ಭೂಮಾತಾ ಬ್ರಿಗೇಡ್‌ನ ತೃಪ್ತಿ ದೇಸಾಯಿ ಇವರ ಹಾಜಿ ಅಲಿ ದರ್ಗಾ ಪ್ರವೇಶದ ಆಂದೋಲನಕ್ಕೆ ಮುಖಭಂಗ !

ಆಕ್ರಮಕ ಮುಸಲ್ಮಾನರ ಮುತ್ತಿಗೆಯ ನಂತರ ಪೊಲೀಸರು 
ತೃಪ್ತಿ ದೇಸಾಯಿಯವರನ್ನು ಅಜ್ಞಾತಸ್ಥಳಕ್ಕೆ ಒಯ್ದರು!
ಎಮ್‌ಐಎಮ್, ಮುಸ್ಲಿಮ್ ಲೀಗ್ ಮತ್ತು ಸಮಾಜವಾದಿ ಪಕ್ಷದಿಂದ ತೀವ್ರ ವಿರೋಧ !
ಹಿಂದೂಗಳೇ, ಮುಸಲ್ಮಾನರಿಂದ ಧರ್ಮಪ್ರೇಮವನ್ನು ಕಲಿಯಿರಿ ! ಹಿಂದೂಗಳ ಸಹನಶೀಲತೆಯಿಂದಾಗಿ ಹಾಗೂ ಸಂಘಟನೆಯ ಅಭಾವದಿಂದ ಧರ್ಮಪರಂಪರೆಗಳನ್ನು ಮುರಿದು ದೇವಸ್ಥಾನಗಳ ಗರ್ಭಗುಡಿಗೆ ಪ್ರವೇಶ ಮಾಡುವ ತೃಪ್ತಿ ದೇಸಾಯಿಗೆ ಮುಸಲ್ಮಾನರ ಆಕ್ರಮಕತೆಯಿಂದ ಹಾಗೂ ಸಂಘಟನೆಯಿಂದಾಗಿ ದರ್ಗಾದೊಳಗೆ ಪ್ರವೇಶ ಮಾಡದೆಯೇ ಪೊಲೀಸ್ ಭದ್ರತೆಯಲ್ಲಿ ಪಲಾಯನಗೈದು ಅಜ್ಞಾತ ಸ್ಥಳಕ್ಕೆ ಹೋಗಬೇಕಾಯಿತು !

ತೃಪ್ತಿ ದೇಸಾಯಿಗೆ ಪೊಲೀಸರ ಸಹಾಯದಿಂದ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ಸಾಧ್ಯ ವಾಯಿತು; ಆದರೆ ಪೊಲೀಸ್ ಭದ್ರತೆ ಇದ್ದರೂ ಅವರು ದರ್ಗಾದೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ, ತದ್ವಿರುದ್ಧ ಮುಸಲ್ಮಾನರ ಆಕ್ರಮಕತೆಯಿಂದ ಕಾನೂನು-ವ್ಯವಸ್ಥೆ ಹದಗೆಡಬಾರದೆಂದು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು. ಇದರ ಅರ್ಥ ಹಿಂದೂಗಳು ಕಾನೂನನ್ನು ಪಾಲಿಸುತ್ತಾರೆ, ಎಂಬುದು ಸ್ಪಷ್ಟವಾಗುತ್ತದೆ !
ಮುಂಬಯಿ : ಭೂಮಾತಾ ಬ್ರಿಗೇಡ್‌ನ ಧರ್ಮ ದ್ರೋಹಿ ಹಾಗೂ ಪ್ರಸಿದ್ಧಿಲೋಲುಪ ತೃಪ್ತಿ ದೇಸಾಯಿ ಹಾಜಿ ಅಲಿ ಸಬ್‌ಕೆ ಲಿಯೆ ಹೆಸರಿನಲ್ಲಿ ಆತುರದಿಂದ ಆಂದೋಲನ ಮಾಡುತ್ತಾ ಹಾಜಿ ಅಲಿ ದರ್ಗಾದಲ್ಲಿನ ಮಜಾರ್ ಮುಟ್ಟಲು ಏಪ್ರಿಲ್ ೨೮ ರ ಸಾಯಂಕಾಲ ದರ್ಗಾದ ಸಮೀಪ ಹೋದರು. ಆಗ ದರ್ಗಾದ ಪರಿಸರದಲ್ಲಿ ಬೃಹತ್ಪ್ರಮಾಣದಲ್ಲಿ ಸೇರಿದ ಎಮ್‌ಐಎಮ್, ಮುಸ್ಲಿಂ ಲೀಗ್ ಮತ್ತು ಸಮಾಜವಾದಿ ಪಕ್ಷದ ಮುಸಲ್ಮಾನ ಕಾರ್ಯಕರ್ತರು ಅತ್ಯಂತ ಆಕ್ರಮಕ ಆಂದೋಲನ ಮಾಡುತ್ತಾ ಹಾಗೂ ಘೋಷಣೆ ಕೂಗುತ್ತಾ ತೃಪ್ತಿ ದೇಸಾಯಿಯವರ ವಾಹನಕ್ಕೆ ಮುತ್ತಿಗೆ ಹಾಕಿದರು. ಆಗ ಅಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಕಾರಣ ಪೊಲೀಸರು ತೃಪ್ತಿ ದೇಸಾಯಿಯವರ ಜೀವಕ್ಕೆ ಅಪಾಯವಾಗಬಾರದೆಂದು ಅವರನ್ನು ವರ್ಲಿ ಮಾರ್ಗ ದಿಂದ ಅಜ್ಞಾತ ಸ್ಥಳಕ್ಕೆ ಒಯ್ದರು. ಅದರಿಂದಾಗಿ ಪೊಲೀಸ್ ಭದ್ರತೆಯಲ್ಲಿ ದರ್ಗಾದೊಳಗೆ ಹೋಗುವೆನು, ಎಂದು ಜಂಬಕೊಚ್ಚಿಕೊಳ್ಳುತ್ತಿದ್ದ ತೃಪ್ತಿ ದೇಸಾಯಿಯವರ ಆಂದೋಲನದ ಮುಖಭಂಗವಾಯಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭೂಮಾತಾ ಬ್ರಿಗೇಡ್‌ನ ತೃಪ್ತಿ ದೇಸಾಯಿ ಇವರ ಹಾಜಿ ಅಲಿ ದರ್ಗಾ ಪ್ರವೇಶದ ಆಂದೋಲನಕ್ಕೆ ಮುಖಭಂಗ !