ಫಲಕ ಪ್ರಸಿದ್ಧಿಗಾಗಿ

. ಹಿಂದೂಗಳ ಸಂಘಟಿತ ಹೋರಾಟದಿಂದ ಶ್ರೀನಗರದಲ್ಲಿರುವ
ವೇತಾಳ ಭೈರವ ದೇವಾಲಯವನ್ನು ೨೭ ವರ್ಷಗಳ ನಂತರ ತೆರೆಯಲಾಯಿತು !
ಜಿಹಾದಿ ಉಗ್ರರಿಂದಾಗಿ ನಾಲ್ಕೂವರೆ ಲಕ್ಷ ಕಾಶ್ಮೀರಿ ಹಿಂದೂಗಳು ೧೯೯೦ ರಲ್ಲಿ ಕಾಶ್ಮೀರವನ್ನು ಬಿಟ್ಟು ಹೋದ ಬಳಿಕ ಶ್ರೀನಗರದಲ್ಲಿರುವ ವೇತಾಳ ಭೈರವ ದೇವಾಲಯಕ್ಕೆ ಬೀಗ ಜಡಿಯಲಾಯಿತು. ಅನಂತರ ೨೭ ವರ್ಷಗಳ ಬಳಿಕ ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿಯು ನಡೆಸಿದ ಹೋರಾಟದಿಂದ ದೇವಾಲಯವನ್ನು ತೆರೆಯಲಾಗಿದೆ.

. ಆಯೋಜಕರ ಮೇಲೆ ದೇಶದ್ರೋಹದ ಅಪರಾಧ ದಾಖಲಿಸಿ ಅವರನ್ನು ಕಾರಾಗೃಹಕ್ಕೆ ತಳ್ಳಿರಿ !
ದಕ್ಷಿಣ ಕಾಶ್ಮೀರದಲ್ಲಿ ಕೆಲವು ದಿನಗಳ ಹಿಂದೆ ಒಂದು ಕ್ರಿಕೆಟ್ ಪಂದ್ಯಾವಳಿ ಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಕ್ಕೆ ಉಗ್ರರ ಹೆಸರು ನೀಡಲಾಯಿತು ಹಾಗೂ ಈ ಸ್ಪರ್ಧೆಯ ಸಮಯದಲ್ಲಿ ಈದ್ಗಾ ಮೈದಾನ ದಿಂದ ಪೊಲೀಸರನ್ನು ಹಾಗೂ ಸೈನ್ಯವನ್ನು ೨ ತಿಂಗಳ ವರೆಗೆ ಸರಿಸಲಾಯಿತು.
. ಹಿಂದೂಗಳನ್ನು ಅಸಹಿಷ್ಣುಗಳೆಂದು ನಿರ್ಧರಿಸುವ ಪ್ರಚಾರ ಮಾಧ್ಯಮಗಳು
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಮೌನವೇಕೆ ?
ಬಾಂಗ್ಲಾದೇಶದ ಗೋಪಾಲಗಂಜ್ ಜಿಲ್ಲೆಯಲ್ಲಿ ತುಂಗೀಪಾರಾ ಎಂಬಲ್ಲಿ ಸರ್ವಸ್ವವನ್ನೂ ತ್ಯಜಿಸಿ ಸಮಾಜಸೇವೆ ಹಾಗೂ ಹಿಂದೂ ಧರ್ಮದ ಪ್ರಚಾರ ಮಾಡುವ ಪರಮಾನಂದ ರಾವ್ ಎಂಬ ಸಾಧುವನ್ನು ಚೂರಿಯಿಂದ ಇರಿದು ಹತ್ಯೆಗೊಳಿಸಲಾಯಿತು. ಈ ಪ್ರಕರಣದಲ್ಲಿ ಶರಿಫುಲ್ ಶೇಖ್ ಎಂಬ ಯುವಕನನ್ನು ಬಂಧಿಸಲಾಗಿದೆ.
. ಅನೈತಿಕ ಕೃತ್ಯಗಳ ತಾಣವಾಗಿರುವ ಜೆಎನ್‌ಯೂವನ್ನು ಮುಚ್ಚಿರಿ !
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಬಹಿರಂಗವಾಗಿ ವೇಶ್ಯಾವಾಟಿಕೆ ನಡೆಯುತ್ತದೆ ಹಾಗೂ ಅಲ್ಲಿರುವ ವಸತಿಗೃಹಗಳಲ್ಲಿ ಮದ್ಯಪಾನ ಹಾಗೂ ಅನೈತಿಕ ಕೃತ್ಯ ಎಸಗುವ ೧ ಸಾವಿರ ಯುವಕ ಯುವತಿ ಯರ ಮೇಲೆ ೨ ರಿಂದ ೫ ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ, ಎಂದು ೧೧ ಅಧ್ಯಾಪಕರ ಒಂದು ಸಮಿತಿಯು ಆರೋಪಿಸಿದೆ.
. ಈಗ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ
ನಿರಪರಾಧಿತನದ ವಾರ್ತೆಯ ಬಗ್ಗೆ ಪ್ರಚಾರ ಮಾಧ್ಯಮಗಳೇಕೆ ಮೌನ ?
ಲೆಕ್ಕಪರೀಕ್ಷಕ ರಾಧಾಕೃಷ್ಣನ್‌ರವರನ್ನು ಹತ್ಯೆಗೊಳಿಸುವ ಪ್ರಯತ್ನದ ಆರೋಪದಲ್ಲಿ ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಹಾಗೂ ಇತರ ೮ ಜನರು ನಿರಪರಾಧಿಗಳೆಂದು ಸಾಬೀತಾಗಿದೆ.
. ದೇಶದ ಹೆಸರಿಗೆ ಕಳಂಕ ತರುವ ಇಂತಹ ಲಂಚಕೋರ ಅಧಿಕಾರಿಗಳಿಗೆ ಕಠೋರ ಶಿಕ್ಷೆ ವಿಧಿಸಿರಿ !
ಕಾಂಗ್ರೆಸ್ ಆಡಳಿತವಿರುವಾಗ ಆಗಸ್ಟಾ ವೆಸ್ಟ್‌ಲ್ಯಾಂಡ್ ಎಂಬ ಸಂಸ್ಥೆಯ ಹೆಲಿಕಾಪ್ಟರ್ ಖರೀದಿಸಲು ಸಾಧ್ಯವಾಗಬೇಕೆಂದು ಭಾರತೀಯ ಅಧಿಕಾರಿಯು ೩೬೦ ಕೋಟಿ ರೂಪಾಯಿಗಳ ಲಂಚ ತೆಗೆದುಕೊಂಡಿರುವ ಬಗ್ಗೆ ಇಟಲಿಯ ಮಿಲಾನ್ ಕೋರ್ಟ್ ಆಫ್ ಅಪೀಲ್ಸ್ ನ್ಯಾಯಾಲಯ ಹೇಳಿದೆ.
. ಮಲಗುವಾಗ ಹಾಸಿಗೆಯ ಬಳಿ ಕೋಲನ್ನು ಇಡುವುದರ ಹಿಂದಿನ ಶಾಸ್ತ್ರವೇನು ?
ಕಟ್ಟಿಗೆಯಲ್ಲಿ (ಮರದಲ್ಲಿ) ಸುಪ್ತ ಅಗ್ನಿಯಿರುತ್ತದೆ. ಈ ಸುಪ್ತ ಅಗ್ನಿಯಿಂದಾಗಿ ಕೋಲಿನಿಂದ ಪ್ರಕ್ಷೇಪಿತವಾಗುವ ತೇಜತತ್ತ್ವದ ಮಾರಕ ಸ್ಪಂದನಗಳು ರಾತ್ರಿಯ ತಮೋಗುಣಿಕಾಲದಲ್ಲಿ ಬಾಹ್ಯ ವಾಯುಮಂಡಲ ದಲ್ಲಿನ ತೊಂದರೆದಾಯಕ ಸ್ಪಂದನಗಳಿಂದ ಜೀವವನ್ನು ರಕ್ಷಿಸುತ್ತವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕ ಪ್ರಸಿದ್ಧಿಗಾಗಿ