ಕ್ರಿಕೆಟ್ ಪ್ರವಾಸದಲ್ಲಿರುವಾಗ ೬೫೦ ಯುವತಿಯರೊಂದಿಗೆ ಹಾಸಿಗೆ ಹಂಚಿಕೊಂಡೆ ! - ಟಿನೋ ಬೆಸ್ಟ್, ಕ್ರಿಕೆಟ್‌ಪಟು, ವೆಸ್ಟ್ ಇಂಡೀಸ್

 ಕ್ರಿಕೆಟ್‌ಪ್ರೇಮಿಗಳಿಗೆ ಆಟ ಬಿಟ್ಟು ಇಂತಹ ಅನೈತಿಕತೆ ಒಪ್ಪಿಗೆ ಇದೆಯೇ ?
ಭಾವೀ ಆಟಗಾರರು ಇದನ್ನು ಅನುಸರಿಸುವುದಿಲ್ಲ, ಎನ್ನುವುದಕ್ಕೆ ಏನು ಸಾಕ್ಷಿ ಹಾಗೂ ಈ ರೀತಿಯ ಅನೈತಿಕತೆ ಯನ್ನು ಬೇರೆ ಆಟಗಾರರು ಮಾಡುವುದಿಲ್ಲ, ಎಂದು ಹೇಳುವ ಧೈರ್ಯ ಯಾರಿಗಾದರೂ ಉಂಟೇ ?
ಈ ರೀತಿ ಅನೈತಿಕ ಕೃತ್ಯವನ್ನೆಸಗುವ ಆಟಗಾರರ ಮೇಲೆ ನಿರ್ಬಂಧ ಹೇರಬೇಕು !
ಬಾರ್ಬಾಡೋಸ್ (ವೆಸ್ಟ್ ಇಂಡೀಸ್) : ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರ ಟಿನೋ ಬೆಸ್ಟ್ ತನ್ನ ಆತ್ಮಚರಿತ್ರೆಯಲ್ಲಿ ಅವನು ಹೆಚ್ಚು ಕಡಿಮೆ ೬೫೦ ಯುವತಿಯರೊಂದಿಗೆ ಶಾರೀರಿಕ ಸಂಬಂಧ ಇಟ್ಟುಕೊಂಡಿರುವುದಾಗಿ ಹೇಳಿದ್ದಾನೆ. ಅವನ ಈ ಆತ್ಮಚರಿತ್ರೆ ಇಷ್ಟರಲ್ಲೇ ಪ್ರಸಿದ್ಧಗೊಳ್ಳಲಿದೆ. ಡಿಸೆಂಬರ್ ೨೦೧೩ ರಲ್ಲಿ ಕೊನೆಯ ಪಂದ್ಯವನ್ನಾಡಿದ ಟಿನೋ ಆಸ್ಟ್ರೇಲಿಯಾ, ಆಫ್ರಿಕಾ ಇತ್ಯಾದಿ ದೇಶಗಳ ಪ್ರವಾಸದಲ್ಲಿ ದ್ದಾಗ, ಅಲ್ಲಿನ ನಗರಗಳಲ್ಲಿ ತಿರುಗಾಡುವಾಗ ನೋಡಲು ಚೆನ್ನಾಗಿರುವ ಯುವತಿಯರೊಂದಿಗೆ ಸ್ನೇಹ ಬೆಳಸಿ ರಾತ್ರಿ ಅವರನ್ನು ಹೋಟೆಲ್‌ಗೆ ಕರೆದೊಯ್ಯುವ ದಿನಕ್ರಮ ಇಟ್ಟುಕೊಂಡಿರುವುದಾಗಿ ಹೇಳಿದ್ದಾನೆ.
ಟಿನೋ ಒಮ್ಮೊಮ್ಮೆ ೨ ರಿಂದ ೪ ಯುವತಿಯರನ್ನು ಒಟ್ಟೊಟ್ಟಿಗೆ ಕರೆದುಕೊಂಡು ಬರುತ್ತಿದ್ದ ಹಾಗೂ ಕೆಲವೊಮ್ಮೆ ತಂಡ
ದಲ್ಲಿರುವ ಬೇರೆ ಆಟಗಾರರನ್ನು ಅದರಲ್ಲಿ ಸೇರಿಸಿಕೊಂಡಿ ದ್ದಾಗಿ ಬರೆದಿದ್ದಾನೆ. ಒಮ್ಮೆ ಆಸ್ಟ್ರೇಲಿಯಾದಲ್ಲಿ ೧೧
ವಾರಗಳ ಪ್ರವಾಸದಲ್ಲಿರುವಾಗ ೪೦ ಯುವತಿಯರೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾಗಿ ಅವನು ಹೇಳಿಕೊಂಡಿದ್ದಾನೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕ್ರಿಕೆಟ್ ಪ್ರವಾಸದಲ್ಲಿರುವಾಗ ೬೫೦ ಯುವತಿಯರೊಂದಿಗೆ ಹಾಸಿಗೆ ಹಂಚಿಕೊಂಡೆ ! - ಟಿನೋ ಬೆಸ್ಟ್, ಕ್ರಿಕೆಟ್‌ಪಟು, ವೆಸ್ಟ್ ಇಂಡೀಸ್