೨ ಸಾವಿರದ ೪೦೦ ಕ್ಕಿಂತ ಅಧಿಕ ಹಿರಿಯ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ! - ಕೇಂದ್ರೀಯ ತನಿಖಾ ದಳ

ಪ್ರಜಾಪ್ರಭುತ್ವದ ನಿರರ್ಥಕತೆಯನ್ನು ಸ್ಪಷ್ಟ ಪಡಿಸುವ ಅಂಕಿ-ಅಂಶಗಳು !
ಭ್ರಷ್ಟಾಚಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಿಂದೂ ರಾಷ್ಟ್ರವೇ ಬೇಕು !
ನವ ದೆಹಲಿ : ೨ ಸಾವಿರದ ೪೦೦ ಕ್ಕಿಂತ ಅಧಿಕ ಹಿರಿಯ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳಿವೆಯೆಂದು ಕೇಂದ್ರೀಯ ತನಿಖಾ ಇಲಾಖೆಯು ತಿಳಿಸಿದೆ. (ಇಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಸರಕಾರ ಏನು ಕ್ರಮ ಕೈಕೊಳ್ಳಲಿದೆ?ಎನ್ನುವುದನ್ನು ಸರಕಾರ ಸ್ಪಷ್ಟ ಪಡಿಸಬೇಕು! - ಸಂಪಾದಕರು)
ಪ್ರತಿಯೊಂದು ಪ್ರಕರಣದ ತನಿಖೆ ಯನ್ನು ಪೂರ್ಣಗೊಳಿಸಲು ಕೇಂದ್ರೀಯ ತನಿಖಾ ಇಲಾಖೆಗೆ ೬ ತಿಂಗಳ ಕಾಲಾವಕಾಶ ಬೇಕಾಗು ತ್ತದೆ. ಕೆಲವೊಂದು ಕ್ಲಿಷ್ಟ ಪ್ರಕರಣಗಳಲ್ಲಿ ತನಿಖೆ ಪೂರ್ಣ ಗೊಳಿಸಲು ೧ ವರ್ಷಕ್ಕಿಂತ ಅಧಿಕ ಕಾಲಾವಧಿ ಬೇಕಾಗು ತ್ತದೆ ಎಂದು ಕೇಂದ್ರೀಯ ತನಿಖಾ ಇಲಾಖೆಯ ನಿರ್ದೇಶಕರಾದ ಅನಿಲ ಸಿನ್ಹಾರವರು ಸಂಸತ್ತಿನ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ. ಭ್ರಷ್ಟ ಅಧಿಕಾರಿಗಳ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. ೮೭ ರಷ್ಟು ಹೆಚ್ಚಾಗಿರುವುದಾಗಿ ಸಿನ್ಹಾ ಇವರು ಹೇಳಿದ್ದಾರೆ. (ಭ್ರಷ್ಟಾಚಾರವು ಕಾಂಗ್ರೆಸ್ಸಿನ ಸರಕಾರದ ಅವಧಿಗಿಂತ ಈಗಿನ ಸರಕಾರದ ಅವಧಿಯಲ್ಲಿ ಹೆಚ್ಚಾಗಿದೆಯೋ ಅಥವಾ ಅದು ಈಗ ಬೆಳಕಿಗೆ ಬಂದಿದೆಯೋ?- ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
೨ ಸಾವಿರದ ೪೦೦ ಕ್ಕಿಂತ ಅಧಿಕ ಹಿರಿಯ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ! - ಕೇಂದ್ರೀಯ ತನಿಖಾ ದಳ