ರಾಜ ನಮ್ಮಿಂದ ಜ್ಞಾನ ಪಡೆಯುವ ಬದಲು ಉಪದೇಶ ಮಾಡಲು ಬಂದಿದ್ದ ! - ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತೀಜಿಯಿಂದ ಪ್ರಧಾನಿ ಮೇಲೆ ಟೀಕೆ

ಉಜ್ಜೈನ್ : ‘ಉಜ್ಜೈನ್ (ಮಧ್ಯಪ್ರದೇಶ) ಇಲ್ಲಿನ ವಿಚಾರ ಮಹಾಕುಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೆರೆದ ಸಂತ-ಮಹಾತ್ಮರಿಗೆ ಉಪದೇಶ ನೀಡಿ ಹೋದರು. ಹಿಂದೆ ನಮ್ಮಲ್ಲಿ ರಾಜ-ಮಹಾರಾಜರು ಋಷಿಮುನಿಗಳ ಆಶ್ರಮಕ್ಕೆ ಬಂದು ಅವರ ಮುಂದೆ ನತಮಸ್ತಕರಾಗಿ ಆಶೀರ್ವಾದ ಪಡೆದು, ಜ್ಞಾನ ಪಡೆದುಕೊಳ್ಳುವ ಪರಂಪರೆಯಿತ್ತು. ಇಂದು ರಾಜನು ಜ್ಞಾನ ಪಡೆದುಕೊಳ್ಳಲಿಕ್ಕಲ್ಲ, ಉಪದೇಶ ಮಾಡಲು ಬಂದಿದ್ದನು. ಇದು ವಿಚಾರ ಮಹಾಕುಂಭವಾಗಿರದೆ ರಾಜಕೀಯ ಮಂಥನ ಆಗಿದೆ’, ಎಂದು ದ್ವಾರಕಾ ಹಾಗೂ ಜ್ಯೋತಿಷ್ಯ ಪೀಠಾಧೀಶ್ವರ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತೀಜಿಯವರು ಟೀಕಿಸಿದರು. ಶಂಕರಾಚಾರ್ಯರು ಮಾತು ಮುಂದುವರಿಸುತ್ತಾ ಹೀಗೆಂದರು -
೧. ‘ವಿಚಾರ ಮಹಾಕುಂಭ’ದ ವಿಷಯದಲ್ಲಿ ನಮಗೆ ಏನೂ ಅಡಚಣೆ ಇಲ್ಲ; ಆದರೆ ಇಲ್ಲಿ ರಾಜಕೀಯ ಮಂಥನ ನಡೆಯುತ್ತಿದೆ. ಈ ಕೆಲಸ ಸಂಸತ್ತಿನಲ್ಲಿಯೂ ನಡೆಯಬಹುದು.
೨. ಪ್ರಧಾನಿಗಳು ಇಂಗ್ಲೆಂಡ್‌ಗೆ ಹೋದಾಗ ಭಾರತ ಗೌತಮ ಬುದ್ಧ ಹಾಗೂ ಗಾಂಧಿಯವರ ದೇಶ ವಾಗಿದೆಯೆಂದು ಹೇಳಿದರು. ಅವರು ಈ ದೇಶ ರಾಮ-ಕೃಷ್ಣ ಮತ್ತು ಶಂಕರಾಚಾರ್ಯರದ್ದಾಗಿದೆಯೆಂದು ಏಕೆ ಹೇಳಲಿಲ್ಲ?

೩. ಸನಾತನ ಧರ್ಮವನ್ನು ಅಂತರ್ಬಾಹ್ಯದಿಂದ ನಾಶಗೊಳಿಸುವ ಷಡ್ಯಂತ್ರ ನಡೆದಿದೆ. ಇಂತಹ ಸ್ಥಿತಿ ಯಲ್ಲಿ ನಾವು ಧರ್ಮವನ್ನು ರಕ್ಷಣೆ ಮಾಡಬಲ್ಲೆವು ಎಂಬ ವಿಷಯದಲ್ಲಿ ಚರ್ಚೆಯಾಗಬೇಕು.
೪. ವಿಚಾರ ಮಹಾಕುಂಭದಲ್ಲಿ ಅಧ್ಯಾತ್ಮದ ಬಗ್ಗೆ ಚರ್ಚೆಯಾಗಬೇಕು. ಧರ್ಮರಕ್ಷಣೆಯಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ವಿಚಾರ ಮಾಡಬೇಕು.
ಶಾಲೆಗಳಲ್ಲಿ ಶ್ರೀರಾಮನ ಚಿತ್ರಗಳನ್ನು ಏಕೆ ಹಾಕುವುದಿಲ್ಲ ?
- ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತೀಜಿ
ಇಂದು ನಮ್ಮ ದೇಶದಲ್ಲಿ ಮಹಮ್ಮದ ಅಫ್ಝಲನಿಗೆ ಹುತಾತ್ಮನೆಂದು ಹೇಳಲಾಗುತ್ತದೆ. ಇದರಲ್ಲಿ ನಮ್ಮ ಶಿಕ್ಷಣ ಪದ್ಧತಿಯ ತಪ್ಪಿದೆ. ಇಂದು ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಇತ್ಯಾದಿಗಳ ಶಿಕ್ಷಣ ನೀಡುವುದಿಲ್ಲ. ಇನ್ನೊಂದೆಡೆ ಮದರಸಾದಲ್ಲಿ ಮಾತ್ರ ಕುರಾನಿನ ಮೂಲಕ ಇಸ್ಲಾಮ್ ಕಲಿಸಲಾಗುತ್ತದೆ, ಕ್ರೈಸ್ತರ ಶಾಲೆಗಳಲ್ಲಿ ಬೈಬಲ್‌ನ ಮೂಲಕ ಕ್ರೈಸ್ತ ಧರ್ಮ ಕಲಿಸಲಾಗುತ್ತದೆ. ಆ ಶಾಲೆಗಳಲ್ಲಿ ಯೇಸು ಮತ್ತು ಮೇರಿಯ ಚಿತ್ರ ಹಾಕಿರುತ್ತಾರೆ. ಹಾಗಾದರೆ ನಮ್ಮ ಶಾಲೆಗಳಲ್ಲಿ ಶ್ರೀರಾಮನ ಚಿತ್ರ ಹಾಕಲು ಏಕೆ ಸಾಧ್ಯವಿಲ್ಲ?

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಜ ನಮ್ಮಿಂದ ಜ್ಞಾನ ಪಡೆಯುವ ಬದಲು ಉಪದೇಶ ಮಾಡಲು ಬಂದಿದ್ದ ! - ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತೀಜಿಯಿಂದ ಪ್ರಧಾನಿ ಮೇಲೆ ಟೀಕೆ