ಐಸಿಸ್‌ನಿಂದ ಭಾರತದ ಸದಸ್ಯರಿಗೆ ಬಾಂಬ್ ತಯಾರಿಸುವ ಆನ್‌ಲೈನ್ ಪಾಠ

ನವ ದೆಹಲಿ : ಐಸಿಸ್ ಭಾರತದಲ್ಲಿನ ಸದಸ್ಯರಿಗೆ ಬಾಂಬ್ ತಯಾರಿಸುವ ಮಾಹಿತಿಯನ್ನು ತಲುಪಿಸಲು ಬಾಂಬ್ ಬನಾನೆ ಕಾ ಆಸಾನ್ ತರೀಕಾ ಎಂಬ ವಿಡಿಯೋವನ್ನು ಜಸ್ಟ್‌ಪೇಸ್ಟ್.ಇಟ್ ಈ ಜಾಲತಾಣದಲ್ಲಿ ಇಟ್ಟಿದೆ. ವಿಡಿಯೋವನ್ನು ಐಸಿಸ್‌ನಲ್ಲಿ ಸೇರಬಯಸುವ ಭಾರತೀಯ ಮುಸಲ್ಮಾನ ಯುವಕರಿಗೆ ತಲಪಿಸಲು ಕಿಕ್‌ನಂತಹ ಗುಪ್ತ ಸಂದೇಶ ಮಾಧ್ಯಮಗಳ ಆಧಾರ ವನ್ನು ಪಡೆದಿದೆ. ಇದರಲ್ಲಿ ಬೆಂಕಿಕಡ್ಡಿಯಿಂದ ಹೇಗೆ ಬಾಂಬ್ ತಯಾರಿಸಬಹುದೆಂಬ ಮಾಹಿತಿ ನೀಡಲಾಗಿದೆ. ರಾಷ್ಟ್ರೀಯ ತನಿಖಾ ದಳವು ಐಸಿಸ್‌ನೊಂದಿಗೆ ನಂಟಿರುವ ಸಂಶಯದಿಂದ ಬಂಧಿಸಿದವರ ವಿಚಾರಣೆಯಿಂದ ಈ ಮಾಹಿತಿಯು ಬೆಳಕಿಗೆ ಬಂದಿದೆ.

. ಬೆಂಗಳೂರಿನ ಒಂದು ಚರ್ಚ್‌ನ ಮೇಲೆ ೨೮ ಡಿಸೆಂಬರ್ ೨೦೧೪ ರಲ್ಲಿ ಮಾಡಿದ ಬಾಂಬ್ ಆಕ್ರಮಣದ ಪ್ರಕರಣದಲ್ಲಿ ಸಿಮಿಯ ಮಾಜಿ ಸದಸ್ಯಆಲಮ್‌ಬಾಝ ಆಫ್ರಿದಿಯನ್ನು ಬಂಧಿಸಲಾಗಿತ್ತು. ಅವನು ಬಾಂಬ್ ತಯಾರಿಸಿದ್ದೇನೆಂದು ಒಪ್ಪಿಕೊಂಡಿದ್ದಾನೆ. ಒಬ್ಬ ಅಜ್ಞಾತನು ಕಿಕ್ ಮೂಲಕ ಮಾಹಿತಿ ನೀಡಿದ್ದನೆಂದು ಆಲಮ್‌ಬಾಝ ವಿಚಾರಣೆಯ ಸಂದರ್ಭದಲ್ಲಿ ಹೇಳಿದನು.
. ಈ ಮಾಹಿತಿಯಲ್ಲಿ ಬಾಂಬ್‌ಸ್ಫೋಟ ಮಾಡಲು ಬೆಂಕಿಪೆಟ್ಟಿಗೆ, ಸಕ್ಕರೆ ಮತ್ತು ಇತರ ಮಿಶ್ರಣಗಳನ್ನು ಉಪಯೋಗಿಸಿದ್ದನು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಐಸಿಸ್‌ನಿಂದ ಭಾರತದ ಸದಸ್ಯರಿಗೆ ಬಾಂಬ್ ತಯಾರಿಸುವ ಆನ್‌ಲೈನ್ ಪಾಠ