ಸಂಶೋಧಕರಿಗೆ ಫಾಸ್ಟ್ ಫುಡ್ ಸೇವನೆಯಿಂದಾಗುವ ಹೊಸ ಗಂಭೀರ ದುಷ್ಪರಿಣಾಮಗಳು ಪತ್ತೆ !

ಈ ಸಂಶೋಧನೆಯನ್ನು ಅವಲೋಕಿಸಿ ಭಾರತ ಸರಕಾರ
ಫಾಸ್ಟ್ ಫುಡ್‌ನ್ನು ಶಾಶ್ವತವಾಗಿ ನಿಷೇಧಿಸಬೇಕೆಂಬ ಅಪೇಕ್ಷೆಯಿದೆ !
ಲಂಡನ್ : ಜಾರ್ಜ್ ವಾಶಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಮಾಡಿದ ಸಂಶೋಧನೆಯಲ್ಲಿ ಫಾಸ್ಟ್ ಫುಡ್‌ನಲ್ಲಿರುವ ರಾಸಾಯನಿಕಗಳಿಂದಾಗಿ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮವಾಗುತ್ತಿರುವುದರಿಂದ ಇಡೀ ಸಮಾಜದ ಆರೋಗ್ಯವೇ ಅಪಾಯದಲ್ಲಿದೆ, ಎಂದು ಕಂಡುಬಂದಿದೆ. ಈ ಫಾಸ್ಟ್‌ಫುಡ್‌ನಲ್ಲಿರುವ ಫಲೇಟ್ ಎಂಬ ರಾಸಾಯನಿಕವು ಸಾಬೂನು ಮತ್ತು ಸೌಂದರ್ಯ ಸಾಧನಗಳನ್ನು ಮೃದುಗೊಳಿಸಲು ಉಪಯೋಗಿಸಲಾಗುತ್ತದೆ; ಆದರೆ ಅದನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಅನೇಕ ಗಂಭೀರ ದುಷ್ಪರಿಣಾಮಗಳಾಗುತ್ತವೆ. ಅದರಲ್ಲಿ ಪುರುಷರ ಸಂತಾನಶಕ್ತಿ ಕಡಿಮೆಯಾಗುವ ಪರಿಣಾಮವೂ ಇದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಂಶೋಧಕರಿಗೆ ಫಾಸ್ಟ್ ಫುಡ್ ಸೇವನೆಯಿಂದಾಗುವ ಹೊಸ ಗಂಭೀರ ದುಷ್ಪರಿಣಾಮಗಳು ಪತ್ತೆ !