ಬೇಸಿಗೆ ರಜೆಯ ನಿಮಿತ್ತ ಪ್ರತಿವಾರ ಓದಿ ಬೋಧಕಥೆ

ಬೈಜೂ ಬಾವರಾರವರಿಗೆ ಗೋಪಾಲನ ಕುಕರ್ಮಗಳ ಬಗ್ಗೆ ತಿಳಿದಾಗ ಅವರಿಗೆ ಬಹಳ ದುಃಖವಾಗುವುದು ಹಾಗೂ ಶಿಷ್ಯನಿಗೆ ತಿಳಿಸಿ ಹೇಳಲು ಅವನಲ್ಲಿಗೆ ಹೋಗುವುದು, ಗೋಪಾಲನು ಬೈಜೂರವರಿಗೇ (ಗುರುಗಳಿಗೆ) ಆಹ್ವಾನ ನೀಡುವುದು, ಬೈಜೂರವರ ಗಾಯನದಿಂದ ಗೋಪಾಲನ ಪ್ರಭಾವ ಕಡಿಮೆಯಾಗುವುದು, ಮುಂತಾದ ಮಾಹಿತಿಯನ್ನು ನಾವು ಕಳೆದ ವಾರ ಓದಿದೆವು. ಈಗ ನಾವು ಅದರ ಮುಂದಿನ ಭಾಗವನ್ನು ನೋಡೋಣ !
ಅಹಂಕಾರ ಮತ್ತು ಗುರುದ್ರೋಹದಿಂದ ರಸಾತಳಕ್ಕೆ ಹೋದ 
ಬೈಜೂ ಬಾವರಾರವರ ಶಿಷ್ಯ ಗೋಪಾಲ !
೧೧. ಬೈಜೂರವರು ಗೋಪಾಲನಿಗೆ ಆ ಕಲ್ಲನ್ನು ಕರಗಿಸಿ ತಂಬೂರಿಯನ್ನು ತೆಗೆದು ತೋರಿಸಲು ಹೇಳಿ ದರು; ಆದರೆ ಎಲ್ಲ ಪ್ರಯತ್ನಗಳೂ ನಿಷ್ಫಲವಾಗಿ ಕೊನೆಗೆ ಅವನು ಸೋಲುವುದು : ಬೈಜೂ ಬಾವರಾ ಗೋಪಾಲನಿಗೆ, ‘ಹೇ ಗುಣಕಳ್ಳ, ಗುರುದ್ರೋಹಿ ಗೋಪಾಲ ನಾಯಕಾ ! ನಿನ್ನಲ್ಲಿ ಯಾವುದಾದರೊಂದು ವಿದ್ಯೆ, ಸಾಮರ್ಥ್ಯ ಅಥವಾ ಯೋಗ್ಯತೆಯಿದ್ದರೆ, ಆ ಕಲ್ಲನ್ನು ಕರಗಿಸಿ ನನ್ನ ತಂಬೂರಿಯನ್ನು ತೆಗೆದು ತೋರಿಸುಎಂದರು.
ಯಾವನು ತನ್ನ ಅಹಂಕಾರದಿಂದ ಅನೇಕ ಜನರ ಜೀವವನ್ನು ತೆಗೆದುಕೊಂಡಿದ್ದಾನೆಯೋ, ಗುರುದ್ರೋಹ ಮಾಡಿದ್ದಾನೆಯೋ, ಅವನ ರಾಗದಲ್ಲಿ ಈಗ ಪ್ರಭಾವ ಎಲ್ಲಿ ಉಳಿಯುವುದು ? ಗೋಪಾಲನು ಹಾಡುಗಳನ್ನು ಹಾಡುತ್ತಾ ಹಾಡುತ್ತಾ ಅನೇಕ ಬಾರಿ ನೀರನ್ನು ಕುಡಿಯುತ್ತ್ತಾ ಎಲ್ಲ ಪ್ರಯತ್ನಗಳನ್ನು ಮಾಡಿ ದನು; ಆದರೆ ಎಲ್ಲವೂ ನಿಷ್ಫಲವಾಯಿತು. ಅವನು ಹಾಡುತ್ತಾ ಹಾಡುತ್ತಾ ಸೋತು ಹೋದನು, ಕಲ್ಲು ಕರಗಲೂ ಇಲ್ಲ, ತಂಬೂರಿ ಹೊರಗೆ ಬರಲೂ ಇಲ್ಲ. ಕೊನೆಗೆ ಅವನು ಪರಾಜಿತನಾದನು.
೧೨. ಗೋಪಾಲನು ಬೈಜೂರವರನ್ನೇ ಆರೋಪಿ ಎಂದು ಹೇಳಿ ಅವರಿಗೆ ಮರಣದಂಡನೆ ನೀಡಲು ಹೇಳುವುದು : ರಾಜನ ಕಣ್ಣುಗಳು ಕೋಪದಿಂದ ಹೊಳೆಯತೊಡಗಿದವು. ಆಗ ಬೈಜೂ, ‘ಮಹಾರಾಜರೇ ! ಇವನನ್ನು ಕ್ಷಮಿಸಿರಿ. ಎಷ್ಟಾದರೂ ಅವನು ನನ್ನ ಶಿಷ್ಯನೇ ಆಗಿದ್ದಾನೆ, ಬಾಲಕನಾಗಿದ್ದಾನೆ, ಅವನಿಗೆ ಮರಣದಂಡನೆ ಕೊಡಬೇಡಿಎಂದು ಹೇಳಿದರು. ಆಗ ಗೋಪಾಲನು, ‘ಈ ಮುದುಕನಿಗೆ ಮರಣದಂಡನೆ ನೀಡಿರಿ. ಇವನು ನನ್ನ ಗುರು ಆಗಿದ್ದರೂ ಈ ವಿದ್ಯೆ ಯನ್ನು ನನ್ನಿಂದ ಬಚ್ಚಿಟ್ಟಿದ್ದನು. ಇವನು ಈ ವಿದ್ಯೆಯನ್ನು ನನಗೆ ಕಲಿಸಿದ್ದರೆ, ನಾನು ಇಂದು ಪರಾಜಯವಾಗುತ್ತಿರಲಿಲ್ಲಎಂದು ಹೇಳಿದನು.
೧೩. ರಾಜನು ವಿಶ್ವಾಸಘಾತಕ, ಅಹಂಕಾರಿ ಗೋಪಾಲನ ರುಂಡವನ್ನು ಕತ್ತರಿಸಲು ಹೇಳುವುದು : ಬೈಜೂರವರು, ‘ಹೌದು ಮಹಾರಾಜರೇ ! ನನಗೇ ಮರಣದಂಡನೆಯನ್ನು ಕೊಡಿ; ಏಕೆಂದರೆ, ನಾನು ಇಂತಹ ಅನರ್ಹ ಶಿಷ್ಯನಿಗೆ ವಿದ್ಯೆಯನ್ನು ಕಲಿಸಿದೆ; ಆದರೆ ಅವನು ಜನರ ಮನೋರಂಜನೆ ಮಾಡದೇ, ಲೋಕೇಶ್ವರನ ಭಕ್ತಿಯ ಪ್ರಸಾರವನ್ನು ಮಾಡದೇ, ತನ್ನ ಅಹಂಕಾರವನ್ನು ಪೋಷಣೆ ಮಾಡಿದನು ಮತ್ತು ಕರ್ಮವನ್ನು ಕುಕರ್ಮ ಮಾಡಿದನು. ಇದರಿಂದ ಎಷ್ಟೋ ಅಬಲೆಯರ ಸೌಭಾಗ್ಯವನ್ನು ಕಸಿದುಕೊಂಡನು. ಎಷ್ಟೋ ಅಮಾಯಕ ಮಕ್ಕಳ ಪಿತೃಸ್ಥಾನವನ್ನು ಕಸಿದುಕೊಂಡನು ಹಾಗೂ ನಿಮ್ಮಂತಹ ಎಷ್ಟೋ ರಾಜರ ರಾಜ್ಯ, ಧನ, ವೈಭವವು ಅವನ ಅಹಂಕಾರವನ್ನು ಜೋಪಾನ ಮಾಡಲು ಖರ್ಚಾ ಯಿತು. ನಾನೇ ಅಪರಾಧಿಯಾಗಿದ್ದೇನೆ. ನನ್ನನ್ನು ಕ್ಷಮಿಸಿರಿಎಂದು ಹೇಳಿದರು.
ಆಗ ರಾಜನು, ‘ಗಾಯಕ ರಾಜರೇ ! ನಿಮ್ಮ ಸಂಗೀತದಿಂದ ಕಲ್ಲು ಸಹ ಕರಗಬಹುದು; ಆದರೆ ನ್ಯಾಯದ ಈ ಸಿಂಹಾಸನದಲ್ಲಿ ಕುಳಿತಿರುವ ರಾಜನ ಕಠೋರ ಹೃದಯವನ್ನು ನಿಮಗೆ ಕರಗಿಸಲು ಸಾಧ್ಯ ವಿಲ್ಲ. ಈ ವಿಶ್ವಾಸಘಾತಕನಿಗೆ ಮರಣದಂಡನೆ ನೀಡಲಾಗುವುದು !’ ಎಂದನು. ಕ್ರೋಧದಿಂದ ಕೆಂಡಮಂಡಲವಾದ ರಾಜನು, ‘ಈ ವಿಶ್ವಾಸಘಾತಕಿ, ಅಹಂಕಾರಿ ಮನುಷ್ಯನ ರುಂಡವನ್ನು ಕತ್ತರಿಸಿರಿಎಂದು ಹೇಳಿದನು.
೧೪. ಬೈಜೂರವರಿಗೆ ದುಃಖವನ್ನು ಸಹಿಸಲು ಸಾಧ್ಯವಾಗದಿರುವುದು : ರುಂಡವನ್ನು ಕತ್ತರಿಸುವ ಸೈನಿಕರು ಗೋಪಾಲನ ರುಂಡವನ್ನು ಮುಂಡದಿಂದ ಬೇರ್ಪಡಿಸಿದರು. ಇದನ್ನು ಕಣ್ಣಾರೆ ಕಂಡ ಬೈಜೂ ಬಾವರಾ ರವರಿಗೆ ಸಹಿಸಲಾಗಲಿಲ್ಲ. ಹೇಗೆ ಕುಪುತ್ರನ ಮರಣದಿಂದಲೂ ತಾಯಿ-ತಂದೆಯರ ಹೃದಯ ದುಃಖದಿಂದ ತುಂಬಿ ಹೋಗುತ್ತದೆಯೋ, ಹಾಗೆಯೇ ಬೈಜೂ ಬಾವರಾರವರಿಗೂ ತನ್ನ ಶಿಷ್ಯನ ಮರಣದಿಂದ ದುಃಖವಾಯಿತು.
೧೫. ಗೊಪಾಲನ ಪತ್ನಿಯು ಪತಿಯ ಅಸ್ಥಿಗಳ ದರ್ಶನದ ಇಚ್ಛೆಯನ್ನು ವ್ಯಕ್ತಪಡಿಸುವುದು : ಸತಲಜ ನದಿಯ ತೀರದಲ್ಲಿ ಗೋಪಾಲನ ಅಂತ್ಯವಿಧಿಯಾಯಿತು. ಅವನ ಪತ್ನಿ, ‘ಹೇ ಗುರುದೇವಾ ! ನನ್ನ ಪತಿಯಂತೂ ಅನರ್ಥ ಮಾಡಿದರು; ಆದರೆ ನೀವು ಕರುಣಾಮಯಿಯಾಗಿದ್ದೀರಿ. ಅವರನ್ನು ಕ್ಷಮಿಸಿರಿ. ನನಗೆ ನನ್ನ ಪತಿಯ ಅಸ್ಥಿಗಳ ದರ್ಶನದ ಇಚ್ಛೆಯಿದೆ. ಅಸ್ಥಿಗಳನ್ನು ನದಿಯಲ್ಲಿ ಬಿಡಲಾಗಿದೆ. ನೀವು ನನಗೆ ಸಹಾಯ ಮಾಡಿರಿಎಂದು ಪ್ರಾರ್ಥನೆ ಮಾಡಿದಳು.
೧೬. ಬೈಜೂ ಬಾವರಾ ಗೋಪಾಲನ ಮಗಳಾದ ಮೀರಾಳಿಗೆ ರಾಗವನ್ನು ಕಲಿಸುವುದು ಮತ್ತು ಭಗವಂತ ನಿಗೆ ಪ್ರಾರ್ಥನೆ ಮಾಡಿ ಅದೇ ರೀತಿ ರಾಗವನ್ನು ಹಾಡಿ ದಾಗ ಎಲ್ಲ ಅಸ್ಥಿಗಳು ತೀರಕ್ಕೆ ಬರುವುದು : ಬೈಜೂ ಬಾವರಾ ಅವಳಿಗೆ ಧೈರ್ಯ ಹೇಳಿದರು ಮತ್ತು ಒಂದು ರಾಗವನ್ನು ರಚಿಸಿ ಗೋಪಾಲನ ಮಗಳು ಮೀರಾಳಿಗೆ ಕಲಿಸಿದರು. ಅವರು ಮೀರಾಳಿಗೆ, ‘ಮಗೂ ! ನೀನು ಈ ರಾಗದಂತೆ ಹಾಡು ಮತ್ತು ಭಗವಂತನಿಗೆ, ನದಿಯ ತಳಕ್ಕೆ ಹೋಗಿರುವ ನಿನ್ನ ತಂದೆಯ ಎಲ್ಲ ಅಸ್ಥಿಗಳು ಒಟ್ಟಾಗಿ ತೀರಕ್ಕೆ ಬರಲಿ ಎಂದು ಪ್ರಾರ್ಥನೆ ಮಾಡುಎಂದು ಹೇಳಿದರು. ಮೀರಾ ಅದೇ ರಾಗದಲ್ಲಿ ಈಶ್ವರನಿಗೆ ಶರಣಾಗಿ ಹಾಡಿದಳು. ಆಗ ಗೋಪಾಲನ ಅಸ್ಥಿಗಳು ತೀರಕ್ಕೆ ಬಂದವು.
ಇಂದಿನ ವಿಜ್ಞಾನಕ್ಕೆ ಕಪಾಳಮೋಕ್ಷ ಮಾಡುವ ಇಂತಹ ಗಾಯಕರು ಭಾರತದಲ್ಲಿದ್ದರು, ಇಂದು ಸಹ ಇದ್ದಾರೆ. (ಮಾಸಿಕ ಋಷಿಪ್ರಸಾದ, ಜುಲೈ ೨೦೧೦) (ಮುಕ್ತಾಯ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬೇಸಿಗೆ ರಜೆಯ ನಿಮಿತ್ತ ಪ್ರತಿವಾರ ಓದಿ ಬೋಧಕಥೆ