ಶ್ರೀ ಗುರುಗಳ ಮನಸ್ಸನ್ನು ಗೆಲ್ಲುವ ತಳಮಳದಿಂದಾಗಿ ವಿವಾಹ ಇತ್ಯಾದಿ ಮಾಯೆಯ ಸುಖಗಳನ್ನು ತ್ಯಜಿಸಿ ಜೀವನವನ್ನು ಸಾಧನೆಗಾಗಿಯೇ ಮುಡಿಪಾಗಿಡುವ ದೃಢನಿಶ್ಚಯವುಳ್ಳ ಕೆಲವು ಯುವ ಸಾಧಕರು !

‘ವಿವಿಧ ಜಿಲ್ಲೆಗಳಲ್ಲಿ ಅನೇಕ ಉಚ್ಚಶಿಕ್ಷಿತ ಯುವ ಸಾಧಕರು ಸನಾತನದ ಆಶ್ರಮದಲ್ಲಿ ಮತ್ತು ಪ್ರಸಾರದಲ್ಲಿ ಪೂರ್ಣವೇಳೆ ಸಾಧನೆ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ‘ತನ್ನ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವುದು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅಳಿಲು ಸೇವೆ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ. ಆದ್ದರಿಂದ ವಿವಾಹ ಇತ್ಯಾದಿ ಮಾಯೆಯಲ್ಲಿ ಸಿಲುಕದೆ ನಾನು ಈ ಧ್ಯೇಯಕ್ಕಾಗಿಯೇ ನನ್ನ ಜೀವನವನ್ನು ಸಮರ್ಪಿಸುವೆನು’ ಎಂಬ ದೃಢನಿಶ್ಚಯ ಮಾಡಿದ್ದಾರೆ.
 ತ್ಯಾಗಿ ವೃತ್ತಿ ಮತ್ತು ಧ್ಯೇಯನಿಷ್ಠೆಯಿಂದಾಗಿ ಯುವ ವಯಸ್ಸಿನಲ್ಲಿ ಈ ರೀತಿಯ ನಿರ್ಧಾರ ಮಾಡುವ ಮತ್ತು ಧ್ಯೇಯಪೂರ್ತಿಗಾಗಿ ಜೀವನವನ್ನು ಸಮರ್ಪಿಸುವ ಈ ಸಾಧಕರನ್ನು ಎಷ್ಟೇ ಪ್ರಶಂಸಿಸಿದರೂ ಅದು ಕಡಿಮೆಯೇ !
‘ಈ ಸಾಧಕರ ಆಧ್ಯಾತ್ಮಿಕ ಉನ್ನತಿ ಶೀಘ್ರವಾಗಿ ಆಗಲಿ, ಎಂದು ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ !’
- (ಪೂ.) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೫.೨೦೧೬)

ಕ್ರಾಂತಿಕಾರರಂತೆ ಯುವ ಸಾಧಕರ ದೃಢ ಧ್ಯೇಯನಿಷ್ಠೆ !
ಭಾರತವು ಸ್ವತಂತ್ರವಾಗುವ ಮೊದಲು ಆಯಾ ಸ್ಥಳದ ಅನೇಕ ಯುವಕರು ಅವರಲ್ಲಿನ ತೇಜಸ್ವಿ ರಾಷ್ಟ್ರಾಭಿಮಾನದಿಂದಾಗಿ ತಮ್ಮ ಪ್ರಾಣವನ್ನು ಆಹುತಿ ನೀಡುವ ಸಿದ್ಧತೆಯೊಂದಿಗೆ ಕ್ರಾಂತಿಯಜ್ಞದಲ್ಲಿ ಧುಮುಕಿದ್ದರು. ಮನೆ-ಮಠ, ವಿವಾಹ ಇತ್ಯಾದಿಗಳಿಗಿಂತ ರಾಷ್ಟ್ರದ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯತೆ ನೀಡಿದ ಈ ಕ್ರಾಂತಿಕಾರರ ಆದರ್ಶ ವನ್ನಿಟ್ಟು ಈ ಯುವ ಸಾಧಕರು ಸಾಧನಾನಿರತರಾಗಿದ್ದಾರೆ, ಎಂದು ಹೇಳಿದರೆ ಅದರಲ್ಲಿ ಹೊಸತೇನು !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀ ಗುರುಗಳ ಮನಸ್ಸನ್ನು ಗೆಲ್ಲುವ ತಳಮಳದಿಂದಾಗಿ ವಿವಾಹ ಇತ್ಯಾದಿ ಮಾಯೆಯ ಸುಖಗಳನ್ನು ತ್ಯಜಿಸಿ ಜೀವನವನ್ನು ಸಾಧನೆಗಾಗಿಯೇ ಮುಡಿಪಾಗಿಡುವ ದೃಢನಿಶ್ಚಯವುಳ್ಳ ಕೆಲವು ಯುವ ಸಾಧಕರು !