ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.

ಫಲಕ ಪ್ರಸಿದ್ಧಿಗಾಗಿ

೧. ಭಾಜಪ ಸರಕಾರವು ಉಗ್ರವಾದಿಗಳ
ಈ ಬೆದರಿಕೆಯನ್ನು ಎದುರಿಸಲು ಸಿದ್ಧವಿದೆಯೇ ?
ನಾವು ಬಾಬರಿ ಮಸೀದಿ, ಮುಝಫ್ಫರನಗರ, ಗುಜರಾತ, ಕಾಶ್ಮೀರದಲ್ಲಿನ ಗಲಭೆಗಳ ಸೇಡು ತೀರಿಸಿಕೊಳ್ಳುವೆವು, ಎಂಬ ಬೆದರಿಕೆಯನ್ನು ನೀಡುವ ವೀಡಿಯೋವನ್ನು ಐಸಿಸ್ ಪ್ರಕಟಿಸಿದೆ. ಅದರಂತೆಯೇ ಇಸ್ಲಾಂ ಸ್ವೀಕರಿಸಿ, ಇಲ್ಲದಿದ್ದರೆ ಜಿಝಿಯಾ ತೆರಿಗೆ ತುಂಬಿರಿ ಇಲ್ಲವೇ ಸಾಯಲು ಸಿದ್ಧರಾಗಿರಿ !, ಎಂಬ ಒಂದು ಬೆದರಿಕೆಯನ್ನೂ ನೀಡಲಾಗಿದೆ. 

೨. ದೇಶದ್ರೋಹಿಗಳ ಮುಂದೆ ಶರಣಾಗುವ ರಾಜಕಾರಣಿಗಳ
ನಿರರ್ಥಕ ಪ್ರಜಾಪ್ರಭುತ್ವಕ್ಕಿಂತ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !
ಜಮ್ಮು-ಕಾಶ್ಮೀರದಲ್ಲಿನ ನಿರಾಶ್ರಿತ ಹಿಂದೂಗಳಿಗಾಗಿ ಸ್ವತಂತ್ರ ವಸಾಹತುಗಳನ್ನು ಕಟ್ಟುವುದಿಲ್ಲ, ಎಂದು ಜಮ್ಮು-ಕಾಶ್ಮೀರದ ಭಾಜಪ-ಪಿಡಿಪಿ ಸರಕಾರವು ಸ್ಪಷ್ಟಪಡಿಸಿದೆ. ದೇಶದ್ರೋಹಿ ಪ್ರತ್ಯೇಕತಾವಾದಿಗಳ ಪ್ರಚಂಡ ಒತ್ತಡದಿಂದಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬುದರ ಸಾಧ್ಯತೆಯನ್ನು ಹೇಳಲಾಗುತ್ತಿದೆ.

೩. ಭಾರತವು ಕ್ರಾಂಗ್ರೆಸ್‌ಮುಕ್ತವಾಗುತ್ತಿದ್ದರೂ
ಹಿಂದೂಗಳಿಗೆ ಇತರ ಸರಕಾರಗಳಿಂದ ಏನು ಲಾಭ ?
ಕಳೆದ ೨ ವರ್ಷಗಳಿಂದ ದೇಶದಲ್ಲಿರುವ ಕಾಂಗ್ರೆಸ್‌ವಿರೋಧಿ ಅಲೆಯು ಇನ್ನೂ ಕಡಿಮೆಯಾಗಲಿಲ್ಲ. ದೇಶದಲ್ಲಿ ಇತ್ತೀಚೆಗೆ ನಡೆದ ೫ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ೪ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಘೋರ ಪರಾಜಯವಾಗಿದೆ. ೫ ರಾಜ್ಯಗಳಲ್ಲಿ ಅಸ್ಸಾಂ ಮತ್ತು ಕೇರಳದಲ್ಲಿದ್ದ ಅಧಿಕಾರವನ್ನೂ ಕಾಂಗ್ರೆಸ್ ಕಳೆದುಕೊಳ್ಳಬೇಕಾಯಿತು.

೪. ಜನರೇ, ॐ ಅನ್ನು ಯೋಗಾಸನದಿಂದ ತೆಗೆಯುವುದೆಂದರೆ
ದೇಹದಿಂದ ಚೇತನಾಶಕ್ತಿಯನ್ನು ತೆಗೆದಂತೆ, ಎಂಬುದನ್ನು ಗಮನದಲ್ಲಿಡಿ !
ಜೂನ್ ೨೧ ರ ಅಂತಾರಾಷ್ಟ್ರೀಯ ಯೋಗದಿನದಂದು ॐ ಮತ್ತು ವೇದದಲ್ಲಿನ ಇತರ ಮಂತ್ರ ಹೇಳುವುದು ಸಂಪೂರ್ಣವಾಗಿ ಐಚ್ಛಿಕವಾಗಿದೆ. ಹೀಗೆ ಹೇಳಬೇಕೆಂಬ ಯಾವುದೇ ಬಂಧನವಿಲ್ಲ, ಎಂದು ಕೇಂದ್ರಿಯ ಆರೋಗ್ಯ ಸಚಿವಾಲಯವು ಸ್ಪಷ್ಟೀಕರಣ ನೀಡಿದೆ.

೫. ಪೂಜ್ಯಸ್ಥಾನದಲ್ಲಿರುವ ಸಾಧ್ವಿಯು ಹೀಗೆ ಉಪವಾಸ ಮಾಡಬೇಕಾಗುತ್ತದೆ, 
ಎಂಬುದು ಹಿಂದೂಗಳಿಗೆ ಲಜ್ಜಾಸ್ಪದ ವಿಷಯ !
ಉಜ್ಜೈನ್‌ನಲ್ಲಿ ನಡೆಯತ್ತಿರುವ ಸಿಂಹಸ್ಥಪರ್ವದಲ್ಲಿ ಸ್ನಾನ ಮಾಡುವ ಬೇಡಿಕೆಯನ್ನು ಮಾಡುತ್ತಾ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಇವರು ಮೇ ೧೬ ರಿಂದ ಆಸ್ಪತ್ರೆಯಲ್ಲಿ ಉಪವಾಸ ಪ್ರಾರಂಭಿಸಿದರು. ಬೇಡಿಕೆ ಈಡೇರಿಸದಿದ್ದರೆ ಮೇ ೨೧ ರ ರಾತ್ರಿ ೮ ಗಂಟೆಗೆ ಪ್ರಾಣತ್ಯಾಗ ಮಾಡುವೆನೆಂದು ಅವರು ಘೋಷಿಸಿದರು.
 
೬. ಬಾಂಗ್ಲಾದೇಶದ ಅಲ್ಪಸಂಖ್ಯಾತ
ಹಿಂದೂಗಳ ಮೇಲೆ ಸತತ ನಡೆಯುತ್ತಿರುವ ದೌರ್ಜನ್ಯ !
ಬಾಂಗ್ಲಾದೇಶದಲ್ಲಿನ ವಿಜಯನಗರ ಸಮೀಪದ ಎರಿಯಾಲ್ ಎಂಬ ಊರಿನಲ್ಲಿ ಓರ್ವ ರಾಜಕಾರಣಿಯು ೭೫ ಮತಾಂಧರ ಸಹಾಯದಿಂದ ಊರಿನಲ್ಲಿನ ೩೮ ಹಿಂದೂಗಳ ಮೇಲೆ ಶಸ್ತ್ರ ಮತ್ತು ಬಂದೂಕುಗಳ ಮೂಲಕ ಪ್ರಾಣಘಾತಕ ಆಕ್ರಮಣ ಮಾಡಿದರು. ಆಗ ಅವರು ೧೭ ಲಕ್ಷ ರೂಪಾಯಿಗಳಷ್ಟು ಸಂಪತ್ತು ಕೊಳ್ಳೆಹೊಡೆದರು ಮತ್ತು ಇಬ್ಬರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರವನ್ನೂ ಮಾಡಿದರು.

೭. ರಾತ್ರಿಯ ಸಮಯದಲ್ಲಿ ಮನೆ ಗುಡಿಸಿ
ಕಸವನ್ನು ಹೊರಗಡೆಗೆ ಏಕೆ ಹಾಕಬಾರದು ?
ರಾತ್ರಿ ಸಮಯದಲ್ಲಿ ವಾತಾವರಣದಲ್ಲಿ ಕೆಟ್ಟ ಶಕ್ತಿ ಸಂಚಾರವು ಅತೀ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಮನೆ ಗುಡಿಸುವಾಗ ಕಸಬರಿಕೆಯಿಂದ ಉಂಟಾಗುವ ಶಬ್ದಗಳ ಕಡೆಗೆ ವಾತಾವರಣದಲ್ಲಿನ ಕೆಟ್ಟ ಶಕ್ತಿಯೂ ಆಕರ್ಷಿತವಾಗುವುದರಿಂದ ಅವು ವಾಸ್ತುವನ್ನು ಪ್ರವೇಶಿಸುವ ಸಾಧ್ಯತೆಯು ಹೆಚ್ಚಿರುತ್ತದೆ. ಆದುದರಿಂದ ರಾತ್ರಿ ಸಮಯದಲ್ಲಿ ಕಸ ಗುಡಿಸಬಾರದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !