ಸಣ್ಣ ಮಕ್ಕಳ ಆಭರಣಗಳು : ಸಣ್ಣ ಮಕ್ಕಳ ಕರ್ಮೇಂದ್ರಿಯಗಳು ಅಕಾರ್ಯಕ್ಷಮವಾಗಿರುವುದರಿಂದ ಅವರ ಮೇಲಾಗುವ ಸೂಕ್ಷ್ಮದ ಹಲ್ಲೆಗಳನ್ನು ತಡೆಗಟ್ಟಲು ಮತ್ತು ಅವರ ಸುತ್ತಲೂ ರಕ್ಷಾಕವಚವನ್ನು ನಿರ್ಮಿಸಲು ಅವರಿಗೆ ಪದಕ ಮತ್ತು ಕಡಗಗಳನ್ನು ತೊಡಿಸಲಾಗುತ್ತದೆ !

ಮಗುವಿನ ಜನನವಾದಾಗ ಅದರ ಸೂಕ್ಷ್ಮ ಜ್ಞಾನೇಂದ್ರಿಯಗಳು ಸ್ವಲ್ಪ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ, ಆದರೆ ಸೂಕ್ಷ್ಮ ಕರ್ಮೇಂದ್ರಿಯಗಳು ಅಕಾರ್ಯಕ್ಷಮ ಸ್ಥಿತಿಯಲ್ಲಿರುತ್ತವೆ. ಮಗುವಿನ ವಯಸ್ಸು ಹೆಚ್ಚಾಗುತ್ತಾ ಹೋದಂತೆ ಅದರ ಸೂಕ್ಷ್ಮ ಕರ್ಮೇಂದ್ರಿಯಗಳೂ ಜಾಗೃತವಾಗಲು ಪ್ರಾರಂಭವಾಗುತ್ತವೆ. ಉತ್ತಮ ಆಧ್ಯಾತ್ಮಿಕ ಮಟ್ಟವಿರುವ ಯಾವುದಾದರೊಂದು ಮಗುವಿಗೆ ಬಾಲ್ಯದಲ್ಲಿಯೇ ಆಧ್ಯಾತ್ಮಿಕ ವಾತಾವರಣವು ಸಿಕ್ಕರೆ ಅದರ ಸೂಕ್ಷ್ಮ ಕರ್ಮೇಂದ್ರಿಯಗಳು ಬೇಗನೇ ಜಾಗೃತವಾಗುವ ಸಾಧ್ಯತೆಯಿರುತ್ತದೆ. ಚಿಕ್ಕ ಮಕ್ಕಳ ಸೂಕ್ಷ್ಮ ಕರ್ಮೇಂದ್ರಿಯಗಳು ಅಕಾರ್ಯಕ್ಷಮವಾಗಿರುವುದರಿಂದ ಅವರ ಮೇಲಾಗುವ ಸೂಕ್ಷ್ಮದ ಹಲ್ಲೆಗಳನ್ನು ತಡೆಗಟ್ಟಲು ಮತ್ತು ಅವರ ಸುತ್ತಲೂ ಈಶ್ವರೀ ಚೈತನ್ಯದ ರಕ್ಷಾಕವಚವನ್ನು ನಿರ್ಮಾಣಮಾಡಲು ಅವರಿಗೆ ಪದಕ, ಕಡಗ, ಸೊಂಟಕ್ಕೆ ಸರ, ಕಾಲುಗಳಿಗೆ ಬೆಳ್ಳಿಯ ಕಡಗ/ಗೆಜ್ಜೆ ಮುಂತಾದ ಆಭರಣಗಳನ್ನು ತೊಡಿಸಲಾಗುತ್ತದೆ. ಮುಂದೆ ಮಗುವಿನ ಬೆಳವಣಿಗೆಯಾಗಿ ಅದರ ಸೂಕ್ಷ್ಮ ಕರ್ಮೇಂದ್ರಿಯಗಳು ವಿಕಸಿತಗೊಂಡ ನಂತರ ಗಂಡುಮಕ್ಕಳು ಎಲ್ಲ ಆಭರಣಗಳನ್ನು ಧರಿಸುವ ಅವಶ್ಯಕತೆಯಿರುವುದಿಲ್ಲ - ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರು ಓರ್ವ ವಿದ್ವಾಂಸ ಅಂಕಿತನಾಮದಿಂದ ಬರೆಯುತ್ತಾರೆ. ೧೭.೬.೨೦೦೭ ರಾತ್ರಿ ೮.೪೧)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಣ್ಣ ಮಕ್ಕಳ ಆಭರಣಗಳು : ಸಣ್ಣ ಮಕ್ಕಳ ಕರ್ಮೇಂದ್ರಿಯಗಳು ಅಕಾರ್ಯಕ್ಷಮವಾಗಿರುವುದರಿಂದ ಅವರ ಮೇಲಾಗುವ ಸೂಕ್ಷ್ಮದ ಹಲ್ಲೆಗಳನ್ನು ತಡೆಗಟ್ಟಲು ಮತ್ತು ಅವರ ಸುತ್ತಲೂ ರಕ್ಷಾಕವಚವನ್ನು ನಿರ್ಮಿಸಲು ಅವರಿಗೆ ಪದಕ ಮತ್ತು ಕಡಗಗಳನ್ನು ತೊಡಿಸಲಾಗುತ್ತದೆ !