ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ಎದುರಿಸಬೇಕಾಯಿತು ಅಗ್ನಿಪರೀಕ್ಷೆ !

ಸ್ವಾತಂತ್ರ್ಯವೀರ ಸಾವರಕರರ ಜೀವನವನ್ನು ನೆನಪಿಸುವ ಲೇಖನಮಾಲೆ !
ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾದ ಸನಾತನದ ಸಾಧಕರ ಹಾಗೂ ಅವರ ಕುಟುಂಬದವರ ಭೀಕರ ಅನುಭವ !
೨೦೦೯ ರಲ್ಲಿ ಮಡಗಾಂವ್‌ನಲ್ಲಿ ಒಂದು ವಾಹನದಲ್ಲಿ ಸ್ಫೋಟವಾಗಿ ಅದರಲ್ಲಿ ಸನಾತನ ಸಂಸ್ಥೆಯ ಇಬ್ಬರು ಸಾಧಕರು ಮೃತಪಟ್ಟರು. ಹೀಗಿದ್ದರೂ ಸನಾತನ ಸಂಸ್ಥೆಯ ಅಪಕೀರ್ತಿಯನ್ನು ಮಾಡಲು ಕಾಂಗ್ರೆಸ್ಸಿನ ತಾಳಕ್ಕನುಸಾರ ಕುಣಿಯುವ ಸೂತ್ರದ ಗೊಂಬೆಗಳಂತೆ ಆರಕ್ಷಕರು ಮತ್ತು ಪ್ರಸಾರಮಾಧ್ಯಮಗಳು ಯಾವುದೇ ಮುನ್ಸೂಚನೆಯನ್ನು ನೀಡದೇ ಸನಾತನದ ಸಾಧಕರನ್ನು ಬಂಧಿಸುವುದು, ಅವರ ಮೇಲೆ ಹೇರಿದ ಅನೇಕ ತ್ರಾಸದಾಯಕ ಕಲಂಗಳು, ಸುಳ್ಳು ಸಾಕ್ಷಿದಾರರು ಹಾಗೂ ಸುಳ್ಳು ಪುರಾವೆಗಳು, ಸಾಧಕರಿಗೆ ನೀಡಿದ ಅಸಹನೀಯ ಶಾರೀರಿಕ ಹಾಗೂ ಮಾನಸಿಕ ಹಿಂಸೆ, ಸಾಧಕರ ಕುಟುಂಬದವರಿಗೆ ನೀಡಿದ ಕಿರುಕುಳ ಮುಂತಾದ ಯಾತನೆಗಳ ಮುಂದುವರಿದ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.
ಸಂಕಲನಕಾರರು : ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ

ಸೆರೆಮೆನೆಯೆಂದರೆ ಭೂಲೋಕದಲ್ಲಿರುವ ನರಕ !
೬. ಸೆರೆಮನೆಯಲ್ಲಿನ ಅಧಿಕಾರಿಯ ಉದಾಸೀನತೆ
೬ ಅ. ಅಧಿಕಾರಿಗಳು ವೈಯಕ್ತಿಕ ಕೆಲಸಕ್ಕಾಗಿ ಸೆರೆಮನೆಯಲ್ಲಿನ ಗಣಕಯಂತ್ರ ಮತ್ತು ಝೆರಾಕ್ಸ್ ಯಂತ್ರಗಳನ್ನು ಉಪಯೋಗಿಸಿಕೊಳ್ಳುವುದು : ಸೆರೆಮನೆಯಲ್ಲಿನ ಅಧಿಕಾರಿಯು ತಮ್ಮ ವೈಯಕ್ತಿಕ ಗಣಕೀಯ ಕೆಲಸವನ್ನು ಸೆರೆಮನೆಯಲ್ಲಿನ ಗಣಕಯಂತ್ರದಲ್ಲಿ ಮಾಡುತ್ತಿದ್ದರು. ಓರ್ವ ಅಧಿಕಾರಿಗೆ ತನ್ನ ಮನೆಯ ನಕಾಶೆಯನ್ನು ತಯಾರಿಸುವುದಿತ್ತು ಮತ್ತು ಅವರ ಜಾಗದ ಅಳತೆಯನ್ನು ಮಾಡುವುದಿತ್ತು. ಅವರು ಆ ಕೆಲಸವನ್ನು ಸಾಧಕ ರಿಂದ ಮಾಡಿಸಿಕೊಂಡರು. ಕೆಲವು ಅಧಿಕಾರಿಗಳು ಅವರಿಗೆ ಬೇಕಾಗುವ ವೈಯಕ್ತಿಕ ಕಾಗದಪತ್ರಗಳ ಝೆರಾಕ್ಸ್ ಪ್ರತಿಗಳನ್ನು ಸೆರೆಮನೆಯಲ್ಲಿಯೇ ತೆಗೆದುಕೊಳ್ಳುತ್ತಿದ್ದರು. ಓರ್ವ ಅಧಿಕಾರಿಯು ತಮ್ಮ ವೈಯಕ್ತಿಕ ಕೆಲಸದ ೧೦೦ ಪ್ರತಿಗಳನ್ನು ತೆಗೆದರು. ಇದರಿಂದ ಸರಕಾರದ ಹಣ ವ್ಯರ್ಥವಾಗುತ್ತದೆ.
೬ ಆ. ತನ್ನ ಜವಾಬ್ದಾರಿಯ ಕೆಲಸಗಳನ್ನು ಕೈಕೆಳಗಿರುವ ಕೈದಿಗಳಿಂದ ಮಾಡಿಸಿಕೊಳ್ಳುವುದು : ಸೆರೆಮನೆಯಲ್ಲಿನ ಅಧಿಕಾರಿಗಳನ್ನು ಬೇರೆ ಬೇರೆ ವಿಭಾಗಗಳಲ್ಲಿ ನೇಮಿಸಲಾಗುತ್ತದೆ. ಅಡುಗೆ ವಿಭಾಗ, ಬೇಕರಿ ವಿಭಾಗ ಮುಂತಾದವುಗಳು. ಆ ವಿಭಾಗದ ಜವಾಬ್ದಾರಿ ಆ ಅಧಿಕಾರಿಗೆ ಇರುತ್ತದೆ. ಆದರೆ ಅವರಲ್ಲಿನ ಆಲಸ್ಯ ಮತ್ತು ನಿಷ್ಕಾಳಜಿಯಿಂದಾಗಿ ಅವರ ಕೆಲಸಗಳನ್ನು ಕೈಕೆಳಗಿನ ಕೈದಿಗಳಿಗೆ ಒಪ್ಪಿಸುತ್ತಾರೆ. ಇದರಿಂದಾಗಿ ಆ ಕೈದಿಗಳು ಹೆಚ್ಚುವರಿ ಕೆಲಸಗಳನ್ನು ಮಾಡಬೇಕಾಗುತ್ತದೆ. ಉದಾ. ಸೆರೆಮನೆಯಲ್ಲಿನ ಕೈದಿಗಳಿಗೆ ನ್ಯಾಯಾಲಯ ಅಥವಾ ಚಿಕಿತ್ಸಾಲಯಕ್ಕೆ ಹೋಗಲು ಪ್ರತಿದಿನ ಹೊರಗೆ ಹೋಗಬೇಕಾಗುತ್ತದೆ. ಅದರ ನೋಂದಣಿಯನ್ನು ಮಾಡುವ ಕೆಲಸ ಅಧಿಕಾರಿಗಳದ್ದಾಗಿರುತ್ತದೆ. ಒಂದು ವೇಳೆ ಇದರಲ್ಲೇನಾದರೂ ತಪ್ಪಾದರೆ ಅವರ ಕೆಲಸ ಹೋಗುವ ಸಾಧ್ಯತೆಯಿರುತ್ತದೆ. ಆದರೂ ಅವರು ಜವಾಬ್ದಾರಿಯುತ ಕೆಲಸಗಳನ್ನೂ ಕೈದಿಗಳಿಂದಲೇ ಮಾಡಿಸಿಕೊಳ್ಳುತ್ತಾರೆ.
೬ ಇ. ನಿಯಮಗಳ ಪಾಲನೆಯನ್ನು ಮಾಡದಿರುವುದು
೬ ಇ ೧. ಶ್ರೀ. ಪ್ರಶಾಂತ ಅಷ್ಟೇಕರ್
೬ ಇ ೧ ಅ. ನಿಯಮಕ್ಕನುಸಾರ ಕೈದಿಗಳಿಗೆ ೨ ಬಾರಿ ಆಟವಾಡಲು ಬಿಡಬೇಕಿದ್ದರೂ ಸೆರೆಮನೆಯ ಕಾವಲುಗಾರರ ನಿದ್ದೆ ಕೆಡುತ್ತದೆಯೆಂದು ಕೈದಿಗಳಿಗೆ ಒಂದೇ ಬಾರಿ ಆಟವಾಡಲು ಬಿಡುವುದು : ಸೆರೆಮನೆಯ ನಿಯಮಕ್ಕನುಸಾರ ಕೈದಿಗಳಿಗೆ ಬೆಳಗ್ಗೆ-ಸಾಯಂಕಾಲ ಹೀಗೆ ಎರಡು ಬಾರಿ ಮೈದಾನಕ್ಕೆ ಬಿಡುವ ಅವಕಾಶವಿರುತ್ತದೆ. ಬೆಳಗ್ಗೆ ಸೆರೆಮನೆಯ ಕಾವಲುಗಾರರು ಮಲಗಿರುತ್ತಾರೆ. ಅವರಿಗೆ ತೊಂದರೆಯಾಗಬಾರದೆಂದು ಕೈದಿಗಳನ್ನು ಆಟವಾಡಲು ಬಿಡುತ್ತಿರಲಿಲ್ಲ. ಯಾರಾದರೂ ಕೈದಿಗಳು ಮೈದಾನಕ್ಕೆ ಬಿಡಲು ಕಿರುಚಾಡಿದರೆ, ಸೆರೆಮನೆಯ ಅಧಿಕಾರಿಯು ಅವರಿಗೆ ತೊಂದರೆ ಕೊಡುತ್ತಿದ್ದರು. ನಿಯಮಕ್ಕನುಸಾರ ಏನೂ ನಡೆಯುತ್ತಿರಲ್ಲಿಲ್ಲ.
೬ ಇ ೧ ಆ. ಕೆಲವು ಅಧಿಕಾರಿಗಳು ಮತ್ತು ಇತರ ಕೆಲಸದವರು ಸೆರೆಮನೆಯ ದೂರವಾಣಿಯನ್ನು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಉಪಯೋಗಿಸುತ್ತಾರೆ.
೬ ಇ ೨. ಶ್ರೀ. ಧನಂಜಯ ಅಷ್ಟೇಕರ್
೬ ಇ ೨ ಅ. ಸೆರೆಮನೆಯಲ್ಲಿನ ನಿಯಮಗಳ ಉಲ್ಲಂಘನೆ ಮತ್ತು ಸೆರೆಮನೆಯ ನಿಯಮಗಳ ವಿರುದ್ಧ ನಡೆಯುವ ವಿಷಯಗಳ ಕಡೆಗೆ ಅಧಿಕಾರಿಗಳು ತೋರಿಸಿದ ಅಕ್ಷಮ್ಯ ದುರ್ಲಕ್ಷ್ಯ ! : ಸೆರೆಮನೆಯಲ್ಲಿನ ನಿಯಮಗಳು ಕೈದಿಗಳಲ್ಲಿ ಸುಧಾರಣೆಗಾಗಿ ಇರುತ್ತವೆ. ಶಿಕ್ಷೆಯನ್ನು ಅನುಭವಿಸಿ ಸಮಾಜಕ್ಕೆ ಹೋದಾಗ ಅವರು ಸಾಮಾನ್ಯ ಜೀವನ ಜೀವಿಸಲಿ, ಎಂಬುದಕ್ಕಾಗಿ ಅವರಲ್ಲಿ ಸುಧಾರಣೆಯಾಗುವುದು ಅಪೇಕ್ಷಿತವಿರುತ್ತದೆ. ಈ ಸ್ಥಳಕ್ಕೆ ಬಂದ ನಂತರ, ಕೈದಿಗಳ ಕಡೆಗೆ ಸೆರೆಮನೆಯ ಆಡಳಿತದ ಗಮನವಿಲ್ಲದಿರುವುದು ಗಮನಕ್ಕೆ ಬಂದಿತು. ಸೆರೆಮನೆಯಲ್ಲಿ ಕೆಲವು ನಿಯಮಗಳಿರುತ್ತವೆ. ಉದಾ. ತಂಬಾಕು, ಸಿಗರೇಟ್ ಈ ರೀತಿಯ ಮಾದಕ ಪದಾರ್ಥ, ಹಾಗೆಯೇ ಸಂಚಾರಿವಾಣಿಯಂತಹ ಸಾಹಿತ್ಯಗಳನ್ನು ಇಟ್ಟುಕೊಳ್ಳಬಾರದು. ಆದರೆ ಸೆರೆಮನೆಯಲ್ಲಿ ಇವೆಲ್ಲವೂ ಸಹಜವಾಗಿ ದೊರೆಯುತ್ತದೆ. ಸೆರೆಮನೆಯ ಅಧಿಕಾರಿಗಳಿಗೆ ಇವುಗಳ ಮಾಹಿತಿಯಿದ್ದರೂ ಅವರು ಅದರ ಕಡೆಗೆ ದುರ್ಲಕ್ಷ್ಯ ಮಾಡುತ್ತಾರೆ.
೬ ಇ ೩. ಶ್ರೀ. ಪ್ರಶಾಂತ ಜುವೇಕರ್
೬ ಇ ೩ ಅ. ನಿಯಮವನ್ನು ದುರ್ಲಕ್ಷಿಸುವ ಸೆರೆಮನೆಯ ಅಧಿಕಾರಿ ! : ನಿಯಮಕ್ಕನುಸಾರ ಯಾವ ವಿಭಾಗದಲ್ಲಿ ನಿಮಗೆ ಕೆಲಸ ಮಾಡುವುದಿದೆಯೋ, ಅದಕ್ಕಾಗಿ ಸೆರೆಮನೆಯ ಅಧೀಕ್ಷಕರಿಗೆ ಬಿನ್ನವಿಸಬೇಕಾಗುತ್ತದೆ. ನಂತರ ಅವರು ಆ ಕೈದಿಯ ನಡವಳಿಕೆಯನ್ನು ಗಮನಿಸುವುದರೊಂದಿಗೆ ಇತರರಲ್ಲಿಯೂ ಆ ಕೈದಿಯ ಬಗ್ಗೆ ವಿಚಾರಿಸುತ್ತಾರೆ. ಅಧೀಕ್ಷಕರಿಗೆ ಒಪ್ಪಿಗೆ ಯಾದರೆ, ಅವರು ಆ ಕೈದಿಗೆ ಅನುಮತಿ ನೀಡುತ್ತಾರೆ. ಮುಂದಿನ ವಾರದಲ್ಲಿ ವೈದ್ಯರು ಅವನ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿ ಅನುಮತಿ ನೀಡಿದ ನಂತರ ಅವನು ಭೋಜನಗೃಹದಲ್ಲಿ ಅಥವಾ ಬೇಕರಿಯಲ್ಲಿ ಕೆಲಸ ಮಾಡಬಹುದು. ಅವನಿಗೆ ಏನಾದರೂ ಚರ್ಮರೋಗ ಅಥವಾ ಅಸ್ತಮಾ ದಂತಹ ರೋಗಗಳಿದ್ದರೆ, ಅವು ಇತರರಿಗೆ ಹರಡಬಹುದೆಂಬ ಕಾರಣ ದಿಂದ ಈ ನಿಯಮಗಳನ್ನು ವಿಧಿಸಲಾಗಿರುತ್ತದೆ. ಆದರೆ ಇವುಗಳ ಪಾಲನೆ ತುಂಬ ವಿರಳವಾಗಿ ಕಂಡುಬರುತ್ತದೆ.
೬ ಇ ೩ ಆ. ಸೆರೆಮನೆಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡರೆ, ನಿಯಮದ ವಿರುದ್ಧ ಕೃತಿ ಮಾಡಲು ಸಾಧ್ಯವಾಗುವುದು : ನಿಯಮದ ವಿರುದ್ಧ ಯಾವುದೇ ಸಾಮಾನು ಬೇಕಾಗಿದ್ದಲ್ಲಿ ಅಥವಾ ಅಡುಗೆಮನೆಯಲ್ಲಿ ಕೆಲಸ ಮಾಡಬೇಕಿನಿಸಿದರೆ ಸೆರೆಮನೆಯ ಅಧಿಕಾರಿಯೊಂದಿಗೆ ಉತ್ತಮ ಸಂಬಂಧ ಇಡಬೇಕಾಗುತ್ತದೆ. (ಮುಂದುವರಿಯುವುದು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ಎದುರಿಸಬೇಕಾಯಿತು ಅಗ್ನಿಪರೀಕ್ಷೆ !