ಕಿರೀಟದ ಮಹತ್ವ

ತೇಜದ ಸ್ತರದಲ್ಲಿ ಸೂರ್ಯನಾಡಿಯ ಮೂಲಕ ಸತತವಾಗಿ ಸತರ್ಕತೆ ಮತ್ತು ಕಾರ್ಯನಿರತೆಯು ಶಾಶ್ವತವಾಗಿರಲು ಸಾಧ್ಯವಾಗುತ್ತದೆ: ಹಿಂದಿನ ಕಾಲದಲ್ಲಿ ರಾಜರ ತಲೆಯ ಮೇಲಿನ ಕಿರೀಟವು ತಲೆಯ ಸುತ್ತಲಿನ ಬಿಂದುಗಳ ಮೇಲೆ ಗೋಲಾಕಾರ ಪದ್ಧತಿಯಲ್ಲಿ ಒಂದೇ ರೀತಿಯ ಒತ್ತಡವನ್ನು ನಿರ್ಮಾಣ ಮಾಡಿ ಅದರಲ್ಲಿನ ಟೊಳ್ಳಿನಿಂದ ಬ್ರಹ್ಮಾಂಡದಲ್ಲಿನ ಶಕ್ತಿತತ್ತ್ವದ ಲಹರಿಗಳನ್ನು ಆಕರ್ಷಿಸಿಕೊಂಡು ದೇಹದಲ್ಲಿ ತೇಜವನ್ನು ಸಂವರ್ಧನೆ ಮಾಡಲು ಪೂರಕವಾಗಿರುತ್ತಿತ್ತು. ಆದುದರಿಂದ ಅವರಲ್ಲಿ ತೇಜದ ಸ್ತರದಲ್ಲಿ ಸೂರ್ಯನಾಡಿಯ ಮೂಲಕ ಸತತವಾಗಿ ಜಾಗರೂಕತೆ ಮತ್ತು ಕೃತಿಶೀಲತೆಯು ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತಿತ್ತು.
- ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸರು ಈ ಅಂಕಿತನಾಮದಿಂದ ಬರೆಯುತ್ತಾರೆ.

ಸಾತ್ತ್ವಿಕ ರಾಜರು ಬಂಗಾರದ ಕಿರೀಟಗಳನ್ನು ಧರಿಸುವುದರಿಂದ ಅವರ ಬುದ್ಧಿಯು 
ಸಾತ್ತ್ವಿಕವಾಗಿ ಅವರಿಗೆ ದೇವತೆಗಳಿಂದ ಜ್ಞಾನವನ್ನು ಗ್ರಹಿಸಲು ಮತ್ತು ಎಲ್ಲ ಪ್ರಸಂಗಗಳಲ್ಲಿ
ಯೋಗ್ಯ ನಿರ್ಣಯವನ್ನು ಕೊಡಲು ಸಾಧ್ಯವಾಗುತ್ತಿತ್ತು
ಹಿಂದಿನ ಕಾಲದಲ್ಲಿ ಸಾತ್ತ್ವಿಕ ರಾಜರು ಬಂಗಾರದ ಕಿರೀಟಗಳನ್ನು ಧರಿಸುತ್ತಿದ್ದರು. ಕಿರೀಟದಲ್ಲಿನ ಸಾತ್ತ್ವಿಕತೆಯಿಂದ ಅವರ ಬುದ್ಧಿಯು ಸಾತ್ತ್ವಿಕವಾಗುತಿತ್ತು. ಬ್ರಹ್ಮದೇವ ಮತ್ತು ಶ್ರೀಸರಸ್ವತಿದೇವಿಯಿಂದ ಪ್ರಕ್ಷೇಪಿತವಾಗುವ ಜ್ಞಾನಲಹರಿಗಳನ್ನು  ಅವರಿಗೆ ಸಹಜವಾಗಿ ಗ್ರಹಿಸಲು ಸಾಧ್ಯವಾಗುತ್ತಿತ್ತು. ಇದರಿಂದ ಅವರು ಸವಿಸ್ತಾರ ವಿಚಾರ ಮಾಡಿ ಪ್ರಜೆಗಳಿಗೆ ಯೋಗ್ಯ ನಿರ್ಣಯಗಳನ್ನು ಕೊಡುತ್ತಿದ್ದರು. ಪ್ರಜೆಗಳ ಎಲ್ಲ ಅಡಚಣೆಗಳಿಗೆ ಒಳ್ಳೆಯ ಪರಿಹಾರೋಪಾಯಗಳನ್ನು ಕಂಡುಹಿಡಿಯುತ್ತಿದ್ದರು. ಜ್ಞಾನದಿಂದ ಅವರ ಬುದ್ಧಿಯು ಸಾತ್ತ್ವಿಕವಾಗಿ ಅವರ ವಿವೇಕವು ಜಾಗೃತವಾಗಿರುತ್ತಿತ್ತು ಮತ್ತು ದೇವತೆಗಳಿಂದ ಸಿಗುವ ಮಾರ್ಗದರ್ಶನದಿಂದ ಕಠಿಣ ಪ್ರಸಂಗಗಳಲ್ಲಿಯೂ ಅವರು ಯೋಗ್ಯ ನಿರ್ಣಯ ಮತ್ತು ನ್ಯಾಯವನ್ನು ನೀಡುತ್ತಿದ್ದರು. ಇದರಿಂದ ಇಂತಹ ರಾಜರ ರಾಜ್ಯಗಳಲ್ಲಿ ಎಲ್ಲ ಆಡಳಿತಗಳು ಸುಲಲಿತವಾಗಿ ನಡೆಯುತ್ತಿದ್ದವು.
(ಆಧಾರ : ಸನಾತನದ ಗ್ರಂಥ ‘ಸ್ತ್ರೀ-ಪುರುಷರ ಆಭರಣಗಳು ಸಾತ್ತ್ವಿಕ ಆಭರಣಗಳ ಶ್ರೇಷ್ಠತ್ವ ತಿಳಿಸುವ ವಿವೇಚನೆ ಸಹಿತ !’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಿರೀಟದ ಮಹತ್ವ