದ ಪಥಸಂಚಲನದಲ್ಲಿ ಒಬ್ಬ ಸೈನಿಕನು ಮೃತಪಟ್ಟನು. ಆದ್ದರಿಂದ ಉಳಿದ ಸೈನಿಕರು ಆಕ್ರೋಶಗೊಂಡು ಪಥಸಂಚಲನವನ್ನು ವಿರೋಧಿಸಿದರು. ನಂತರ ಅಧಿಕಾರಿಗಳು ಮತ್ತು ಸೈನಿಕರಲ್ಲಿ ಹೊಡೆದಾಟವಾಯಿತು. ಈ ವಿಷಯದಲ್ಲಿ ಸ್ಪಷ್ಟೀಕರಣ ನೀಡುವಾಗ ಸೇನಾದಳವು, ಈ ಹೊಡೆದಾಟವು ಬಂಡಾಯವಲ್ಲ. ೨೦೧೨ ರಲ್ಲಿಯೂ ಲಡಾಖ್‌ನಲ್ಲಿ ಸೈನಿಕರು ಮತ್ತು ಅಧಿಕಾರಿಗಳಲ್ಲಿ ವಿವಾದವಾಗಿ ಹೊಡೆದಾಟದ ಘಟನೆ ಘಟಿಸಿತ್ತು, ಎಂದಿದೆ. (ಸೈನಿಕರು ಮತ್ತು ಅಧಿಕಾರಿಗಳಲ್ಲಿ ಪರಸ್ಪರರ ಬಗ್ಗೆ ಪ್ರೀತಿ ಹಾಗೂ ಆತ್ಮೀಯತೆ ಇಲ್ಲದಿದ್ದರೆ, ಇಂತಹ ಘಟನೆಗಳು ಇನ್ನು ಮುಂದೆ ಸಹ ನಡೆಯುತ್ತಾ ಇರಬಹುದು ಹಾಗೂ ಪ್ರತ್ಯಕ್ಷ ಯುದ್ಧದ ಸಮಯದಲ್ಲಿ ಭಾರತಕ್ಕೆ ಅದರಿಂದ ಪೆಟ್ಟು ಬೀಳಬಹುದು. ಇದನ್ನು ತಪ್ಪಿಸಲು ಸೇನಾದಳ ಇವೆರಡು ಸಮೂಹಗಳಲ್ಲಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಬೇಕು !- ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅರುಣಾಚಲದಲ್ಲಿನ ಸೈನಿಕರ ಮತ್ತು ಅಧಿಕಾರಿಗಳಲ್ಲಿನ ಹೊಡೆದಾಟವು ಬಂಡಾಯವಲ್ಲ ! - ಸೇನಾದಳದಿಂದ ಸ್ಪಷ್ಟೀಕರಣ