ಕೇವಲ ಇಬ್ಬರು ಮಕ್ಕಳನ್ನು ಹುಟ್ಟಿಸುವ ಹಿಂದೂ ನಾಗರಿಕ ಹಿಂದೂ ಧರ್ಮದ ಶತ್ರು !

ಹಿಂದೂಗಳು ಅನೇಕ ಮಕ್ಕಳನ್ನು ಹುಟ್ಟಿಸುವುದು, ಕ್ಷೀಣಿಸುತ್ತಿರುವ ಹಿಂದೂಗಳ ಜನಸಂಖ್ಯೆಗೆ ಉಪಾಯವಲ್ಲ, ಅವರಲ್ಲಿ ಧರ್ಮಾಭಿಮಾನ ಜಾಗೃತಗೊಳಿಸುವುದು ಮಹತ್ವದ್ದಾಗಿದೆ. ಹೀಗಾದರೆ ಮಾತ್ರ ಪ್ರತಿಯೊಬ್ಬ ಹಿಂದೂ ೫ ಜನರಿಗೆ ಸಮನಾಗುವನು ಎನ್ನುವುದು ರಾಣಾ ಪ್ರತಾಪ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಅವರು ಅಲ್ಪ ಮನುಷ್ಯಬಲದೊಂದಿಗೆ ಮೊಗಲರು ಮತ್ತು ಐದು ಬಾದಶಾಹರಿಗೆ ಮಟ್ಟ ಹಾಕಿದರು !
ನಾಲ್ಕನೇ ಹಿಂದೂ ಸಂಸತ್ತಿನ ಘೋಷಣೆ
ಹಿಂದೂಗಳೇತರರ ಹೆಚ್ಚುತ್ತಿರುವ ಜನಸಂಖ್ಯೆಗೆ
ಉತ್ತರವಾಗಿ ಹಿಂದೂಗಳ ಜನಸಂಖ್ಯೆ ಹೆಚ್ಚಿಸುವ ಒಕ್ಕೊರಲಿನಿಂದ ಆಗ್ರಹ !
ಹಿಂದೂ ಸಂಸತ್ತಿನಲ್ಲಿ ಉಪಸ್ಥಿತರಿದ್ದ ಸಾಧು-ಸಂತರು ಮತ್ತು ಇತರ ಮಹನೀಯರು
ಉಜ್ಜೈನಿ : ದೇಶದಲ್ಲಿ ಹಿಂದೂಗಳೇತರರ ಸಂಖ್ಯೆಯು ಬೃಹತ್ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ದೇಶದಲ್ಲಿ ತ್ವರಿತವಾಗಿ ಜನಸಂಖ್ಯೆ ನಿಯಂತ್ರಿಸಲು ಕಠಿಣ ಕಾನೂನು ಜಾರಿಗೊಳಿಸಬೇಕು. ಈ ಕಾನೂನು ಜಾರಿಗೊಳಿಸುವ ಮೊದಲು ೫ಕ್ಕಿಂತ ಕಡಿಮೆ ಮಕ್ಕಳನ್ನು ಹುಟ್ಟಿಸುವ ಹಿಂದೂ ನಾಗರಿಕನು ಧರ್ಮದ್ರೋಹಿಯಾದರೆ, ಕೇವಲ ೨ ಮಕ್ಕಳನ್ನು ಹುಟ್ಟಿಸುವ ಹಿಂದೂ ನಾಗರಿಕನು ಹಿಂದೂ ಧರ್ಮದ ಶತ್ರುವಾಗಿದ್ದಾನೆ ಎನ್ನುವ ಘೋಷಣೆಯನ್ನು ಉಜ್ಜೈನಿ ಸಿಂಹಸ್ಥಪರ್ವದ ಭೂಖೀಮಾತಾ ಪ್ರದೇಶದ ದೂಧೇಶ್ವರ ಅನ್ನಪೂರ್ಣಾ ಮಂಟಪದಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ಹಿಂದೂ ಸಂಸತ್ತಿನಲ್ಲಿ ಉಪಸ್ಥಿತರಿದ್ದ ಸಂತರು ಘೋಷಿಸಿದರು. ಈ ಸಂಸತ್ತನ್ನು ಹಿಂದೂ ಸ್ವಾಭಿಮಾನ ಸಾಂಸ್ಕೃತಿಕ ಗೌರವ ಸಂಸ್ಥಾನ ಮತ್ತು ಸನಾತನ ಹಿಂದೂ ವಾಹಿನಿಯವರು ಆಯೋಜಿಸಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೇವಲ ಇಬ್ಬರು ಮಕ್ಕಳನ್ನು ಹುಟ್ಟಿಸುವ ಹಿಂದೂ ನಾಗರಿಕ ಹಿಂದೂ ಧರ್ಮದ ಶತ್ರು !