ಕಾಶ್ಮೀರದಲ್ಲಿ ಉಗ್ರರ ಸ್ಮರಣಾರ್ಥ ಕ್ರಿಕೆಟ್ ಸ್ಪರ್ಧೆ, ತಂಡಕ್ಕೆ ಉಗ್ರರ ಹೆಸರು !

ಶ್ರೀನಗರ : ಕೆಲವು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ತ್ರಾಲ್ ಎಂಬ ಸಂವೇದನಾಶೀಲ ಭಾಗದಲ್ಲಿ ಕ್ರಿಕೆಟ್ ಸ್ಪರ್ಧೆ ಆಯೋಜಿಸಲಾಯಿತು. ಹೆಚ್ಚು ಕಡಿಮೆ ೨ ತಿಂಗಳ ಬಳಿಕ ಏಪ್ರಿಲ್ ೨೭ ರಂದು ಸ್ಪರ್ಧೆಯ ಮುಕ್ತಾಯ ಸಮಾರಂಭ ನಡೆಯಿತು. ಈ ಇದರಲ್ಲಿ ಭಾಗವಹಿಸಿದ ತಂಡದವರು ಉಗ್ರರಾಗಿದ್ದರು, ಎಂಬ ಕಳವಳಕಾರಿ ವಿಷಯ ಬೆಳಕಿಗೆ ಬಂದಿದೆ. ಉಗ್ರರ ಹೆಸರಿನಲ್ಲಿ ಭಾಗವಹಿಸಿದ ತಂಡದ ಬಗ್ಗೆ ವಿಚಾರಿಸಿದಾಗ ಆ ಜಾಗದಲ್ಲಿ ಅದು ಸಾಮಾನ್ಯವೆಂದು ಪ್ರಾಯೋಜಕರು ತಿಳಿಸಿದರು ಹಾಗೂ ಸ್ಪರ್ಧೆಯು ನಿರಾತಂಕವಾಗಿ ನಡೆಯಲು ಈದ್ಗಾ ಮೈದಾನದಿಂದ ಪೋಲೀಸ್ ಹಾಗೂ ಭಾರತೀಯ ಸೇನೆ ಯನ್ನು ೨ ತಿಂಗಳ ತನಕ ದೂರವಿಟ್ಟಿದ್ದಾಗಿ ಪ್ರಾಯೋಜಕರು ತಿಳಿಸಿದರು.
(೨ ತಿಂಗಳ ತನಕ ಸ್ಪರ್ಧೆಯ ಮೈದಾನದಿಂದ ದೂರವಿದ್ದರೂ, ಪೊಲೀಸರ ಗುಪ್ತಚರರಿಂದ ಯಾವುದೇ ಮಾಹಿತಿ ಸಿಗದಿದ್ದರೆ ಹಾಗೂ ಮಾಹಿತಿ ಸಿಕ್ಕರೂ ಪೊಲೀಸರು ನಿಷ್ಕ್ರಿಯ ರಾಗಿದ್ದರೆ, ಅಂತಹ ಪೊಲೀಸರ ಮೇಲೆ ಪಿಡಿಪಿ-ಭಾಜಪ ಸರಕಾರ ಕ್ರಮಜರುಗಿಸ ಬೇಕು. ಅದೇ ರೀತಿ ಸ್ಪರ್ಧೆಯ ಆಯೋಜಕ ರನ್ನು ದೇಶದ್ರೋಹದ ಆರೋಪದಲ್ಲಿ ಸೆರೆಮನೆಗೆ ಅಟ್ಟಬೇಕು ! - ಸಂಪಾದಕರು)
ಸ್ಪರ್ಧೆಯನ್ನು ಆಯೋಜಿಸುವ ತನಕ ಸರಕಾರ ನಿದ್ದೆ ಹೊಡೆಯುತ್ತಿತ್ತೇ ? ದೇಶದ್ರೋಹಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಪದಚ್ಯುತಗೊಂಡ ನಂತರವೂ ಕಾಶ್ಮೀರದಲ್ಲಿ ದೇಶದ್ರೋಹಿಗಳ ಮೇಲೆ ಕ್ರಮಕೈಗೊಳ್ಳದಿದ್ದರೆ, ಕಾಶ್ಮೀರವನ್ನು ಸೇನೆಗೆ ಒಪ್ಪಿಸುವುದೇ ಒಳಿತು ! ಇದು ಪಾಕ್‌ನೊಂದಿಗೆ ಕ್ರಿಕೆಟ್ ಆಡಿ ಮೈತ್ರಿಯ ಸಂಬಂಧ ನಿರ್ಮಿಸುವುದರ ದುಷ್ಪರಿಣಾಮವಲ್ಲ ತಾನೆ ?

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಶ್ಮೀರದಲ್ಲಿ ಉಗ್ರರ ಸ್ಮರಣಾರ್ಥ ಕ್ರಿಕೆಟ್ ಸ್ಪರ್ಧೆ, ತಂಡಕ್ಕೆ ಉಗ್ರರ ಹೆಸರು !