ಜಮ್ಮು-ಕಾಶ್ಮೀರದ ಬಾಬಾ ಗುಲಾಮ ಶಾಹ ಬಾದಶಾಹ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಲ್ಲಿ ಗುಂಪು ಘರ್ಷಣೆ !

ಶ್ರೀನಗರದ ಎನ್‌ಐಟಿಯಲ್ಲಿ ದೇಶದ್ರೋಹಿ
ಮತ್ತು ದೇಶಪ್ರೇಮಿ ವಿದ್ಯಾರ್ಥಿಗಳಲ್ಲಿನ ಘರ್ಷಣೆಯ ಹಬ್ಬಿದ ಕಿಡಿ !
ರಾಜೌರಿ (ಜಮ್ಮು): ಶ್ರೀನಗರದ ಎನ್‌ಐಟಿಯಲ್ಲಿ ಕಾಶ್ಮೀರಿಗಳು ಮತ್ತು ಭಾರತದ ಬೇರೆ ಸ್ಥಳಗಳಿಂದ ಬಂದಿರುವ ವಿದ್ಯಾರ್ಥಿಗಳ ನಡುವಿನ ವಿವಾದ ಇನ್ನೂ ಮುಗಿದಿಲ್ಲ, ಈಗ ಅದೇ ಜಮ್ಮುವಿನ ರಾಜೌರಿ ಜಿಲ್ಲೆಯ ಬಾಬಾ ಗುಲಾಮಶಾಹ ಬಾದಶಾಹ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಗುಂಪು ಘರ್ಷಣೆ ಆಯಿತು. ಏಪ್ರಿಲ್ ೧೮ ರಂದು ರಾಷ್ಟ್ರಪ್ರೇಮಿ ಹಾಗೂ ರಾಷ್ಟ್ರದ್ರೋಹಿ ವಿದ್ಯಾರ್ಥಿ ಗಳಲ್ಲಿ ಹೊಡೆದಾಟವಾಯಿತು. ಅದು ತೀವ್ರ ಕಲ್ಲುತೂರಾಟದಲ್ಲಿ ಮುಕ್ತಾಯವಾಯಿತು.
೧. ಈ ಗುಂಪುಘರ್ಷಣೆಯಲ್ಲಿ ೬ ವಿದ್ಯಾರ್ಥಿಗಳು ಗಾಯಗೊಂಡಿದ್ದು ಅನೇಕ ವಾಹನಗಳನ್ನು ಪುಡಿ ಮಾಡಲಾಗಿದೆ ಹಾಗೂ ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ, ಎಂಬ ಮಾಹಿತಿಯನ್ನು ಚಂದೀಗಡ ಟ್ರಿಬ್ಯೂನ್ ಎಂಬ ಜಾಲತಾಣದಲ್ಲಿ ನೀಡಲಾಗಿದೆ.
೨. ಈ ಸಂದರ್ಭದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಭಾರತವಿರೋಧಿ ಹಾಗೂ ಪಾಕಿಸ್ತಾನಕ್ಕೆ ಜೈಕಾರ ಹಾಕುವ ಘೋಷಣೆಗಳನ್ನು ಕೂಗಿದರು. (ಇದು ಶ್ರೀನಗರದ ಎನ್‌ಐಟಿಯಲ್ಲಿ ದೇಶದ್ರೋಹಿ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳದಿರುವುದರ ಪರಿಣಾಮವಾಗಿದೆ. ಇದರಿಂದ ತನ್ನನ್ನು ರಾಷ್ಟ್ರಾಭಿಮಾನಿ ಎಂದು ಹೇಳಿಸಿಕೊಳ್ಳಲು ಪ್ರಯತ್ನಿಸುವ ನೇತಾರರೇ ರಾಷ್ಟ್ರದ್ರೋಹಿಗಳಾಗಿರಬಹುದೇ, ಎಂಬ ವಿಚಾರ ರಾಷ್ಟ್ರಾಭಿಮಾನಿ ಜನರ ಮನಸ್ಸಿನಲ್ಲಿ ಬರುತ್ತಿದ್ದರೆ, ಅದರಲ್ಲಿ ತಪ್ಪೇನಿದೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜಮ್ಮು-ಕಾಶ್ಮೀರದ ಬಾಬಾ ಗುಲಾಮ ಶಾಹ ಬಾದಶಾಹ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಲ್ಲಿ ಗುಂಪು ಘರ್ಷಣೆ !