ನಿರಾಶ್ರಿತ ಕಾಶ್ಮೀರಿ ಪಂಡಿತರಿಗಾಗಿ ಏಕ್ ಭಾರತ ಆಂದೋಲನದ ಅಂಗವಾಗಿ ಬೆಂಗಳೂರಿನಲ್ಲಿ ಮಹಾಸಭೆ !

ಭಾಜಪ ಸರಕಾರವು ಕಾಶ್ಮೀರಿ ಪಂಡಿತರ ಪನೂನ ಕಾಶ್ಮೀರದ ಬೇಡಿಕೆಯನ್ನು ಒಪ್ಪದಿದ್ದರೆ ದೇಶದಾದ್ಯಂತ ಸಾವಿರಾರು ಕಾಶ್ಮೀರಗಳಾಗುವ ಅಪಾಯ ! - ಶ್ರೀ. ಪ್ರಮೋದ ಮುತಾಲಿಕ್
ದೇಶದಾದ್ಯಂತದ ಹಿಂದುತ್ವನಿಷ್ಠ ಸಂಘಟನೆಗಳ ಐಕ್ಯತೆಯ ಆವಿಷ್ಕಾರ !
ಕಾಶ್ಮೀರಕ್ಕಾಗಿ ಬಲಿದಾನ ಮಾಡಿರುವ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿರುವ
ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು
ಬೆಂಗಳೂರು : '೧೯೯೦ ರಲ್ಲಿ ಭಾರತದ ಕಾಶ್ಮೀರಿ ಹಿಂದೂಗಳು ಜಿಹಾದಿ ಭಯೋತ್ಪಾದಕರ ಆಕ್ರಮಣಗಳಿಗೆ ಮೊದಲಿಗೆ ಬಲಿಯಾದರು ಮತ್ತು ಅವರಿಗೆ ತಮ್ಮ ಜೀವ ಮತ್ತು ಮಹಿಳೆಯರ ಮಾನರಕ್ಷಣೆಗಾಗಿ ತಮ್ಮ ಭೂಮಿ ಯನ್ನು ತ್ಯಜಿಸಿ ಭಾರತದ ಇತರ ಪ್ರದೇಶ ಗಳಿಗೆ ಸ್ಥಳಾಂತರಗೊಂಡು ನಿರಾಶ್ರಿತರಂತೆ ಬದುಕಬೇಕಾಯಿತು. ಈ ೨೬ ವರ್ಷಗಳಲ್ಲಿ ದೇಶದಲ್ಲಿ ವಿವಿಧ ಪಕ್ಷಗಳ ಸರಕಾರಗಳು ಆಡಳಿತವನ್ನು ನಡೆಸಿದರೂ, ಯಾವುದೇ ಸರಕಾರವು ಕಾಶ್ಮೀರಿ ಪಂಡಿತರ ಸಮಸ್ಯೆಗಳನ್ನು ನಿವಾರಿಸಲು ಗಂಭೀರವಾಗಿ ಪ್ರಯತ್ನಿಸಲಿಲ್ಲ.
ಇದರಿಂದಾಗಿ ಕಾಶ್ಮೀರಿ ಪಂಡಿತರಿಗೆ ತಮ್ಮ ಸ್ವಂತ ನೆಲೆಯಾದ ಕಾಶ್ಮೀರಕ್ಕೆ ಮರಳಲು ಸಾಧ್ಯವಾಗಲಿಲ್ಲ; ಆದರೆ ಕಾಶ್ಮೀರದಲ್ಲಿರುವ ಜಿಹಾದಿ ಭಯೋತ್ಪಾದನೆ ಮಾತ್ರ ಇಂದು ದೇಶದಾದ್ಯಂತ ಹರಡಿದೆ. ಇದರಿಂದ ದೇಶದಾದ್ಯಂತ ಸಾವಿರಾರು ಕಾಶ್ಮೀರಗಳಾಗುತ್ತಿದ್ದು, ಅಲ್ಲಿಂದಲೂ ಹಿಂದೂಗಳನ್ನು ಬೇಗನೆ ಹೊರಗಟ್ಟುವ ಪರಿಸ್ಥಿತಿ ನಿರ್ಮಾಣವಾಗುವ ದಿನಗಳು ದೂರವಿಲ್ಲ. ಕೇವಲ ಬೆಂಗಳೂರಿನಂತಹ ಮಹಾನಗರದ ವಿಚಾರವನ್ನೇ ತೆಗೆದುಕೊಂಡರೆ, ಇಲ್ಲಿಯ ಸಶಸ್ತ್ರ ಪೊಲೀಸ ರಿಗೂ ಹಾಡುಹಗಲು ಸಹ ಪ್ರವೇಶಿಸಲು ಸಾಧ್ಯವಾಗದಂತಹ ಸುಮಾರು ೩೨ ಸ್ಥಳಗಳು ಬೆಂಗಳೂರಿನಲ್ಲಿವೆ. 'ಜನಸಾಮಾನ್ಯರು ಜಾಗೃತಗೊಂಡು ಅರ್ಬುದ ರೋಗದಂತೆ (ಕ್ಯಾನ್ಸರ್‌ನಂತೆ) ಹಬ್ಬುತ್ತಿರುವ ದೇಶದ್ರೋಹವನ್ನು ತಡೆಗಟ್ಟಬೇಕು' ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಇವರು ಮಾಹಿತಿಯನ್ನು ನೀಡಿದರು. ಕಾಶ್ಮೀರಿ ಪಂಡಿತರ ಸ್ವತಂತ್ರ ಕೇಂದ್ರಾಡಳಿತ ಪ್ರದೇಶದ ಪನೂನ ಕಾಶ್ಮೀರದ ಬೇಡಿಕೆಯನ್ನು ಸಮರ್ಥಿಸಲು ರಾಷ್ಟ್ರಜಾಗೃತಿ ಸಮಿತಿಯ ಪರವಾಗಿ ರಾಜಾಜಿನಗರದ ರಾಮಮಂದಿರ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡು ತ್ತಿದ್ದರು. ಈ ಸಭೆಯಲ್ಲಿ ದೇಶದಾದ್ಯಂತದ ವಿವಿಧ ಹಿಂದುತ್ವವಾದಿ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುತಾಲಿಕ್ ಇವರು ಮಾತನಾಡುತ್ತಾ, 'ದೇಶದ್ರೋಹಿ ಘೋಷಣೆಯನ್ನು ಕೂಗುವ ಪ್ರಕರಣದಡಿ ಕನ್ಹಯ್ಯ ಕುಮಾರ ಇವರಂತವರನ್ನು ಜೈಲಿಗಟ್ಟುವ ಬದಲು ನನ್ನಂತಹ ದೇಶಭಕ್ತನನ್ನು ಪೊಲೀಸರು ನಿರ್ಬಂಧಿಸಿದ್ದಾರೆ' ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ದೇಶದ್ರೋಹಿ ಚಟುವಟಿಕೆಗಳನ್ನು ನೋಡಿ ೮೫ ನೇ ವಯಸ್ಸಿನಲ್ಲಿಯೂ ನನ್ನ ರಕ್ತ ಕುದಿಯುತ್ತಿದೆ
- ಡಾ. ಎಂ. ಚಿದಾನಂದಮೂರ್ತಿ, ಹಿರಿಯ ಇತಿಹಾಸ ಸಂಶೋಧಕರು 
ಈ ಸಂದರ್ಭದಲ್ಲಿ ಹಿರಿಯ ಇತಿಹಾಸ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಯವರು ಮಾತನಾಡುತ್ತಾ, ಇಂದು ಭಾರತದಲ್ಲಿ ನಡೆಯುತ್ತಿರುವ ದೇಶದ್ರೋಹಿ ಚಟುವಟಿಕೆಗಳನ್ನು ಮತ್ತು ಬರಹಗಳನ್ನು ನೋಡಿ ೮೫ ನೇ ವರ್ಷ ದಲ್ಲಿಯೂ ನನ್ನ ರಕ್ತ ಕುದಿಯುತ್ತಿದೆ. ದೇಹಕ್ಕೆ ವಯಸ್ಸಾಗಿದೆ. ಆದರೆ ಮನಸ್ಸಿಗಲ್ಲ. (ಒಂದು ವೇಳೆ ಡಾ. ಎಂ. ಚಿದಾನಂದಮೂರ್ತಿಯವರಲ್ಲಿರುವಂತಹ ಧರ್ಮಾಭಿಮಾನ ಮತ್ತು ಧರ್ಮರಕ್ಷಣೆಯ ತಳಮಳ ಹಿಂದೂ ಯುವಕರಲ್ಲಿ ನಿರ್ಮಾಣವಾದರೆ ಹಿಂದೂ ರಾಷ್ಟ್ರ ನಿರ್ಮಾಣವಾಗಲು ಸಮಯ ತಗಲುವುದಿಲ್ಲ !- ಸಂಪಾದಕರು) ಇಡೀ ದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೊಳಿಸಬೇಕು. ಬ್ರಿಟಿಷರು ಘೋಷಿಸಿದ ರವಿವಾರದ ರಜೆಯನ್ನು ಸೋಮವಾರಕ್ಕೆ ಬದಲಾಯಿಸಬೇಕು. 'ಇಂಡಿಯಾ' ಎಂದು ಹೇಳದೇ 'ಭಾರತ' ಎಂದು ಕರೆಯಬೇಕು, ಎಂದರು.
ಪ್ರತ್ಯೇಕತಾವಾದಿಗಳ ಮುಖವಾಣಿಯಾದ ಪಿ.ಡಿ.ಪಿ.ಯೊಂದಿಗೆ ಬೆಳೆಸಿರುವ ಸಖ್ಯದಿಂದ ಭಾಜಪ ಹೊರಬರಬೇಕು ! - ಡಾ. ಅಗ್ನಿಶೇಖರ, ರಾಷ್ಟ್ರೀಯ ಸಮನ್ವಯಕರು, ಪನೂನ ಕಾಶ್ಮೀರ
ಈ ಸಭೆಗಾಗಿ ಜಮ್ಮುವಿನಿಂದ ಬಂದ ಪನೂನ ಕಾಶ್ಮೀರ ಸಂಘಟನೆಯ ರಾಷ್ಟ್ರೀಯ ಸಮನ್ವಯಕರಾದ ಡಾ. ಅಗ್ನಿಶೇಖರ ಇವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ವೇದಕಾಲದಿಂದಲೂ ಕಾಶ್ಮೀರ ಭಾರತದೊಂದಿಗೆ ಬೆಸೆದುಕೊಂಡಿದೆ. ಅಲ್ಲಿಯ ಭಾಷೆ, ಸಂಸ್ಕೃತಿ, ಜನಸಾಮಾನ್ಯರು, ಇತಿಹಾಸ ಎಲ್ಲವೂ ಭಾರತದ್ದಾಗಿದೆ. ಕರ್ನಾಟಕದ ರಾಜಕವಿ ಬಿಲ್ಹಣನು ಕಾಶ್ಮೀರಿಯಾಗಿದ್ದನು, ಹಾಗೆಯೇ ಕರ್ನಾಟಕ ಸಂಗೀತದ ಮಹತ್ವದ ಅಂಗವಾಗಿರುವ ಸಂಗೀತ ರತ್ನಾಕರ ಗ್ರಂಥವನ್ನು ಕಾಶ್ಮೀರದ ಶಾರಂಗದೇವ ಬರೆದಿದ್ದಾನೆ. ಹಾಗೆಯೇ ಆದಿ ಶಂಕರಾಚಾರ್ಯರು ಕಾಶ್ಮೀರದಲ್ಲಿರುವ ಶಾರದಾದೇವಿಯನ್ನು ದಕ್ಷಿಣ ಭಾರತಕ್ಕೆ ತಂದು ಅವಳನ್ನು ಶಾರದಾಂಬೆಯೆಂದು ಪೂಜಿಸಿದರು. ಹಾಗಾಗಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಕಾಶ್ಮೀರದಲ್ಲಿ ಹಿಂದೂಗಳು ವಾಸಿಸುವುದೆಂದರೆ ಭಾರತವೇ ಅಲ್ಲಿ ಇರುವಂತೆ ಆಗುವುದು. ಇಲ್ಲದಿದ್ದಲ್ಲಿ ಪ್ರತ್ಯೇಕತಾವಾದಿಗಳ ಷಡ್ಯಂತ್ರ ಬೇರೆಯೇ ಆಗಿದೆ. ಆದುದರಿಂದ ಎಲ್ಲ ಭಾರತೀಯರು ಕಾಶ್ಮೀರಿ ಪಂಡಿತರನ್ನು ಸಮರ್ಥಿಸಲು ಒಂದಾಗಬೇಕು. ಹಿಂದಿನ ಸರಕಾರಗಳಿಂದ ನಮಗೆ ಯಾವುದೇ ಅಪೇಕ್ಷೆಗಳಿರ ಲಿಲ್ಲ. ಆದರೆ ಈಗ ಪಿಡಿಪಿಯೊಂದಿಗೆ ಸಖ್ಯ ಬೆಳೆಸಿ ರುವ ಭಾಜಪದ ನಡುವಳಿಕೆ ಸೂಕ್ತವಲ್ಲ. ಪಿಡಿಪಿ ಸಹಯೋಗದೊಂದಿಗೆ ಸರಕಾರ ರಚಿಸಲು ೨ ತಿಂಗಳ ಅವಧಿ ಏಕೆ ಬೇಕಾಯಿತು ? ಈ ಕುರಿತು ಜಮ್ಮೂ-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಬಹಿರಂಗವಾಗಿ 'ನಮಗೆ ಪ್ರತ್ಯೇಕತಾವಾದಿ ಗಳೊಂದಿಗೆ ಚರ್ಚಿಸಿ ಅವರ ಸಮ್ಮತಿಯನ್ನು ಪಡೆಯಲು ಈ ವಿಳಂಬವಾಯಿತು' ಎಂದು ತಿಳಿಸಿದ್ದರು. ಇದರಿಂದ ಪ್ರತ್ಯೇಕತಾವಾದಿಗಳ ಮುಖವಾಣಿಯಾಗಿರುವ ಪಿಡಿಪಿಯೊಂದಿಗಿನ ಸಖ್ಯವನ್ನು ಭಾಜಪ ಸರಕಾರವು ಮುಂದು ವರಿಸಬಾರದು. ಇಂದಿನ ವಿದ್ಯಮಾನದಲ್ಲಿ ಸರಕಾರದ ಅಜೆಂಡಾ ಆಫ್ ಅಲಾಯನ್ಸ್ (ಸಹಯೋಗದ ಸೂತ್ರ) ಇದನ್ನು ನಾವು ಅಜೆಂಡಾ ಆಫ್ ಬಿಟ್ರೇಯಲ್ (ವಿಶ್ವಾಸಘಾತದ ಸೂತ್ರ) ಎಂದು ತಿಳಿಯುತ್ತೇವೆ. ಜಮ್ಮೂ-ಕಾಶ್ಮೀರದಲ್ಲಿರುವ ಭಾಜಪ- ಪಿಡಿಪಿ ಸಂಯುಕ್ತ ಸರಕಾರವು ಕಾಶ್ಮೀರಿ ಪಂಡಿತರನ್ನು ನಾವು ಅವರ ಮೂಲ ನೆಲೆಗೆ ಕಳುಹಿಸಿ ಕ್ರಮೇಣ ಅವರನ್ನು ಕಾಶ್ಮೀರತೆ ಯಲ್ಲಿ ಬೆರೆಸೋಣ ಎನ್ನುತ್ತಿದ್ದಾರೆ. ಇದು ಒಂದು ರೀತಿ ನಮ್ಮನ್ನು ಬಹುಸಂಖ್ಯಾತ ಭಯೋತ್ಪಾದಕರಿರುವ ವಾತಾವರಣದಲ್ಲಿ ದಬ್ಬಿ ನಮ್ಮ ಧರ್ಮ-ಪರಂಪರೆ ನಾಶ ಗೊಳಿಸುವ ಯತ್ನವಾಗಿದೆ. ಏಕೆಂದರೆ ಕಾಶ್ಮೀರಿಯತೆಯೆಂದು ಪ್ರತ್ಯೇಕ ವಾಗಿ ಯಾವುದೂ ಇಲ್ಲ. ಇಂದು ಕಾಶ್ಮೀರ ದಲ್ಲಿರುವ ಎನ್..ಟಿ. ರಾಷ್ಟ್ರಪ್ರೇಮಿ ವಿದ್ಯಾರ್ಥಿಗಳಿಗೆ ಪಾಕಿಸ್ತಾನ ಜಿಂದಾಬಾದ ಘೋಷಣೆಯನ್ನು ವಿರೋಧಿಸಿದಕ್ಕಾಗಿ ಹಾಗೆಯೇ ಭಾರತಮಾತೆಯ ಜಯಘೋಷ ಮಾಡಿದ್ದಕ್ಕಾಗಿ ಅವರನ್ನು ಅನೇಕ ರೀತಿ ಯಲ್ಲಿ ಹಿಂಸಿಸಲಾಯಿತು. ಹೀಗಿರುವಾಗ ಭಾರತಮಾತೆಯ ಭಕ್ತರಾಗಿರುವ ನಾವು ಹೇಗೆ ಸುರಕ್ಷಿತವಾಗಿ ವಾಸಿಸಲು ಸಾಧ್ಯ; ಆದ್ದರಿಂದಲೇ ನಮಗೆ ಕೇಂದ್ರಾಡಳಿತ ಪ್ರದೇಶದ ಕಲಂ ೩೭೦ ಇಲ್ಲದಿರುವ ಪನೂನ ಕಾಶ್ಮೀರ ಬೇಕಾಗಿದೆ.
ಈ ಸಭೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆ ಇವರು, ಪನೂನ ಕಾಶ್ಮೀರದ ಸಮರ್ಥನೆಯಲ್ಲಿ ಪ್ರಾರಂಭಿಸಲಾಗಿರುವ 'ಏಕ್ ಭಾರತ ಆಂದೋಲನ' ಇದನ್ನು ವಿವರಿಸಿ ಎಲ್ಲರೂ ಸಹಭಾಗಿಗಳಾಗುವಂತೆ ಆಹ್ವಾನಿಸಿದರು.
ಈ ಸಭೆಯಲ್ಲಿ ಬೆಂಗಳೂರು ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ. ಅಮೃತೇಶ ಎನ್.ಪಿ., ಶ್ರೀ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿಗಳು, ಹಿರಿಯ ನ್ಯಾಯವಾದಿಗಳಾದ ಎಸ್. ದೊರೆರಾಜು, ಹಿಂದೂ ಮಕ್ಕಳ ಕಚ್ಛೀಯ ಶ್ರೀ. ಅರ್ಜುನ ಸಂಪತ್, ಶಿವಸೇನೆಯ ತಮಿಳುನಾಡಿನ ರಾಜ್ಯ ಪ್ರಮುಖರಾದ ಶ್ರೀ. ರಾಧಾಕೃಷ್ಣನ್, ಶಿವಸೇನೆಯ ತೇಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯ ಪ್ರಮುಖರಾದ ಶ್ರೀ ಟಿ.ಎನ್. ಮುರಾರಿ, ಫೋರಂ ಫಾರ್ ಹಿಂದೂ ಜಸ್ಟೀಸ್ ವಕೀಲರಾದ ಶ್ರೀ. ಹರಿಶಂಕರ ಜೈನ್, ಓಡಿಶಾದ ಭಾರತ ರಕ್ಷಾ ಮಂಚ್‌ನ ಶ್ರೀ. ಮುರಳಿ ಶರ್ಮಾ ಮತ್ತು ಅನಿಲ ಧೀರ, ಅಲ್ಲದೇ ಪನೂನ ಕಾಶ್ಮೀರದ ಯುವ ಶಾಖೆಯ ಶ್ರೀ. ರಾಹುಲ ಕೌಲ್ ಮತ್ತು ಬೆಂಗಳೂರಿನ ಕಾಶ್ಮೀರಿ ಹಿಂದೂಗಳ ಮುಖಂಡರಾದ ಶ್ರೀ. ಆರ್.ಕೆ. ಮಟ್ಟೂ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಿರಾಶ್ರಿತ ಕಾಶ್ಮೀರಿ ಪಂಡಿತರಿಗಾಗಿ ಏಕ್ ಭಾರತ ಆಂದೋಲನದ ಅಂಗವಾಗಿ ಬೆಂಗಳೂರಿನಲ್ಲಿ ಮಹಾಸಭೆ !