(ಪರಾತ್ಪರ ಗುರು) ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳ ನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಳ್ಳಿರಿ !

ಸನಾತನದ ಗ್ರಂಥ ನಿರ್ಮಿತಿಯ ಕಾರ್ಯದಲ್ಲಿ ಸಹಾಯ ಬೇಕಾಗಿದೆ !
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಧರ್ಮ, ಅಧ್ಯಾತ್ಮ, ಸಾಧನೆ, ಈಶ್ವರ ಪ್ರಾಪ್ತಿಗಾಗಿ ಕಲೆ ಇಂತಹ ವಿವಿಧ ವಿಷಯಗಳ ೪ ಸಾವಿರ ಗ್ರಂಥಗಳಲ್ಲಿ ಕೇವಲ ೨೮೪ ಗ್ರಂಥ-ಕಿರುಗ್ರಂಥಗಳು ನಿರ್ಮಿತಿಯಾಗಿವೆ. ಸುಮಾರು ೩ ಸಾವಿರದ ೪೦೦ ಕ್ಕಿಂತ ಹೆಚ್ಚು ಗ್ರಂಥಗಳ ನಿರ್ಮಿತಿಯ ಪ್ರಕ್ರಿಯೆ ಹೆಚ್ಚು ವೇಗದಿಂದಾಗಲು ಅನೇಕರ ಸಹಾಯ ಬೇಕಿದೆ. ನಿಮಗೆ ಆಸಕ್ತಿ ಇರುವ ಮತ್ತು ಕ್ಷಮತೆಗನುಸಾರ ಲೇಖನಗಳ ಸಂಕಲನ, ಸಂರಚನೆ ಮತ್ತು ವಿವಿಧ ಭಾಷೆಗಳಲ್ಲಿ ಭಾಷಾಂತರ ಮಾಡುವುದು ಇತ್ಯಾದಿ ಗ್ರಂಥ ನಿರ್ಮಿತಿಯ ಕಾರ್ಯದಲ್ಲಿ ಕೈ ಜೋಡಿಸಬಹುದು.
ಈ ಸೇವೆ ಮಾಡಲು ಪೇಜ್‌ಮೇಕರ್, ಇನ್‌ಡಿಝೈನ್ ಅಥವಾ ಕೋರಲ್‌ಡ್ರಾ ಈ ಗಣಕೀಯ ಪ್ರಣಾಲಿಯ ಸಾಮಾನ್ಯ ಜ್ಞಾನವಿರುವುದು ಆವಶ್ಯಕವಿದೆ. ಅಲ್ಲದೇ ವಿವಿಧ ಭಾಷೆಗಳ ವ್ಯಾಕರಣದ ದೃಷ್ಟಿಯಿಂದ ಉತ್ತಮ ಜ್ಞಾನವಿರಬೇಕು. ಗ್ರಂಥವನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಮರಾಠಿ ಭಾಷೆಯ ಜ್ಞಾನವಿರಬೇಕು. ಇವೆಲ್ಲ ಸೇವೆಗಳನ್ನು ಸನಾತನದ ಆಶ್ರಮದಲ್ಲಿದ್ದು ಪೂರ್ಣವೇಳೆ ಅಥವಾ ಮನೆಯಲ್ಲಿದ್ದು ಕೆಲವು ಗಂಟೆ ಮಾಡಬಹುದು ! ಗ್ರಂಥ ನಿರ್ಮಿತಿ ಕಾರ್ಯದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಮುಂದಿನ ಮಾಹಿತಿಯನ್ನು ಸೌ. ಪ್ರಜ್ಞಾ ರಾವ್ (ಸಂಚಾರಿವಾಣಿ ಸಂಖ್ಯೆ ೯೩೪೧೬ ೩೫೯೧೭) ಇವರಿಗೆ ಅಂಚೆ ಅಥವಾ kannada.granth@gmail.com ಈ ವಿ-ಅಂಚೆಯ ಮೂಲಕ ಕಳುಹಿಸಿ.
ಅ. ಪೂರ್ಣ ಹೆಸರು, ವಿಳಾಸ, ವಯಸ್ಸು ಮತ್ತು ಶಿಕ್ಷಣ
ಆ. ಮನೆಯಲ್ಲಿ ಗಣಕಯಂತ್ರ ಇದೆಯೇ ?
ಇ. ವಿ-ಅಂಚೆ ವ್ಯವಸ್ಥೆ ಇದೆಯೇ ?
ಈ. ಯಾವ ಸೇವೆ (ಉದಾ. ಗಣಕಯಂತ್ರದಲ್ಲಿ ರಚನೆ, ಭಾಷಾಂತರ) ಮಾಡಲು ಇಚ್ಛೆ ಇದೆ ? ಈ ಬಗ್ಗೆ ಅನುಭವ ಇದೆಯೇ ?

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
(ಪರಾತ್ಪರ ಗುರು) ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳ ನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಳ್ಳಿರಿ !