ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉಲ್ಲೇಖನೀಯ ಕಾರ್ಯ ಮಾಡುವ ಸನಾತನದ ಸಾಧಕರಾದ ಶ್ರೀ. ಗಣೇಶ ಪವಾರ ಮತ್ತು ಸೌ. ಸುಹಾಸಿನಿ ಪವಾರ್ ಇವರಿಗೆ ರಾಜ್ಯಪಾಲರಿಂದ ಸತ್ಕಾರ

ಮುಂಬಯಿ : ಇಲ್ಲಿನ ಸಾಧಕ ದಂಪತಿಗಳಾದ ಶ್ರೀ. ಗಣೇಶ ಲಕ್ಷ್ಮಣ ಪವಾರ್ ಮತ್ತು ಸೌ. ಸುಹಾಸಿನಿ ಗಣೇಶ ಪವಾರ್ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉಲ್ಲೇಖನೀಯ ಕಾರ್ಯ ಮಾಡಿದ್ದಕ್ಕಾಗಿ ಉತ್ತರಪ್ರದೇಶದ ರಾಜ್ಯಪಾಲ ಶ್ರೀ. ರಾಮ ನಾಯಿಕ್ ಇವರಿಂದ ಶಾಲು, ಶ್ರೀಫಲ, ಗೌರವಚಿಹ್ನೆ ಮತ್ತು ತುಳಸಿ ವೃಂದಾವನವನ್ನು ನೀಡಿ ಸತ್ಕಾರ ಮಾಡಲಾಯಿತು.

ಸಹಯೋಗ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀ. ಗಣೇಶ ಖಣಕರ್ ಇವರು ಚೋಗಲೆ ಮೈದಾನ, ಶ್ರೀಕೃಷ್ಣ ನಗರ, ಬೊರಿವಲಿ ಪೂರ್ವದಲ್ಲಿ ಗೀತ ರಾಮಾಯಣದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯ ಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉಲ್ಲೇಖನೀಯ ಕಾರ್ಯ ಮಾಡುತ್ತಿರುವ ೧೦ ರಿಂದ ೧೨ ವ್ಯಕ್ತಿಗಳ ಸತ್ಕಾರ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ೨ ಸಾವಿರಕ್ಕಿಂತಲೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು. ಇಲ್ಲಿ ಸನಾತನ ಸಂಸ್ಥೆಯ ಗ್ರಂಥ ಪ್ರದರ್ಶನವನ್ನೂ ಇಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಗವದ್ಗೀತೆಗಳನ್ನು ಉಚಿತವಾಗಿ ಹಂಚಲಾಯಿತು.
ಸತ್ಕಾರವು ಸಂಪೂರ್ಣ ಗುರುಗಳದ್ದೇ ! - ಶ್ರೀ. ಮತ್ತು ಸೌ. ಪವಾರ್
ಶ್ರೀ. ಗಣೇಶ ಪವಾರ್ ಮತ್ತು ಸೌ. ಸುಹಾಸಿನಿ ಪವಾರ್ ಇವರಲ್ಲಿ ಯಾವುದೇ ಹುದ್ದೆ ಇಲ್ಲದಿರುವಾಗ ಅವರು ನಿರಪೇಕ್ಷ ಭಾವದಿಂದ ಸನಾತನ ಸಂಸ್ಥೆಯ ವತಿಯಿಂದ ಧರ್ಮಪ್ರಸಾರ ಮಾಡುತ್ತಾರೆ. ಆಧ್ಯಾತ್ಮಿಕ ಗ್ರಂಥ ಪ್ರದರ್ಶನ ಮತ್ತು ಇತರ ಧರ್ಮಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಆದ್ದರಿಂದ ಅವರನ್ನು ಸತ್ಕರಿಸಲಾಯಿತು. ಈ ಸತ್ಕಾರವು ಕೇವಲ ಶ್ರೀಗುರುಗಳ ಕೃಪೆಯಿಂದಲೇ ಆಗಿದೆ. ಅದು ನಮ್ಮದಾಗಿರದೆ, ಎಲ್ಲವೂ ಅವರದ್ದೇ ಆಗಿದೆ, ಎಂದು ಶ್ರೀ. ಮತ್ತು ಸೌ. ಪವಾರ್ ಇವರು ಮನೋಗತವನ್ನು ವ್ಯಕ್ತಪಡಿಸಿದರು.
ಶ್ರೀ. ಮತ್ತು ಸೌ. ಪವಾರ್ ಇವರ ಮಗಳು ಕು. ಅದಿತಿ ಪವಾರ್ ಇವರು ಪನವೇಲ್‌ನ ದೇವದನಲ್ಲಿರುವ ಸನಾತನ ಆಶ್ರಮದಲ್ಲಿ ಪೂರ್ಣವೇಳೆ ಸೇವೆ ಮಾಡುತ್ತಿದ್ದಾಳೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉಲ್ಲೇಖನೀಯ ಕಾರ್ಯ ಮಾಡುವ ಸನಾತನದ ಸಾಧಕರಾದ ಶ್ರೀ. ಗಣೇಶ ಪವಾರ ಮತ್ತು ಸೌ. ಸುಹಾಸಿನಿ ಪವಾರ್ ಇವರಿಗೆ ರಾಜ್ಯಪಾಲರಿಂದ ಸತ್ಕಾರ