ಯೋಗಿ ಅರವಿಂದರ ಸಂಕಲ್ಪನೆಯಲ್ಲಿನ ಹಿಂದೂ ರಾಷ್ಟ್ರ !

ಡಾ. ಶ್ಯಾಮಾಪ್ರಸಾದ ಮುಖರ್ಜಿ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಶ್ರೀ. ಆನಿರ್ಬನ ಗಾಂಗೂಲಿಯವರು ಪಾಯೋನಿಯರ ದಿನಪತ್ರಿಕೆಯ ೧೩ ಏಪ್ರಿಲ್ ೨೦೧೬ ರ ಸಂಚಿಕೆಯಲ್ಲಿ ಯೋಗಿ ಅರವಿಂದರ ಮೇಲೆ ಒಂದು ಸುದೀರ್ಘವಾದ ಲೇಖನವನ್ನು ಬರೆದು ಅವರ ಸಂಕಲ್ಪನೆಯಲ್ಲಿ ಹಿಂದೂ ರಾಷ್ಟ್ರವು ಹೇಗಿರಬೇಕು, ಎಂಬುದರ ಬಗ್ಗೆ ಮಾರ್ಮಿಕ ವಿಶ್ಲೇಷಣೆಯನ್ನು ಮಾಡಿದ್ದಾರೆ. ಅದರಲ್ಲಿನ ಕೆಲ ಭಾಗವನ್ನು ಸಂಕ್ಷಿಪ್ತರೂಪದಲ್ಲಿ ಕೊಡುತ್ತಿದ್ದೇವೆ.
ಅಂತರರಾಷ್ಟ್ರೀಯತೆಯು ನಿರಾಧಾರವಿರದೇ ಅದನ್ನು ಸನಾತನ ಧರ್ಮವು ವ್ಯಾಪಿಸಿರುವುದು !
ಯೋಗಿ ಅರವಿಂದರ ಸಂಕಲ್ಪನೆಯ ಭಾರತದಲ್ಲಿ ತಥಾಕಥಿತ ಜಾತ್ಯತೀತತೆ, ಮತಪೆಟ್ಟಿಗೆಯ ರಾಜಕಾರಣ ಮತ್ತು ಭಾರತೀಯ ಸಂಸ್ಕೃತಿಯ ಪರಿತ್ಯಾಗ ಇವುಗಳಿಗೆ ಅನುಕೂಲವಿರಲಿಲ್ಲ.
ಯೋಗಿ ಅರವಿಂದರು ತಾತ್ತ್ವಿಕದೃಷ್ಟಿಯಿಂದ ಅಂತರರಾಷ್ಟ್ರೀಯತೆಯನ್ನು ಪುರಸ್ಕರಿಸುತ್ತಿದ್ದರು; ಆದರೆ ಅವರ ದೃಷ್ಟಿಯಲ್ಲಿ ಅಂತರರಾಷ್ಟ್ರೀಯತೆಯು ಕೇವಲ ಪೊಳ್ಳು ವಿಶ್ವಬಂಧುತ್ವವಾಗಿರಲಿಲ್ಲ, ಅದು ಸನಾತನ ಧರ್ಮಕ್ಕನುಸಾರವಾಗಿತ್ತು ಮತ್ತು ಸನಾತನ ಧರ್ಮವೇ ನಿಜವಾದ ರಾಷ್ಟ್ರೀಯತೆಯಾಗಿರುತ್ತದೆ !

ಯೋಗಿ ಅರವಿಂದರು ಅವರ ಒಂದು ಭಾಷಣದಲ್ಲಿ ಹಿಂದೂ ರಾಷ್ಟ್ರ ಮತ್ತು ಸನಾತನ ಧರ್ಮ ಇವುಗಳಲ್ಲಿನ ಧೃಢವಾದ ಸಂಬಂಧದ ಬಗ್ಗೆ ಸ್ಪಷ್ಟಪಡಿಸುವಾಗ, ಹಿಂದೂ ರಾಷ್ಟ್ರವು ಸನಾತನ ಧರ್ಮದೊಂದಿಗೆ ಉದಯಿಸಿದೆ ಮತ್ತು ಸನಾತನ ಧರ್ಮದೊಂದಿಗೆ ಹಿಂದೂ ರಾಷ್ಟ್ರದ ಮಾರ್ಗಕ್ರಮಣವಾಗಿ ಅದರ ಉತ್ಕರ್ಷವಾಗಲಿದೆ. ಸನಾತನ ಧರ್ಮದ ಅಧೋಗತಿಯಾಗುವುದಾದರೆ, ಹಿಂದೂ ರಾಷ್ಟ್ರದ ಅಧೋಗತಿಯೂ ಖಂಡಿತವಾಗಿ ಆಗುವುದು. ಸನಾತನ ಧರ್ಮವು ನಾಶವಾಗುವ ಸಾಧ್ಯತೆ ಇದ್ದರೆ, ಹಿಂದೂ ರಾಷ್ಟ್ರವೂ ನಾಶವಾಗುವುದು. ಸನಾತನ ಧರ್ಮವೇ ನಿಜವಾದ ರಾಷ್ಟ್ರವಾದವಾಗಿದೆ. ಭಾರತೀಯ ರಾಷ್ಟ್ರವಾದವು ನೈತಿಕದೃಷ್ಟಿಯಿಂದ ಹಾಗೂ ಪರಂಪರೆಗಳಿಂದ ಹಿಂದೂ ಇರುತ್ತದೆ; ಏಕೆಂದರೆ ಈ ಭೂಮಿ ಮತ್ತು ಅದರಲ್ಲಿರುವ ಜನರು ಇದೇ ಭೂಮಿಯ ಐತಿಹಾಸಿಕ ಶ್ರೇಷ್ಠತೆ, ಸಂಸ್ಕೃತಿ ಮತ್ತು ಅಭೇದ್ಯಕರವಾದ ಪೌರುಷತ್ವಗಳ ಮೇಲೆಯೇ ಉಳಿದಿದೆ. ಆದರೂ ಈ ಭೂಮಿಯಲ್ಲಿ ಇಸ್ಲಾಮ ಧರ್ಮ, ಅದರ ಸಂಸ್ಕೃತಿ ಮತ್ತು ಪರಂಪರೆಗಳನ್ನು ಸೇರಿಸಿಕೊಂಡು ಹೋಗುವ ಸಾಮರ್ಥ್ಯವಿದೆ, ಎಂದು ವಿಶ್ಲೇಷಿಸಿದ್ದಾರೆ.
ಕಾಂಗ್ರೆಸ್‌ನಂತೆ ಮುಸಲ್ಮಾನರನ್ನು ಓಲೈಸಿ ಹಿಂದೂ-ಮುಸಲ್ಮಾನರ ಐಕ್ಯತೆ ಸಾಧಿಸುವುದು ಅಸಾಧ್ಯ !
ಹಿಂದೂ-ಮುಸಲ್ಮಾನರ ಐಕ್ಯತೆ ಕುರಿತು ಯೋಗಿ ಅರವಿಂದರು ಹೇಳುತ್ತಾರೆ, ಭಾರತದಲ್ಲಿ ಜನಿಸಿದ ಇಸ್ಲಾಮಿನ ಕುರಿತು ಟೀಕಿಸುವುದರಲ್ಲಿ ಅರ್ಥವಿಲ್ಲ. ಆರಂಭದಲ್ಲಿ ಇಸ್ಲಾಮಿನ ಎಲ್ಲ ಶಕ್ತಿ, ಉರ್ಜೆ ಮತ್ತು ಕೃತಿಗಳು ಭಾರತದಲ್ಲಿ ಇಸ್ಲಾಮಿ ರಾಷ್ಟ್ರದ ಸ್ಥಾಪನೆಯ ಸಲುವಾಗಿ ಇತ್ತು. ಆದರೂ ಮುಸಲ್ಮಾನರು ಪ್ರಾಮಾಣಿಕವಾಗಿ ಸ್ವದೇಶವನ್ನು ಸ್ವೀಕರಿಸುವುದಾದರೆ, ಅವರೊಂದಿಗೆ ಸ್ನೇಹದಿಂದಿರಲು ಸಾಧ್ಯವಿದೆ. ಆದರೆ ರಾಜಕೀಯ ದೃಷ್ಟಿಯಲ್ಲಿ ಮುಸಲ್ಮಾನರೊಂದಿಗೆ ಐಕ್ಯತೆಯನ್ನು ಸಾಧಿಸುವ ಪ್ರಯತ್ನವಾದರೆ, ಅವರು ಸ್ನೇಹ-ಬಾಂಧವ್ಯದಿಂದ ತಬ್ಬಿಕೊಳ್ಳುವರೋ ಅಥವಾ ಹಗೆತನದಿಂದ ಹೋರಾಡಲು ಬರುವರೋ ಇದರ ಮೇಲೆ ಎಲ್ಲವೂ ಅವಲಂಬಿಸಿದೆ. ಕೇವಲ ರಾಜಕೀಯ ಅನುಕೂಲಕ್ಕಾಗಿ ಅಥವಾ ಕಾಂಗ್ರೆಸ್ಸಿನಂತೆ ಅವರನ್ನು ಓಲೈಸಿ ಹಿಂದೂ-ಮುಸಲ್ಮಾನರಲ್ಲಿ ಐಕ್ಯತೆಯನ್ನು ಸಾಧಿಸುವುದು ಅಸಾಧ್ಯವಿದೆ. ಅವರು ಮನಃಪೂರ್ವಕವಾಗಿ ಒಂದಾಗಿ, ಅದರಲ್ಲಿ ಏನಾದರೂ ಅಡಚಣೆಗಳು ಬಂದರೆ, ಅದರಲ್ಲಿ ಬರುವ ಮುಖ್ಯ ಸಮಸ್ಯೆಗಳನ್ನು ಪರಿಶೀಲಿಸಿ ಅವುಗಳ ಮೇಲೆ ಪರಿಹಾರವನ್ನು ಯೋಜಿಸಿದರೆ ಮಾತ್ರ ಹಿಂದೂ-ಮುಸಲ್ಮಾನರಲ್ಲಿ ಐಕ್ಯತೆಯಾಗಲು ಸಾಧ್ಯವಿದೆ. ಹಿಂದೂ-ಮುಸಲ್ಮಾನರ ಐಕ್ಯತೆಗಾಗಿ ಹಿಂದೂಗಳು ಅವರ ದುರ್ಬಲತೆಯನ್ನು ಮುಚ್ಚಿಡುವುದು ಅಥವಾ ಸ್ವಾರ್ಥಕ್ಕಾಗಿ ಭಾಯಿ-ಭಾಯಿ ಎನ್ನುವುದು ಅಥವಾ ಸುಮ್ಮನೆ ಹೊಗಳುವುದು, ಇವೆಲ್ಲವೂ ಯೋಗಿ ಅರವಿಂದರಿಗೆ ಒಪ್ಪಿಗೆ ಇಲ್ಲ. ರಾಷ್ಟ್ರವಾದಿಗಳು ಈ ದೃಷ್ಟಿಯಿಂದ ಪ್ರಯತ್ನವನ್ನು ಮಾಡಬೇಕು ಎಂದು ಯೋಗಿ ಅರವಿಂದರು ಹೇಳುತ್ತಿದ್ದರು.
ವಂದೇ ಮಾತರಮ್ ಇದು ಧಾರ್ಮಿಕವಲ್ಲ, ರಾಷ್ಟ್ರೀಯ ಗೀತೆ !
ವಂದೇ ಮಾತರಮ್ ಈ ಗೀತೆಯನ್ನು ರಾಷ್ಟ್ರಗೀತೆ ಎಂದು ಸ್ವೀಕರಿಸಲು ವಿರೋಧವಾಯಿತು, ಆಗ ಯೋಗಿ ಅರವಿಂದರ ಕೆಲವು ಶಿಷ್ಯರು ಅವರಿಗೆ, ಸಮಾಜದಲ್ಲಿನ ಕಾಂಗ್ರೆಸ್ಸಿನ ಕೆಲವು ಜನರು ವಂದೇ ಮಾತರಮ್ ಈ ಗೀತೆ ಯಲ್ಲಿನ ದೇವತೆಗಳ ಸಂದರ್ಭವಿರುವ ಕೆಲವು ಭಾಗವನ್ನು ತೆಗೆದು ಹಾಕಲು ಹೇಳುತ್ತಿದ್ದಾರೆ. ಏಕೆಂದರೆ ದುರ್ಗಾದಂತಹ ಶಬ್ದವು ಮುಸಲ್ಮಾನರಿಗೆ ಸಮ್ಮತ ವಿಲ್ಲ, ಎಂದರು. ಅದಕ್ಕೆ ಅರವಿಂದರು, ವಂದೇ ಮಾತರಮ್ ಇದು ಯಾವುದೇ ಧಾರ್ಮಿಕ ಗೀತೆಯಲ್ಲ ಅದು ರಾಷ್ಟ್ರೀಯ ಗೀತೆ ಆಗಿದೆ ಮತ್ತು ಅದರಲ್ಲಿನ ದುರ್ಗಾ ಇದು ಭಾರತಮಾತೆಯ ರೂಪವಿದೆ. ಇದು ಮುಸಲ್ಮಾನರಿಗೆ ಏಕೆ ಒಪ್ಪಿಗೆ ಇಲ್ಲ ? ದುರ್ಗೆಯ ಪ್ರತಿಮೆಯನ್ನು ಆ ಗೀತೆಯಲ್ಲಿ ಕಾವ್ಯದ ಸ್ವರೂಪದಲ್ಲಿ ಬಳಸಲಾಗಿದೆ. ಭಾರತೀಯತೆಯ ಸಂಕಲ್ಪನೆಯಲ್ಲಿ ಹಿಂದೂ ದೇವತೆಗಳ ಉಲ್ಲೇಖವು ಅನಿವಾರ್ಯವಾಗಿದೆ, ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಯೋಗಿ ಅರವಿಂದರ ಸಂಕಲ್ಪನೆಯಲ್ಲಿನ ಹಿಂದೂ ರಾಷ್ಟ್ರ !