ಯೋಗದಿನದಂದು ‘ॐ’ ಉಚ್ಚಾರ ಕಡ್ಡಾಯವಲ್ಲ !

ಈ ವರ್ಷವೂ ಕೇಂದ್ರ ಸರಕಾರದ ಯು-ಟರ್ನ್ !
’ ಅನ್ನು ಯೋಗಾಸನದಿಂದ ಕೈಬಿಡುವುದೆಂದರೆ ಮನುಷ್ಯನ ದೇಹದಿಂದ ಚೈತನ್ಯವನ್ನು ಹೊರಗೆತೆಗೆದಂತಾಗುವುದು. ರಹಿತ ಯೋಗಾಸನವೆಂದರೆ ಕೇವಲ ಯೋಗಾಸನದ ಪ್ರದರ್ಶನವಾಗುವುದು. ಅದರಿಂದ ವ್ಯಕ್ತಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ! ಅಂತರರಾಷ್ಟ್ರೀಯ ಯೋಗ ದಿನದಂದು ಕೇಂದ್ರಸರಕಾರದ ಇಂತಹ ಯೋಗಾಸನದಿಂದ ಜನರಿಗೆ ಯಾವ ಪ್ರಯೋಜನವಾಗಲಿದೆ ?
ನವ ದೆಹಲಿ : ಜೂನ್ ೨೧ ರಂದು ಅಂತರರಾಷ್ಟ್ರೀಯ ಯೋಗದಿನದಂದು ಅಥವಾ ವೇದದಲ್ಲಿರುವ ಇತರ ಮಂತ್ರಗಳನ್ನು ಸಂಪೂರ್ಣವಾಗಿ ಐಚ್ಛಿಕವಾಗಿದೆ. ಹಾಗೆ ಉಚ್ಚಾರ ಮಾಡುವುದನ್ನು ಕಡ್ಡಾಯಗೊಳಿಸಲಾಗಿಲ್ಲವೆಂದು ಕೇಂದ್ರೀಯ ಆಯುಷ್ ಸಚಿವಾಲಯದ ಉಪ ಆಯುಕ್ತರಾದ ಅನಿಲ ಕುಮಾರ ಗನೇರಿವಾಲಾ ಇವರು ಸ್ಪಷ್ಟೀಕರಿಸಿದ್ದಾರೆ.
ಯೋಗ ದಿನದಂದು ಯೋಗದ ಶಿಬಿರ ಪ್ರಾರಂಭವಾಗುವ ಪೂರ್ವದಲ್ಲಿ ೪೫ ನಿಮಿಷ ಮೊದಲು ಮತ್ತು ವೇದಗಳಲ್ಲಿರುವ ಇತರ ಮಂತ್ರಗಳನ್ನು ಉಚ್ಛರಿಸುವ ಉಲ್ಲೇಖವಿರುವ ಕರಪತ್ರವನ್ನು ಕೇಂದ್ರ ಸರ್ಕಾರವು ಪ್ರಕಟಿಸಿತ್ತು. ಬಳಿಕ ಗನೇರಿವಾಲಾ ಇವರು ಈ ಕುರಿತು ಸ್ಪಷ್ಟೀಕರಣವನ್ನು ನೀಡಿ, ಉಚ್ಚರಿಸುವುದು ಯೋಗದ ಅವಿಭಾಜ್ಯ ಅಂಗವಾಗಿದೆ; ಆದರೆ ಅದನ್ನು ಅನಿವಾರ್ಯಗೊಳಿಸುವಂತೆ ಯಾವುದೇ ನಿಯಮಗಳಿಲ್ಲ. ಅಲ್ಲದೇ ಆಯುಷ್ ಸಚಿವಾಲಯವು ಯೋಗ ಶಿಬಿರದಲ್ಲಿ ೧೦ ನಿಮಿಷಗಳನ್ನು ಹೆಚ್ಚಿಸಿದ್ದು, ಅದರಲ್ಲಿ ಹೊಸ ಆಸನಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರತಿಪಕ್ಷಗಳಿಂದ ಭಾಜಪದ ಮೇಲೆ ಟೀಕಾಸ್ತ್ರ ಪ್ರಯೋಗ
ಯೋಗವು ಪ್ರಾಚೀನ ಭಾರತದ ಬಹುದೊಡ್ಡ ಕೊಡುಗೆಯಾಗಿದೆ. ಭಾಜಪ ಅದರ ಮಾಲೀಕರೇನಲ್ಲ. ಯೋಗವನ್ನು ಅಧಿಕ ವ್ಯಾಪಕಗೊಳಿಸುವ ಮತ್ತು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವ ಅವಶ್ಯಕತೆಯಿದೆ. ಆದರೆ ಭಾಜಪವು ಅದರಲ್ಲಿ ದ್ವೇಷವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆಯೆಂದು ಕಾಂಗ್ರೆಸ್ ವಕ್ತಾರರಾದ ಪಿ.ಸಿ. ಚಾಕೋ ಇವರು ಟೀಕಿಸಿದ್ದಾರೆ.(ಯೋಗವು ಪ್ರಾಚೀನ ಭಾರತದ ಕೊಡುಗೆಯಾಗಿರುವಾಗ ಉಚ್ಚಾರವನ್ನು ಕಡ್ಡಾಯಗೊಳಿಸಿದಲ್ಲಿ ತಪ್ಪೇನಿದೆ ? - ಸಂಪಾದಕರು)
ಸಂಯುಕ್ತ ಜನತಾ ದಳದ ಮುಖಂಡರಾದ ಕೆ.ಸಿ. ತ್ಯಾಗಿ ಯವರು ಮಾತನಾಡುತ್ತಾ, ಇದು ಭಾರತೀಯರ ಮೇಲೆ ಜಾತೀಯ ಕಾರ್ಯ ಸೂಚಿಯನ್ನು ಹೇರುವ ಪ್ರಯತ್ನವಾಗಿದ್ದು, ನಾವು ಅದನ್ನು ವಿರೋಧಿಸುತ್ತೇವೆ ಎಂದು ಹೇಳಿದರು. (ತ್ಯಾಗಿ ಇವರು ಯೋಗದಲ್ಲಿರುವ ನ ಮಹತ್ವವನ್ನೇ ಅರಿತಿಲ್ಲ ಅಥವಾ ಅವರು ಮುಸಲ್ಮಾನರನ್ನು ಓಲೈಸುವುದಕ್ಕಾಗಿ ವಿರೋಧಿಸುತ್ತಿದ್ದಾರೆಯೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಯೋಗದಿನದಂದು ‘ॐ’ ಉಚ್ಚಾರ ಕಡ್ಡಾಯವಲ್ಲ !