ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮಕ್ಕೆ ಸ್ವಾಮಿ ಶ್ರೀ ಶಿವಾನಂದ ಸರಸ್ವತಿಯವರ ಶುಭಾಗಮನ

ರಾಮನಾಥಿ : ಬೆಂಗಳೂರಿನ ನಂದಿ ಜ್ಞಾನಾನಂದ ಆಶ್ರಮದ ವಿಶ್ವಕರ್ಮಾ ಕುಲೋತ್ಪನ್ನ ಸ್ವಾಮಿ ಶ್ರೀ ಶಿವಾತ್ಮಾನಂದ ಸರಸ್ವತಿ ಇವರು ತಮ್ಮ ಕೆಲವು ಅನುಯಾಯಿಗಳೊಂದಿಗೆ ಏಪ್ರಿಲ್ ೨೮ ರಂದು ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಆಶ್ರಮದಲ್ಲಿ ನಡೆಯುವ ರಾಷ್ಟ್ರ, ಧರ್ಮ ಮತ್ತು ಆಧ್ಯಾತ್ಮಿಕ ಸಂಶೋಧನೆಯ ಕಾರ್ಯವನ್ನು ತಿಳಿದುಕೊಂಡರು. ಈ ಸಂದರ್ಭದಲ್ಲಿ ಅವರಿಗೆ ಸನಾತನದ ಸಾಧಕರಾದ ಶ್ರೀ. ಪ್ರಕಾಶ ಜೋಶಿಯವರು ಮಾಹಿತಿ ನೀಡಿದರು.

ವಿಶ್ವಕರ್ಮಾ ಕುಲೋತ್ಪನ್ನ ಸ್ವಾಮಿ ಶ್ರೀ ಶಿವಾತ್ಮಾನಂದ ಸರಸ್ವತಿ ಇವರಲ್ಲಿ ಸನಾತನದ ಬಗ್ಗೆ ಇರುವ ಭಾವ
ಸನಾತನದ ಕೆಲವು ಗ್ರಂಥಗಳನ್ನು ಸ್ವಾಮೀಜಿಯವರು ತೆರೆದು ನೋಡಿದ ನಂತರ ಹೇಳಿದರು,
. .ಪೂ. ಭಕ್ತರಾಜ ಮಹಾರಾಜರು ಮತ್ತು ಪ.ಪೂ.ಡಾ. ಆಠವಲೆ ಇವರು ಆಧ್ಯಾತ್ಮದ ಭದ್ರ ಅಡಿಪಾಯವನ್ನು ಹಾಕಿದ್ದಾರೆ. ಅಡಿಪಾಯ ಗಟ್ಟಿಯಾಗಿದ್ದರೆ, ಕಟ್ಟಡವನ್ನು ಗಟ್ಟಿಮುಟ್ಟಾಗಿ ಹಾಗೂ ದೊಡ್ಡದಾಗಿ ನಿರ್ಮಿಸಬಹುದು. ಈ ಕಾರ್ಯವನ್ನು ಪ.ಪೂ. ಆಠವಲೆಯವರು ಮಾಡುತ್ತಿದ್ದಾರೆ. ಮುಂಬರುವ ಕಾಲದಲ್ಲಿ ಬೇರೆ ಏನೂ ಇರಲಿಕ್ಕಿಲ್ಲ, ಕೇವಲ ಸನಾತನ ಸಂಸ್ಥೆಯ ಕಾರ್ಯ ಇರುವುದು.
. ಇದು ಪ.ಪೂ. ಭಕ್ತರಾಜ ಮಹಾರಾಜರು (.ಪೂ. ಬಾಬಾ) ಮತ್ತು ಪ.ಪೂ. ಡಾಕ್ಟರರ ಬಹಳ ದೊಡ್ಡ ಕಾರ್ಯ ವಾಗಿದೆ. ಅವರು ಬಹಳ ಪರಿಶ್ರಮ ಪಟ್ಟಿದ್ದಾರೆ.
. ನಾನು ಇಂದು ಸನಾತನ ಆಶ್ರಮಕ್ಕೆ ಹೇಗೆ ಬಂದೆನು, ಎಂಬುದು ನನಗೇ ಗೊತ್ತಿಲ್ಲ. ಯಾರೋ ಎಳೆದುಕೊಂಡು ಬಂದ ಹಾಗೆ ಇಲ್ಲಿಗೆ ಬಂದಿದ್ದೇನೆ.
. ಸನಾತನ ಧರ್ಮ ನಮ್ಮ ಬೀಜ ವಾಗಿದೆ. ಅದರ ಪ್ರಸಾರವೇ ಆಗಬೇಕು. ಈ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ.
. ಈ ಹಿಂದೆ ನನಗೆ ಸನಾತನದ ವಿಷಯದಲ್ಲಿ ಒಳ್ಳೆಯ-ಕೆಟ್ಟ ವಿಷಯಗಳೂ ಕೇಳಿಬಂದಿದ್ದವು. ಸನಾತನದ ಆಶ್ರಮಕ್ಕೆ ಬಂದಾಗ ಸತ್ಯ ಏನೆಂದು ತಿಳಿಯಿತು ಹಾಗೂ ಸನಾತನದ ಕಾರ್ಯದ ವಿಶಾಲತೆ ತಿಳಿಯಿತು.
. ಈ ಹಿಂದೆ ಸ್ವಾಮೀಜಿಯವರಿಗೆ ಸನಾತನದ ಕಾರ್ಯದ ಬಗ್ಗೆ ಹೆಚ್ಚು ಪರಿಚಯವಿರಲಿಲ್ಲ. ಸನಾತನದ ರಾಮನಾಥಿ ಆಶ್ರಮಕ್ಕೆ ಬಂದಾಗ ಸ್ವಾಮಿಯವರು ಹೇಳಿದರು, ಇಷ್ಟರವರೆಗೆ ನಾನು ಕೇವಲ ಒಂದು ಹನಿಯನ್ನು ನೋಡಿದ್ದ್, ಇಲ್ಲಿಗೆ ಬಂದನಂತರ ನನಗೆ ಸಮುದ್ರ ಕಾಣಿಸಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮಕ್ಕೆ ಸ್ವಾಮಿ ಶ್ರೀ ಶಿವಾನಂದ ಸರಸ್ವತಿಯವರ ಶುಭಾಗಮನ