ಕಾಶ್ಮೀರಕ್ಕೆ ಹಿಂತಿರುಗಿದ ೧೦೦ ನಿರಾಶ್ರಿತ ಹಿಂದೂ ಕುಟುಂಬಗಳು ಜಿಹಾದಿ ಉಗ್ರರು ಮತ್ತು ದೇಶದ್ರೋಹಿ ಮುಸಲ್ಮಾನರ ಭೀತಿಯಲ್ಲಿ ಜೀವಿಸುತ್ತಿದ್ದಾರೆ !

ಹಿಂದೂಗಳೇ, ನಿಮಗೆ ಇಂತಹ ಸ್ಥಿತಿಯನ್ನುಂಟು ಮಾಡಿದವರಿಗೆ ಪಾಠಕಲಿಸುವ ಧೈರ್ಯವು ಯಾವುದೇ ರಾಜಕೀಯ ಪಕ್ಷದಲ್ಲಿಲ್ಲ, ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಿದ್ಧರಾಗಿರಿ !
ಹಾಲ ಪುಲವಾಮಾ (ಜಮ್ಮು-ಕಾಶ್ಮೀರ) : ೨೦೦೮ ರಲ್ಲಿ ಮನಮೋಹನ ಸಿಂಗ್ ಇವರು ಪ್ರಧಾನಮಂತ್ರಿ ಇರುವಾಗ ಕೇಂದ್ರ ಸರಕಾರವು ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ೧ ಸಾವಿರದ ೬೦೦ ಕೋಟಿ ರೂಪಾಯಿಗಳ ಒಂದು ಯೋಜನೆಯನ್ನು ಹಮ್ಮಿಕೊಂಡಿತ್ತು. ಅದರಲ್ಲಿ ರಾಜ್ಯ ಸರಕಾರವು ೧ ಸಾವಿರದ ೫೦೦ ನಿರಾಶ್ರಿತರಿಗೆ ಸರಕಾರಿ ನೌಕರಿ ನೀಡಿ ಅವರ ನಿವಾಸಕ್ಕಾಗಿ ಮನೆಗಳನ್ನು ನಿರ್ಮಾಣ ಮಾಡಿತ್ತು. ಸದ್ಯ ಅಲ್ಲಿ ೧೦೦ ಹಿಂದೂಗಳು ತಮ್ಮ ಕುಟುಂಬದೊಂದಿಗೆ ಉಗ್ರವಾದಿಗಳ ಹಾಗೂ ದೇಶದ್ರೋಹಿ ಮುಸಲ್ಮಾನರ ಭೀತಿಯಲ್ಲಿ ಜೀವನ ಕಳೆಯುತ್ತಿದ್ದಾರೆ.

೧. ಈ ಸ್ಥಿತಿಯು ಸೆರೆಮನೆಯಲ್ಲಿರುವ ಹಾಗಿದೆ. ಅವರಿಗೆ ಮತ್ತು ಅವರ ಮಹಿಳೆ ಯರಿಗೆ-ಹುಡುಗಿಯರಿಗೆ ಮನೆಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಕಾಶ್ಮೀರದಲ್ಲಿ ಯಾರಾದರೂ ಒಬ್ಬ ಉಗ್ರವಾದಿಯ ಹತ್ಯೆಯಾದರೆ, ಈ ಹಿಂದೂಗಳ ಮನೆಗಳಿಗೆ ಕಲ್ಲುತೂರಾಟ ಆಗುತ್ತದೆ. ಈ ವಸತಿಯಲ್ಲಿ ಎತ್ತರವಾದ ಗೋಡೆಯ ಬೇಲಿಯಿದ್ದರೂ ಹೊರಗಿನಿಂದ ನೀಡುವ ಬೆದರಿಕೆಯಿಂದ ಎದೆ ನಡುಗುತ್ತದೆ.
೨. ಈ ಹಿಂದೂಗಳು ಮೊದಲು ಜಮ್ಮುವಿನಲ್ಲಿ ಒಂದು ಕೋಣೆಯ ತಾತ್ಕಾಲಿಕ ನಿವಾಸದಲ್ಲಿ ವಾಸಿಸುತ್ತಿದ್ದರು. ಈಗ ಕಾಶ್ಮೀರಕ್ಕೆ ಬಂದರೂ ಅವರಿಗೆ ತಾತ್ಕಾಲಿಕ ನಿವಾಸಸ್ಥಾನದಲ್ಲಿಯೇ ಉಳಿಯಬೇಕಾಗಿದೆ. ನಿರಾಶ್ರಿತರಾಗುವ ಮೊದಲಿನ ಅವರ ಮೂಲ ನಿವಾಸ ಅಲ್ಲಿಂದ ದೂರವಿದೆ. ಆದರೆ ಅಲ್ಲಿಗೆ ಭೇಟಿ ನೀಡುವ ಧೈರ್ಯ ಅವರಲ್ಲಿಲ್ಲ. ಆದ್ದರಿಂದ ಅವರ ಸ್ಥಿತಿ ದಿಗ್ಬಂಧನದಲ್ಲಿರುವ ಹಾಗಾಗಿದೆ.
೩. ವಸತಿಯ ಸಂಕೀರ್ಣದ ಹೊರಗೆ ಯುವಕರು ಭಾರತ್ ಕಾ ಜೋ ಸಾತ್ ದೇಗಾ, ವಹ ಗದ್ದಾರ್ ಹೈ, ಹೀಗೆ ಘೋಷಣೆ ನೀಡುತ್ತಿರುವಾಗ ಯಾರಿಗೆ ಸುರಕ್ಷಿತ ಎಂದು ಅಸಬಹುದು ?, ಎಂದು ಒಬ್ಬ ಹಿಂದೂವು ಈ ವಿಷಯದಲ್ಲಿ ಪ್ರಶ್ನಿಸಿದ್ದಾನೆ.
೪. ಹಿಂದೂಗಳಿಗೆ ಅವರ ಅಭಿಪ್ರಾಯವನ್ನು ಮಂಡಿಸಲು ಅವಕಾಶವಿಲ್ಲ, ಮಹಿಳೆಯರಿಗೆ ಪರ್ಯಾಯವಿಲ್ಲದೆ ಬುರ್ಖಾ ತೊಟ್ಟು ತಿರುಗಬೇಕಾಗುತ್ತದೆ. ಅಲ್ಲಿನ ದೇಶದ್ರೋಹಿಗಳು ಪಾಕಿಸ್ತಾನ ಮತ್ತು ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತಾರೆ; ಆದರೆ ಹಿಂದೂಗಳಿಗೆ ತಮ್ಮ ರಾಷ್ಟ್ರಪ್ರೇಮವನ್ನು ಪ್ರದರ್ಶಿಸಲು ಅವಕಾಶವಿಲ್ಲ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಶ್ಮೀರಕ್ಕೆ ಹಿಂತಿರುಗಿದ ೧೦೦ ನಿರಾಶ್ರಿತ ಹಿಂದೂ ಕುಟುಂಬಗಳು ಜಿಹಾದಿ ಉಗ್ರರು ಮತ್ತು ದೇಶದ್ರೋಹಿ ಮುಸಲ್ಮಾನರ ಭೀತಿಯಲ್ಲಿ ಜೀವಿಸುತ್ತಿದ್ದಾರೆ !